ಲೆಬನಾನ್, ಸೆ.30– ಬೈರುತ್‌ನಲ್ಲಿ ಹಿಜ್ಬುಲ್ ನಾಯಕ ಹಸನ್ ಹತ್ಯೆ ನಂತರ ದೇಶದಲ್ಲಿ ಜನಾಂಗೀಯ ಹಿಂಸಾಚಾರ ನಡೆದಿದ್ದು, ಕಂಡಕಂಡಲ್ಲಿ ಜನರನ್ನು ಕೊಲ್ಲಲಾಗುತ್ತಿದೆ. ಸುನಿ ಮುಸ್ಲಿಂ ಸಮುದಾಯ ಈಗ ಹಿಜ್ಬುಲ್ ಬೆಂಬಲಿಗರನ್ನು ನಡುರಸ್ತೆಯಲ್ಲೇ ಗುಂಡು ಹಾರಿಸಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡುತ್ತಿದ್ದಾರೆ. ದೇಶದಲ್ಲಿ ಹರಾಜುಕತೆ ಸೃಷ್ಟಿಯಾಗಿದ್ದು, ಹಲವಾರು ಮನೆಗಳಿಗೆ ಬೆಂಕಿ ಹಚ್ಚಲಾಗಿದೆ.
ಶಸಾ್ತ್ರಸ್ತ್ರಗಳನ್ನು ಹಿಡಿದು ರಸ್ತೆಯಲ್ಲಿ ಹಿಜ್ಬುಲ್ ಬೆಂಬಲಿಗರನ್ನು ಕಂಡಕಂಡಲ್ಲಿ ಹೊಡೆದು ಹಾಕಿ ರಕ್ತದ ಹೊಳೆ ಹರಿಸಿದ್ದಾರೆ. ಈಗಾಗಲೇ ಹಿಜ್ಬುಲ್‌ನ ಉಗ್ರರನ್ನು ಸದೆಬಡೆಯದೆ ವಿರಮಿಸುವುದಿಲ್ಲ ಎಂದು ಶಪತಮಾಡುವ ನಡುವೆಯೇ ದೇಶದಲ್ಲಿ ಹಿಂಸಾಚಾರ ಉಲ್ಬಣಗೊಂಡಿದ್ದು, ನೂರಾರು ಮಂದಿ ಬಲಿಯಾಗಿದ್ದಾರೆ.
ಹಲವರು ಹಿಜ್ಬುಲ್ ಸಮುದಾಯದವರು ಜೀವ ಭಯದಲ್ಲಿ ದೇಶವನ್ನು ತೊರೆದು ನೆರೆಯ ರಾಷ್ಟ್ರಗಳಿಗೆ ಫಲಾಯನ ಮಾಡುತ್ತಿದ್ದಾರೆ. ಲೆಬ್ನಾನ್‌ನ ಹಲವು ನಗರಗಳು ಈಗ ಹಿಂಸಾಚಾರ ನಡೆಯುತ್ತಿದ್ದು, ಇದನ್ನು ತಡೆಯಲು ಸಾಧ್ಯವಾಗದಂತ ಪರಿಸ್ಥಿತಿ ನಿರ್ಮಾಣವಾಗುತ್ತಿದೆ.
ಹಲವರು ಬೃಹತ್ ಕಟ್ಟಡಗಳನ್ನು ಕ್ಷಿಪಣಿ ಮೂಲಕ ಇಸ್ರೇಲ್ ವಾಯುಪಡೆ ಹೊಡೆದುರುಳಿಸಲಾಗುತ್ತಿದ್ದು, ಒಟ್ಟಾರೆ ಲೆಬ್ನಾನ್ ಯುದ್ಧ ಪೀಡಿತ ರಾಷ್ಟ್ರವಾಗಿ ಮಾರ್ಪಟ್ಟಿದೆ.
ಮಹಿಳೆ ಮಕ್ಕಳನ್ನು ನೋಡದೆ ಹಿಜ್ಬುಲ್ ಸಮುದಾಯದ ಮಾರಣ ಹೋಮವೇ ನಡೆಯುತ್ತಿದೆ. ಮಧ್ಯ ಪ್ರಾಚ್ಚದಲ್ಲಿ ಈಗ ಸುನಿ ಮತ್ತು ಶಿಯ ನಡುವೆ ಏರ್ಪಟ್ಟಿರುವ ಈ ಸಂಘರ್ಷ ಪಕ್ಕದ ರಾಷ್ಟ್ರಗಳಿಗೂ ಹಬ್ಬುವ ಸಾಧ್ಯತೆ ಇದೆ.ಪಾಕಿಸ್ತಾನ್, ಆಫ್ಘಾನಿಸ್ತಾನ್ ಗಡಿಗಳಲ್ಲೂ ಕೂಡ ಹಲವು ದಿನಗಳಿಂದ ಸಂಘರ್ಷ ನಡೆಯುತ್ತಿದ್ದು, ಅಲ್ಲೂ ಕೂಡ ಹಲವರು ಬಲಿಯಾಗಿದ್ದಾರೆ.