Friday, November 22, 2024
Homeರಾಷ್ಟ್ರೀಯ | Nationalಶೂಟರ್‌ಗಳಿಗೆ ತಮ್ಮ ಗುರಿ ಸಲ್ಮಾನ್ ಖಾನ್‌ ನಿವಾಸ ಎಂದು ಗೊತ್ತಾಗಿದ್ದು ಕೊನೆ ಕ್ಷಣದಲ್ಲಂತೆ

ಶೂಟರ್‌ಗಳಿಗೆ ತಮ್ಮ ಗುರಿ ಸಲ್ಮಾನ್ ಖಾನ್‌ ನಿವಾಸ ಎಂದು ಗೊತ್ತಾಗಿದ್ದು ಕೊನೆ ಕ್ಷಣದಲ್ಲಂತೆ

ಮುಂಬೈ,ಮೇ.9- ಬಾಲಿವುಡ್‌ ಸೂಪರ್‌ಸ್ಟಾರ್‌ ಸಲ್ಮಾನ್ ಖಾನ್‌ ಅವರ ಮುಂಬೈನ ನಿವಾಸದ ಹೊರಗೆ ಗುಂಡಿನ ದಾಳಿ ನಡೆಸಿದ ಆರೋಪದಲ್ಲಿ ಬಂಧಿಸಲಾದ ಇಬ್ಬರಿಗೆ ಪನ್ವೇಲ್‌ನಲ್ಲಿರುವ ಅವರ ಬಾಡಿಗೆ ಮನೆಗೆ ಶಸ್ತ್ರಾಸ್ತ್ರಗಳು ಮತ್ತು ಗುಂಡುಗಳನ್ನು ತಲುಪಿಸುವವರೆಗೆ ಗುರಿಯ ಬಗ್ಗೆ ತಿಳಿದಿರಲಿಲ್ಲ ಎಂದು ಪೊಲೀಸ್‌‍ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಆಪಾದಿತ ಶೂಟರ್‌ಗಳಾದ ಬಿಹಾರದ ಸಾಗರ್‌ ಪಾಲ್‌ ಮತ್ತು ವಿಕ್ಕಿ ಗುಪ್ತಾ ಅವರನ್ನು ಗುಜರಾತ್‌ನಿಂದ ಏಪ್ರಿಲ್‌ 14 ರಂದು ಉನ್ನತ ಮಟ್ಟದ ಬಾಂದ್ರಾದ ಗ್ಯಾಲಕ್ಸಿ ಅಪಾರ್ಟ್‌ಮೆಂಟ್‌ನಲ್ಲಿರುವ ಖಾನ್‌ ಅವರ ಮನೆಯ ಹೊರಗೆ ಗುಂಡು ಹಾರಿಸಿದ 48 ಗಂಟೆಗಳ ಒಳಗೆ ಬಂಧಿಸಲಾಗಿತ್ತು.

ಮುಂಬೈ ಪೊಲೀಸ್‌‍ ಕ್ರೈಂ ಬ್ರಾಂಚ್‌ನ ವಿಚಾರಣೆಯ ಸಮಯದಲ್ಲಿ, ಪಾಲ್‌ ಮತ್ತು ಗುಪ್ತಾ ಅವರಿಗೆ ಜೈಲಿನಲ್ಲಿರುವ ದರೋಡೆಕೋರ ಲಾರೆನ್‌್ಸ ಬಿಷ್ಣೋಯ್‌ ಅವರ ಕಿರಿಯ ಸಹೋದರ ಅನೋಲ್‌ ಬಿಷ್ಣೋಯ್‌ ಅವರು ಈ ಕೆಲಸವನ್ನು ನೀಡಿದ್ದರು. ಆದರೆ ಶಸ್ತ್ರಾಸ್ತ್ರಗಳನ್ನು ತಲುಪಿಸುವವರೆಗೆ ಸಲಾನ್‌ ಖಾನ್‌ ಅವರ ನಿವಾಸದ ಮೇಲೆ ಗುಂಡು ಹಾರಿಸಬೇಕೆಂದು ಅವರಿಗೆ ತಿಳಿದಿರಲಿಲ್ಲ ಎಂದು ಅಧಿಕಾರಿ ಹೇಳಿದರು.

ಪಾಲ್‌ ಅವರನ್ನು ಲಾರೆನ್ಸ್ ಬಿಷ್ಣೋಯ್‌ ಗ್ಯಾಂಗ್‌ನಲ್ಲಿ ಅಂಕಿತ್‌ ಎಂಬಾತ ನೇಮಿಸಿಕೊಂಡಿದ್ದಾನೆ. ಪಾಲ್‌ ಮತ್ತು ಅಂಕಿತ್‌ ಒಟ್ಟಿಗೆ ಕ್ರಿಕೆಟ್‌ ಆಡುತ್ತಿದ್ದರು ನಂತರ ಆತ ಪಾಲ್‌ನನ್ನು ವಾಟ್ಸಾಪ್‌ ಗ್ರೂಪ್‌ಗೆ ಸೇರಿಸಿದ್ದ.ಕೆಲವು ದಿನಗಳ ನಂತರ, ಗ್ಯಾಂಗ್‌ಗೆ ಇನ್ನೂ ಒಬ್ಬ ವ್ಯಕ್ತಿಯ ಅಗತ್ಯವಿರುವ ನಿಯೋಜನೆಯ ಬಗ್ಗೆ ಅಂಕಿತ್‌ ಪಾಲ್‌ಗೆ ತಿಳಿಸಿದರು. ನಂತರ ಎರಡನೇ ಶೂಟರ್‌ ಗುಪ್ತಾ ಅವರನ್ನು ಗುಂಪಿಗೆ ಸೇರಿಸಲಾಯಿತು.

ಅಂಕಿತ್‌ ಟಾಸ್ಕ್‌ ಪೂರ್ಣಗೊಳಿಸಲು ಮುಂಬೈಗೆ ಹೋಗುವಂತೆ ಇಬ್ಬರಿಗೆ ಹೇಳಿದನು ಮತ್ತು ಪ್ರತಿಯಾಗಿ ಉತ್ತಮ ಮೊತ್ತದ ಭರವಸೆ ನೀಡಿದನು. ಇಬ್ಬರೂ ಶೂಟರ್‌ಗಳನ್ನು ವಿದೇಶದಲ್ಲಿರುವ ಅನೋಲ್‌ ಬಿಷ್ಣೋಯ್‌ ಅವರ ಸೂಚನೆಯ ಮೇರೆಗೆ ವ್ಯಕ್ತಿಯೊಬ್ಬರು ಈ ಕಾರ್ಯ ನಿರ್ವಹಿಸಿದ್ದಾರೆ ಎಂದು ಅಧಿಕಾರಿ ತಿಳಿಸಿದ್ದಾರೆ.

ಆರಂಭದಲ್ಲಿ ಅವರಿಗೆ 30,000 ನೀಡಲಾಯಿತು ಮತ್ತು ಕಳೆದ ವರ್ಷ ಅಕ್ಟೋಬರ್‌ನಲ್ಲಿ ಮುಂಬೈಗೆ ಹೋಗಿ ಮುಂಬೈನ ಹೊರವಲಯದಲ್ಲಿರುವ ಖಾನ್‌ ಅವರ ತೋಟದ ಮನೆ ಇರುವ ಪನ್ವೆಲ್‌ ಬಳಿ ಬಾಡಿಗೆ ಮನೆಯನ್ನು ಹುಡುಕುವಂತೆ ಸೂಚಿಸಲಾಗಿತ್ತು.

ಪಾಲ್‌ ಮತ್ತು ಗುಪ್ತಾ ನಗರಕ್ಕೆ ಬಂದು ಎರಡು ತಿಂಗಳಿಗೂ ಹೆಚ್ಚು ಕಾಲ ಇಲ್ಲಿಯೇ ಇದ್ದರು, ಈ ಸಮಯದಲ್ಲಿ ಅವರು ವಿವಿಧ ಸ್ಥಳಗಳಿಗೆ ಭೇಟಿ ನೀಡಿದರು ಮತ್ತು ಅವರ ಹಣ ಖಾಲಿಯಾದಾಗ ಬಿಹಾರದ ತಮ ಹಳ್ಳಿಗೆ ಮರಳಿದರು ಎಂದು ಅಧಿಕಾರಿ ಹೇಳಿದರು.

ಫೆಬ್ರವರಿಯಲ್ಲಿ ಇಬ್ಬರನ್ನೂ ಮತ್ತೆ ಗ್ಯಾಂಗ್‌ ಸಂಪರ್ಕಿಸಿ 40,000 ನೀಡಿ ವಾಸಕ್ಕೆ ಬಾಡಿಗೆ ಮನೆ ಕೊಡಿಸುವಂತೆ ಹೇಳಿದ್ದರು. ಈ ಬಾರಿ ಅವರು ಮುಂಬೈನಿಂದ 60 ಕಿಮೀ ದೂರದಲ್ಲಿರುವ ಪನ್ವೆಲ್‌ಗೆ ಬಂದು ಹರಿಗ್ರಾಮ್‌ ಪ್ರದೇಶದಲ್ಲಿ ಬಾಡಿಗೆಗೆ ಮನೆ ಮಾಡಿಕೊಂಡಿದ್ದರು.

ಕೆಲವು ದಿನಗಳ ನಂತರ, ಮೋಟಾರುಬೈಕನ್ನು ಖರೀದಿಸಲು ಅವರನ್ನು ಕೇಳಲಾಯಿತು, ಅದಕ್ಕಾಗಿ ಅವರ ಬ್ಯಾಂಕ್‌ ಖಾತೆಗೆ ಹಣವನ್ನು ಜಮಾ ಮಾಡಲಾಗಿದೆ ಮತ್ತು ಸ್ವಲ್ಪ ಹಣವನ್ನು ಸಹ ಅವರಿಗೆ ನೀಡಲಾಯಿತು ಎಂದು ಅಧಿಕಾರಿ ಮಾಹಿತಿ ನೀಡಿದರು.
ಶಸಾ್ತ್ರಸ್ತ್ರಗಳನ್ನು ತಲುಪಿಸುವ ಕೆಲವು ದಿನಗಳ ಮೊದಲು, ಬಾಂದ್ರಾದಲ್ಲಿರುವ 58 ವರ್ಷದ ನಟನ ನಿವಾಸ ಮತ್ತು ಪನ್ವೇಲ್‌ನಲ್ಲಿರುವ ಅವರ ಫಾರ್ಮ್‌ಹೌಸ್‌‍ನಲ್ಲಿ ಸಮೀಕ್ಷೆ ನಡೆಸಲು ಅವರನ್ನು ಕೇಳಲಾಯಿತು.

ಎರಡು ಪಿಸ್ತೂಲ್‌ಗಳು ಮತ್ತು ಲೈವ್‌ ರೌಂಡ್‌ಗಳನ್ನು ಮಾರ್ಚ್‌ 15 ರಂದು ಇಬ್ಬರು ವ್ಯಕ್ತಿಗಳಾದ ಸೋನು ಬಿಷ್ಣೋಯ್‌ ಮತ್ತು ಅನುಜ್‌ ಥಾಪನ್‌ ಅವರ ಬಾಡಿಗೆ ಮನೆಯಲ್ಲಿ ಅವರಿಗೆ ತಲುಪಿಸಿದರು ಮತ್ತು ಈ ಹಂತದಲ್ಲಿ ಅವರಿಗೆ ಗುರಿಯ ಬಗ್ಗೆ ತಿಳಿಸಲಾಯಿತು ಎಂದು ತಿಳಿದುಬಂದಿದೆ.

RELATED ARTICLES

Latest News