Monday, November 4, 2024
Homeಜಿಲ್ಲಾ ಸುದ್ದಿಗಳು | District Newsಹೆಚ್ಡಿಕೆ ಕುಟುಂಬಕ್ಕೆ ಸಿದ್ದೇಶ್ವರ ಸ್ವಾಮಿ ಪ್ರಸಾದ, ಚುನಾವಣೆಗೂ ಮುನ್ನ ಸಿಕ್ತಾ ಶುಭ ಸೂಚನೆ…?

ಹೆಚ್ಡಿಕೆ ಕುಟುಂಬಕ್ಕೆ ಸಿದ್ದೇಶ್ವರ ಸ್ವಾಮಿ ಪ್ರಸಾದ, ಚುನಾವಣೆಗೂ ಮುನ್ನ ಸಿಕ್ತಾ ಶುಭ ಸೂಚನೆ…?

Siddeshwar Swami Prasad for the Kumaraswamy family! Good news before the election?

ಹಾಸನ, ಅ.28- ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಪೂಜೆ ಸಲ್ಲಿಸುತ್ತಿದ್ದ ವೇಳೆ ಸಿದ್ದೇಶ್ವರ ಸ್ವಾಮಿಯ (ಬಲಗಡೆ) ಮೇಲಿದ್ದ ಹೂ ಬಿದ್ದ ಹಿನ್ನೆಲೆ ಸಿದ್ದೇಶ್ವರ ಸ್ವಾಮಿ ಶುಭ ಸೂಚನೆ ನೀಡಿತಾ ಎಂಬ ಪ್ರಶ್ನೆ ಮೂಡಿದೆ.

ಕುಟುಂಬ ಸಮೇತರಾಗಿ ಹಾಸನಾಂಬೆ ದರ್ಶನ ನಂತರ ಸಿದ್ದೇಶ್ವರಸ್ವಾಮಿ ದರ್ಶನ ಮಾಡಿದ ವೇಳೆ ಸಿದ್ದೇಶ್ವರಸ್ವಾಮಿ ಬಲಗಡೆಯಿಂದ ಹೂ ಕೊಟ್ಟಿದೆ. ದೇವರ ಮೇಲಿಂದ ಹೂವು ನೀಡಿದಾಗ ಕುಮಾರಸ್ವಾಮಿಗೆ ಪತ್ನಿ ಅನಿತಾ ಕುಮಾರಸ್ವಾಮಿ ಕೈ ಸನ್ನೆ ಮಾಡಿ ತಿಳಿಸಿದ್ದಾರೆ.

ಚನ್ನಪಟ್ಟಣ ಚುನಾವಣೆ ನಡುವೆಯೂ ಹಾಸನಾಂಬೆ, ಸಿದ್ದೇಶ್ವರ ಸ್ವಾಮಿ ದರ್ಶನ ಪಡೆದ ವೇಳೆ ಇಂತಹ ಶುಭ ಸೂಚನೆ ಕುಮಾರಸ್ವಾಮಿ ಕುಟುಂಬಕ್ಕೆ ಸಂತಸ ತಂತಂತಾಗಿದೆ. ಹಲವಾರು ದಶಕಗಳಿಂದ ಸಿದ್ದೇಶ್ವರ ಸ್ವಾಮಿಯ ಬಳಿ ಪ್ರಸಾದವನ್ನು ಕೇಳುವ ಪ್ರತೀತಿ ಇದ್ದು ಶುಭ ಸಮಾರಂಭಗಳನ್ನು ಆಯೋಜಿಸುವ ಮುನ್ನಾ ಭಕ್ತರು ಸಿದ್ದೇಶ್ವರ ಸ್ವಾಮಿಗೆ ವಿಶೇಷ ಪೂಜೆ ಅಭಿಷೇಕ ನಂತರ ಪ್ರಸಾದ ಕೇಳುವುದು ವಾಡಿಕೆ ಹಾಗೂ ಅದರಂತೆ ಪ್ರಸಾದವಾದ ನಂತರ ಶುಭ ಕಾರ್ಯ ನೆರವೇರಿರುವ ನಂಬಿಕೆ ಇದೆ ಎಂದು ಸ್ಥಳೀಯರು ತಿಳಿಸಿದ್ದಾರೆ.

RELATED ARTICLES

Latest News