Thursday, November 14, 2024
Homeರಾಷ್ಟ್ರೀಯ | Nationalಲೋಕಸಭೆಯಲ್ಲಿ ಹೊಗೆ ಹಾಕಿದವನನ್ನು ಹಿಡಿದ ಗುರ್ಜಿತ್ 'ಸಿಂಗ್ ಈಸ್ ಕಿಂಗ್'

ಲೋಕಸಭೆಯಲ್ಲಿ ಹೊಗೆ ಹಾಕಿದವನನ್ನು ಹಿಡಿದ ಗುರ್ಜಿತ್ ‘ಸಿಂಗ್ ಈಸ್ ಕಿಂಗ್’

ನವದೆಹಲಿ,ಡಿ.14- ಲೋಕಸಭೆಯಲ್ಲಿ ಹೊಗೆ ಬಾಂಬ್ ಸಿಡಿಸಿದ ಇಬ್ಬರಲ್ಲಿ ಒಬ್ಬರನ್ನು ಸೆರೆ ಹಿಡಿದ ಕಾಂಗ್ರೆಸ್ ಸಂಸದ ಗುರ್ಜಿತ್‍ಸಿಂಗ್ ಔಜ್ಲಾ ಅವರನ್ನು ಶಶಿ ತರೂರ್ ಅವರು ಸಿಂಗ್ ಈಸ್ ಕಿಂಗ್ ಎಂದು ಬಣ್ಣಿಸಿದ್ದಾರೆ.

ಔಜ್ಲಾ ಅದ್ಭುತ ಸಿಂಗ್ ಈಸ್ ಕಿಂಗï! ಲೋಕಸಭೆಯಲ್ಲಿ ಒಳನುಗ್ಗುವವರನ್ನು ಎದುರಿಸಿದ ನನ್ನ ಕೆಚ್ಚೆದೆಯ ಸಹೋದ್ಯೋಗಿ ಎಂದು ಅವರು ಎಕ್ಸ್ ಮಾಡಿದ್ದಾರೆ.ಕಾಂಗ್ರೆಸ್ ಸಂಸದ ಗುರ್ಜಿತ್ ಸಿಂಗ್ ಔಜ್ಲಾ ಅವರು ಲೋಕಸಭೆಯೊಳಗೆ ಶರ್ಮಾ ಅವರನ್ನು ಹಿಡಿದ ನಾಯಕರಲ್ಲಿ ಒಬ್ಬರು. ಶರ್ಮಾ ಶೂ ತೆಗೆದು ಮತ್ತೊಂದು ಹೊಗೆಯ ಡಬ್ಬಿಯನ್ನು ಹೊರ ತೆಗೆಯುವಾಗ ಅವರನ್ನು ಸಿನಿಮಿಯ ರೀತಿಯಲ್ಲಿ ಸೆರೆ ಹಿಡಿಯುವುದನ್ನು ನಾನು ನೋಡಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಸಂಸತ್‍ಗೆ ನುಗ್ಗಿದ ಆರೋಪಿಗಳ ವಿರುದ್ಧ ಯುಎಪಿಎ ಪ್ರಕರಣ ದಾಖಲು

ಕರ್ನಾಟಕದ ಕೋಲಾರ ಸಂಸದ ಮುನಿಸ್ವಾಮಿ ಸೇರಿದಂತೆ ನಾಲ್ವರು ಸಂಸದರು ಶರ್ಮಾನನ್ನು ಹಿಡಿದು ಹಲ್ಲೆ ನಡೆಸಿ ನಂತರ ಪೊಲೀಸರಿಗೆ ಒಪ್ಪಿಸುವಲ್ಲಿ ಯಶಸ್ವಿಯಾಗಿದ್ದರು. ಆರೋಪಿಗಳು ಭಗತ್ ಸಿಂಗ್ ಫ್ಯಾನ್ ಕ್ಲಬ್ ಹೆಸರಿನ ಸಾಮಾಜಿಕ ಮಾಧ್ಯಮ ಪುಟದಲ್ಲಿ ಸಂಪರ್ಕ ಹೊಂದಿದ್ದರು.

RELATED ARTICLES

Latest News