ಬೆಳಗಾವಿ,ಅ.27- ಧಮ್ಮು, ತಾಕತ್ತು ಇದ್ದರೆ ನಗರಾಭಿವೃದ್ದಿ ಸಚಿವ ಭೈರತಿ ಸುರೇಶ್ ಅವರು, ನಾನು ಇಂಧನ ಮಂತ್ರಿಯಾಗಿದ್ದ ವೇಳೆ ಅಕ್ರಮ ನಡೆಸಿದ್ದರೆ ದಾಖಲೆಗಳನ್ನು ಬಿಡುಗಡೆ ಮಾಡಲಿ ಎಂದು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಸವಾಲು ಹಾಕಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಇಂಧನ ಸಚಿವೆಯಾಗಿದ್ದಾಗ ವೇಳೆ ಸಾಕಷ್ಟು ಅಕ್ರಮ ನಡೆಸಿದ್ದೇನೆ. ಅದರ ದಾಖಲೆಗಳನ್ನು ಕಲೆ ಹಾಕುತ್ತಿರುವುದಾಗಿ ಸಚಿವ ಸುರೇಶ್ ಹೇಳಿದ್ದಾರೆ. ನಿಮದೇ ಪಕ್ಷ ಅಧಿಕಾರದಲ್ಲಿದೆ. ಅಧಿಕಾರಿಗಳು ನಿಮವರೇ ತಡವೇಕೆ? ದಾಖಲೆಗಳನ್ನು ಬಿಡುಗಡೆ ಮಾಡಿ ಎಂದು ಸವಾಲು ಹಾಕಿದರು.
ಈ ವಿಚಾರವಾಗಿ ಬೆಳಗಾವಿಯಲ್ಲಿ ಮಾತನಾಡಿದ ಅವರು, ಭೈರತಿ ಸುರೇಶ ಮುಡಾದ ಸಾವಿರಾರು ಫೈಲ್‌್ಸ ತಂದು ಸುಟ್ಟು ಹಾಕಿದರು. ಅದರ ಬಗ್ಗೆ ನಾನು ಧ್ವನಿ ಎತ್ತಿದೆ. ಧ್ವನಿ ಎತ್ತಿದ ತಕ್ಷಣ ನನ್ನ ಬಗ್ಗೆ ಬೇರೆ ಬೇರೆ ಆರೋಪ ಮಾಡುತ್ತಿದ್ದಾರೆ ಎಂದು ದೂರಿದ್ದಾರೆ.
ನಾನು ಯಾವುದೇ ಭ್ರಷ್ಟಾಚಾರ ಮಾಡಿಲ್ಲ, ಮಾಡುವುದೂ ಇಲ್ಲ. ನನ್ನ ವಿರುದ್ಧ ದಾಖಲೆ ಬಹಿರಂಗಕ್ಕೆ ಪೊನ್ನಣ್ಣನಿಗೆ ನೇಮಕ ಮಾಡಲಾಗಿದೆ. ಪೊನ್ನಣ್ಣನಿಗೆ ವಿದ್ಯುತ್ ಇಲಾಖೆ ಏನ್ ಸಂಬಂಧ ಅಂದರೇ ಏನ್ ಮಾಡಲು ಹೊರಟ್ಟಿದ್ದೀರಿ ನೀವು ಫೇಕ್ ಫೈಲ್ ಕ್ರಿಯೆಟ್ ಮಾಡಲು ಪೊನ್ನಣ್ಣನಿಗೆ ಜವಾಬ್ದಾರಿ ಕೊಟ್ಟಿದ್ದೀರಿ! ಎಂದು ಕಿಡಿಕಾರಿದರು.
ಪೊನ್ನಣ್ಣ ಇರುವುದು ಸಿಎಂ ಕಾನೂನು ಸಲಹೆಗಾರರಾಗಿರಲು. ಅದರಲ್ಲೂ ಭ್ರಷ್ಟಾಚಾರ ಮಾಡಲು ಹೋರಟ್ಟಿದ್ದೀರಿ. ನಿಮ ಬಳಿ ಇರುವ ದಾಖಲೆ ತಕ್ಷಣ ಹೊರಗೆ ಹಾಕಿ ಎಂದು ಸವಾಲು ಹಾಕಿದರು.
ನಿಮಗೆ ಈಗ ಸಂಕಷ್ಟ ಶುರುವಾಗಿದೆ. ಮೈಸೂರುನಿಂದ ಫೈಲ್ ತಂದಿದ್ದು ಸತ್ಯ, ಸುಟ್ಟು ಹಾಕಿದ್ದು ಸತ್ಯ. ಮುಡಾ ಬಗ್ಗೆ ತನಿಖೆ ಆರಂಭವಾಗಿದೆ. ತನಿಖೆಗೆ ಕೇಂದ್ರದ ಸಂಸ್ಥೆಗಳು ಎಂಟ್ರಿ ಆಗಿವೆ. ಈ ಭಯದಿಂದ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ ಎಂದು ಆರೋಪಿಸಿದ್ದಾರೆ.
ಇನ್ನು ರಾಜ್ಯದಲ್ಲಿ ನಡೆಯುತ್ತಿರುವ ಮೂರು ಕ್ಷೇತ್ರಗಳ ಉಪಚುನಾವಣೆ ಕುರಿತು ಮಾತನಾಡಿದ ಅವರು, ಮೂರು ಕ್ಷೇತ್ರಗಳಲ್ಲಿ ಉಪಚುನಾವಣೆ ನಡೆಯುತ್ತಿದೆ. ಮೂರೂ ಕ್ಷೇತ್ರದಲ್ಲಿ ಎನ್‌ಡಿಐ ಅಭ್ಯರ್ಥಿಗಳು ಗೆಲ್ಲಲಿದ್ದಾರೆ. ನಮ ಶಕ್ತಿ ಇರೋದ ಬೂತ್ ಮಟ್ಟದಲ್ಲಿ, ನಮ ಮತ ಇರೋದು ಬೂತ್ ಗಳಲ್ಲಿ, ಬೂತ್ ಮಟ್ಟದಲ್ಲಿ ವಾತಾವರಣ ಚನ್ನಾಗಿದೆ. ನಾವು ಮೂರು ಕ್ಷೇತ್ರದಲ್ಲಿ ಗೆದ್ದೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಶೋಭಾ ಕರಂದ್ಲಾಜೆ ಅವರು ನನ್ನ ಮೇಲೆ ಆರೋಪ ಮಾಡಿದ್ದಾರೆ. ಬಿಜೆಪಿ ಅಧಿಕಾರ ಅವಧಿಯಲ್ಲಿ ಅವರು ಏನೆಲ್ಲಾ ಮಾಡಿದ್ದಾರೆ? ಇಂಧನ ಸಚಿವರಾಗಿದ್ದ ಶೋಭಾ ಕರಂದ್ಲಾಜೆಯವರು ಎಷ್ಟು ಭ್ರಷ್ಟಾಚಾರ ಮಾಡಿದ್ದಾರೆ? ಈ ಸಂಬಂಧ ಪೊನ್ನಣ್ಣ ಅವರಿಗೆ ಇದರ ಎಲ್ಲಾ ದಾಖಲೆ ಸಂಗ್ರಹಿಸಲು ಹೇಳಿದ್ದೇನೆ. 15 ದಿನ ಬಿಟ್ಟು ಅವರ ಭ್ರಷ್ಟಾಚಾರದ ದಾಖಲೆ ಬಿಡುಗಡೆ ಮಾಡುತ್ತೇವೆ ಎಂದು ನಿನ್ನೆ ಭೈರತಿ ಸುರೇಶ್ ಹೇಳಿದ್ದರು.