Monday, October 14, 2024
Homeಅಂತಾರಾಷ್ಟ್ರೀಯ | Internationalಟ್ರಂಪ್‌ ನಂತರ ಈಗ ಕಮಲಾ ಹ್ಯಾರಿಸ್‌‍ ಕಚೇರಿಯ ಮೇಲೂ ಗುಂಡಿನ ದಾಳಿ

ಟ್ರಂಪ್‌ ನಂತರ ಈಗ ಕಮಲಾ ಹ್ಯಾರಿಸ್‌‍ ಕಚೇರಿಯ ಮೇಲೂ ಗುಂಡಿನ ದಾಳಿ

Shots fired into Kamala Harris’ campaign office in Arizona, raising concerns

ನ್ಯೂಯಾರ್ಕ್‌,ಸೆ.25- ಅಮೆರಿಕದ ಅಧ್ಯಕ್ಷೀಯ ಚುನಾವಣೆ ಹಿನ್ನೆಲೆಯಲ್ಲಿ ಮಾಜಿ ಅಧ್ಯಕ್ಷ, ಹಾಲಿ ಅಭ್ಯರ್ಥಿ ಡೊನಾಲ್ಡ್ ಟ್ರಂಪ್‌ ಗುರಿಯಾಗಿಸಿಕೊಂಡು 2 ಬಾರಿ ಗುಂಡಿನ ದಾಳಿಯಾಗಿದೆ.ಇದೀಗ ಟ್ರಂಪ್‌ ಪ್ರತಿಸ್ಪರ್ಧಿ ಹಾಗೂ ಉಪಾಧ್ಯಕ್ಷೆ ಕಮಲಾ ಹ್ಯಾರಿಸ್‌‍ಕಚೇರಿಯ ಮೇಲೂ ಗುಂಡು ಹಾರಿದೆ. ಅರಿಜೋನಾದ ಕಮಲಾ ಹ್ಯಾರಿಸ್‌‍ ಅವರ ಪ್ರಚಾರ ಕಚೇರಿಗೆ ಗುಂಡು ಹಾರಿಸಲಾಗಿದೆ ಎಂದು ಪೊಲೀಸರು ಖಚಿತಪಡಿಸಿದ್ದಾರೆ.

ಮಧ್ಯರಾತ್ರಿಯ ನಂತರ ಯಾರೋ ಗುಂಡುಗಳನ್ನು ಹಾರಿಸಿದ್ದಾರೆ. ಟೆಂಪೆಯಲ್ಲಿನ ಸದರ್ನ್‌ ಅವೆನ್ಯೂ ಮತ್ತು ಪ್ರೀಸ್ಟ್‌ ಡ್ರೈವ್‌ ಬಳಿಯ ಡೆಮಾಕ್ರಟಿಕ್‌ ನ್ಯಾಷನಲ್‌ ಕಮಿಟಿ ಪ್ರಚಾರ ಕಚೇರಿಯಲ್ಲಿ ಗುಂಡುಗಳಿಂದ ಹಾನಿ ಕಂಡುಬಂದಿದೆ ಎಂದು ಟೆಂಪೆ ಪೊಲೀಸ್‌‍ ಇಲಾಖೆ ನ್ಯೂಯಾರ್ಕ್‌ ಪೋಸ್ಟ್‌ಗೆ ತಿಳಿಸಿದೆ.

ಗುಂಡಿನ ದಾಳಿದಾಗ ರಾತ್ರಿಯ ಸಮಯದಲ್ಲಿ ಕಚೇರಿಯೊಳಗೆ ಯಾರೂ ಇರಲಿಲ್ಲ, ಆದರೆ ಇದು ಆ ಕಟ್ಟಡದಲ್ಲಿ ಕೆಲಸ ಮಾಡುವವರ ಮತ್ತು ಹತ್ತಿರದವರ ಸುರಕ್ಷತೆಯ ಬಗ್ಗೆ ಕಳವಳ ಉಂಟುಮಾಡುತ್ತದೆ ಎಂದು ಸಾರ್ವಜನಿಕ ಮಾಹಿತಿ ಅಧಿಕಾರಿ ಸಾರ್ಜೆಂಟ್‌ ರಯಾನ್‌ ಕುಕ್‌ ಹೇಳಿದ್ದಾರೆ.

ಘಟನಾ ಸ್ಥಳದಲ್ಲಿ ಪರಿಶೀಲನೆ ನಡೆಯುತ್ತಿದೆ. ಸಿಬ್ಬಂದಿ ಮತ್ತು ಇತರರಿಗೆ ಪ್ರದೇಶದಲ್ಲಿ ಭದ್ರತೆಯನ್ನು ಹೆಚ್ಚಿಸಲು ಹೆಚ್ಚುವರಿ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ.ಸಿಬ್ಬಂದಿ ಕಚೇರಿಗೆ ಆಗಮಿಸಿದಾಗ ಮುಂಭಾಗದ ಕಿಟಕಿಗಳ ಮೂಲಕ ಗುಂಡು ಹಾರಿಸಿರುವುದು ಕಂಡುಬಂದಿದೆ. ಇತ್ತೀಚಿನ ದಿನಗಳಲ್ಲಿ ಕಚೇರಿಯಲ್ಲಿ ಎರಡನೇ ಬಾರಿ ಕ್ರಿಮಿನಲ್‌ ಹಾನಿ ವರದಿಯಾಗಿದೆ.

ಸೆಪ್ಟೆಂಬರ್‌ 16ರಂದು, ಮಧ್ಯರಾತ್ರಿಯ ನಂತರ, ಮುಂಭಾಗದ ಕಿಟಕಿಗಳನ್ನು ಬಿಬಿ ಗನ್‌ ಅಥವಾ ಪೆಲೆಟ್‌ ಗನ್‌ನಿಂದ ಶೂಟ್‌ ಮಾಡಲಾಗಿದೆ. ಎರಡೂ ಘಟನೆಗಳಲ್ಲಿ ಇನ್ನೂ ಯಾರನ್ನೂ ಬಂಧಿಸಲಾಗಿಲ್ಲ. ಎಲ್ಲಾ ಆಯಾಮಗಳಲ್ಲೂ ಅಧಿಕಾರಿಗಳು ತನಿಖೆ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.

ಡೊನಾಲ್‌್ಡ ಟ್ರಂಪ್‌ ಮೇಲಿನ ಎರಡನೇ ಹತ್ಯೆಯ ಪ್ರಯತ್ನದ ಕೆಲವೇ ದಿನಗಳ ನಂತರ ಈ ಘಟನೆ ನಡೆದಿದೆ. 58 ವರ್ಷದ ಹವಾಯಿ ನಿವಾಸಿ ರಿಯಾನ್‌ ರೌತ್‌ ಎಂಬಾತ ಫ್ರೋರಿಡಾದ ವೆಸ್ಟ್‌ ಪಾಮ್‌ ಬೀಚ್‌ನಲ್ಲಿರುವ ಟ್ರಂಪ್‌ ನ್ಯಾಷನಲ್‌ ಗಾಲ್‌್ಫ ಕ್ಲಬ್‌ ಅನ್ನು ಗುರಿಯಾಗಿಸಿಕೊಂಡಿದ್ದನು.

ಎಕೆ-47, EsPws ಕ್ಯಾಮೆರಾ ಮತ್ತು ಇತರ ವಸ್ತುಗಳೊಂದಿಗೆ ಅಡಗಿರುವುದನ್ನು ಗಮನಿಸಿದ ರಹಸ್ಯ ಸೇವೆ, ಆತನನ್ನು ನಂತರ ಬಂಧಿಸಿದೆ. ಆ ಸಮಯದಲ್ಲಿ ಟ್ರಂಪ್‌ ಸ್ಥಳದಲ್ಲಿ ಗಾಲ್‌್ಫ ಆಡುತ್ತಿದ್ದರು. ರಹಸ್ಯ ಸೇವೆಯು ರೌತ್‌ ಮೇಲೆ ಗುಂಡು ಹಾರಿಸಿದ ನಂತರ ಆತ ಕಾರಿನಲ್ಲಿ ಓಡಿಹೋದನು ಮತ್ತು ನಂತರ ಅವನನ್ನು ಬಂಧಿಸಲಾಯಿತು.

ಅದಕ್ಕೂ ಕೆಲವು ದಿನಗಳ ಮೊದಲು, ಟ್ರಂಪ್‌ ಅವರ ಪೆನ್ಸಿಲ್ವೇನಿಯಾ ರ್ಯಾಲಿಯಲ್ಲಿ ಹತ್ಯೆಯ ಪ್ರಯತ್ನದಿಂದ ಬದುಕುಳಿದರು. 20 ವರ್ಷದ ಥಾಮಸ್‌‍ ಮ್ಯಾಥ್ಯೂ ಕ್ರೂಕ್ಸ್, ರ್ಯಾಲಿಯಲ್ಲಿ ಗುಂಡು ಹಾರಿಸಿದ್ದಾನೆ. ಟ್ರಂಪ್‌ ಮತ್ತು ಇತರ ಇಬ್ಬರನ್ನು ಗಾಯಗೊಳಿಸಿದನು. ಅಂತಿಮವಾಗಿ ಕ್ರೂಕ್ಸ್ ಸ್ನೈಪರ್‌ಗ್ಗಳಿಂದ ಕೊಲ್ಲಲ್ಪಟ್ಟನು.

RELATED ARTICLES

Latest News