Tuesday, May 20, 2025
Homeರಾಜಕೀಯ | Politicsಒಲಂಪಿಕ್ಸ್‌ನಲ್ಲಿ ಭ್ರಷ್ಟಾಚಾರದ ಪಂದ್ಯವಿದ್ದಿದ್ದರೆ ಚಿನ್ನದ ಪದಕ ಗೆಲ್ಲುತ್ತಿದ್ದ ಸಿದ್ದರಾಮಯ್ಯ : ಬಿಜೆಪಿ ಟ್ರೊಲ್

ಒಲಂಪಿಕ್ಸ್‌ನಲ್ಲಿ ಭ್ರಷ್ಟಾಚಾರದ ಪಂದ್ಯವಿದ್ದಿದ್ದರೆ ಚಿನ್ನದ ಪದಕ ಗೆಲ್ಲುತ್ತಿದ್ದ ಸಿದ್ದರಾಮಯ್ಯ : ಬಿಜೆಪಿ ಟ್ರೊಲ್

ಬೆಂಗಳೂರು, ಜು.30– ವಾಲೀಕಿ ಅಭಿವೃದ್ಧಿ ನಿಗಮ ಹಾಗೂ ಮುಡಾ ಹಗರಣದ ವಿಚಾರವಾಗಿ ಸಿಎಂ ಸಿದ್ದರಾಮಯ್ಯ ಹಾಗೂ ಕರ್ನಾಟಕ ಕಾಂಗ್ರೆಸ್‌‍ ಸರ್ಕಾರದ ವಿರುದ್ಧ ಬಿಜೆಪಿ ವಾಗ್ದಾಳಿ ಮುಂದುವರಿಸಿದೆ.ಮೈಸೂರಿಗೆ ಪಾದಯಾತ್ರೆ ಹಮಿಕೊಂಡ ಬೆನ್ನಲ್ಲೇ ಇದೀಗ ಬಿಜೆಪಿ ಸಾಮಾಜಿಕ ಜಾಲತಾಣಗಳಲ್ಲಿಯೂ ಕಾಂಗ್ರೆಸ್‌‍ ವಿರುದ್ಧ ಟೀಕಾ ಪ್ರಹಾರ ತೀವ್ರಗೊಳಿಸಿದೆ.


ಹಗರಣಗಳನ್ನು ಒಲಂಪಿಕ್ಸ್ ಗೆ ಹೋಲಿಸಿ ಎಕ್‌್ಸನಲ್ಲಿ ಪೋಸ್ಟ್‌ ಮಾಡಿರುವ ಬಿಜೆಪಿ, ಸಿಎಂ ಸಿದ್ದರಾಮಯ್ಯಗೆ ಭ್ರಷ್ಟಾಚಾರದಲ್ಲಿ ಚಿನ್ನದ ಪದಕ ದೊರೆಯಬಹುದು ಎಂದು ವ್ಯಂಗ್ಯವಾಡಿದೆ.

ಒಲಂಪಿಕ್‌್ಸನಲ್ಲಿ ಭ್ರಷ್ಟಾಚಾರದ ಪಂದ್ಯ ಏರ್ಪಡಿಸಿದಲ್ಲಿ ಭ್ರಷ್ಟಾಚಾರದ ಪಿತಾಮಹನಿಗೆ ಚಿನ್ನದ ಪದಕ ಖಚಿತ-ನಿಶ್ಚಿತ-ಖಂಡಿತ ಎಂದು ಸಿಎಂ ಸಿದ್ದರಾಮಯ್ಯ, ಮಾಜಿ ಸಚಿವ ನಾಗೇಂದ್ರ ಹಾಗೂ ಶಾಸಕ ಬಸನಗೌಡ ದದ್ದಲ್‌ ಫೋಟೊವನ್ನು ಪೋಸ್ಟ್‌ ಮಾಡಿದೆ.

ಇದರಲ್ಲಿ ಸಿದ್ದರಾಮಯ್ಯ ಚಿನ್ನದ ಪದಕ, ನಾಗೇಂದ್ರ ಬೆಳ್ಳಿ ಹಾಗೂ ದದ್ದಲ್‌ ಕಂಚಿನ ಪದಕ ಧರಿಸಿರುವ ಎಡಿಟೆಡ್‌ ಫೋಟೋಗಳನ್ನು ಪ್ರಕಡಿಸಲಾಗಿದೆ.

ಈ ಮಧ್ಯೆ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ.ಶಿವಕುಮಾರ್‌ ಹೈಕಮಾಂಡ್‌ ಭೇಟಿಗಾಗಿ ದೆಹಲಿಗೆ ತೆರಳಿದ್ದಾರೆ. ಆ ಬಗ್ಗೆಯೂ ಕುಹಕವಾಡಿರುವ ಬಿಜೆಪಿ ವ್ಯಂಗ್ಯ ಚಿತ್ರವೊಂದನ್ನು ಪೋಸ್ಟ್‌ ಮಾಡಿ ಲೇವಡಿ ಮಾಡಿದೆ.

ನೆರೆಯಿಂದ ಹಾನಿಗೊಳಗಾದ ಕನ್ನಡಿಗರ ಕಂಬನಿ ಒರೆಸುವುದಕ್ಕಿಂತಲೂ, ಹೈಕಮಾಂಡ್‌ಗೆ ಕಪ್ಪ ತಲುಪಿಸುವ ಕಾರ್ಯದಲ್ಲಿ ಮಗ್ನವಾಗಿರುವ ಸಿಎಂ-ಡಿಸಿಎಂ ಎಂದು ಬಿಜೆಪಿ ವ್ಯಂಗ್ಯವಾಡಿದೆ.

RELATED ARTICLES

Latest News