Friday, November 22, 2024
Homeರಾಜ್ಯಬೆಳಗಾವಿ : ಅನ್ಯಕೋಮಿನ ಯುವಕರಿಂದ ಅಕ್ಕ-ತಮ್ಮನಿಗೆ ಚಿತ್ರಹಿಂಸೆ

ಬೆಳಗಾವಿ : ಅನ್ಯಕೋಮಿನ ಯುವಕರಿಂದ ಅಕ್ಕ-ತಮ್ಮನಿಗೆ ಚಿತ್ರಹಿಂಸೆ

ಬೆಳಗಾವಿ,ಜ.7- ಪ್ರೇಮಿಗಳೆಂದು ಭಾವಿಸಿ ಅಕ್ಕ-ತಮ್ಮನ ಮೇಲೆ ಅನ್ಯಕೋಮಿಯ ಯುವಕರು ರಾಡ್‍ನಿಂದ ಹಲ್ಲೆ ನಡೆಸಿ ಚಿತ್ರಹಿಂಸೆ ನೀಡಿರುವ ಘಟನೆ ಇಲ್ಲಿನ ಕೋಟೆಕೆರೆ ಬಳಿ ನಡೆದಿದೆ. ಬೆಳಗಾವಿ ತಾಲೂಕಿನ ನಿವಾಸಿಗಳಾದ 24 ವರ್ಷದ ಯುವತಿ, 21 ವರ್ಷದ ಯುವಕ ಯುವನಿ ಅರ್ಜಿ ಸಲ್ಲಿಸಲು ಬಂದಿದ್ದರು.

ಈ ವೇಳೆ ಯುವತಿ ಮುಖಕ್ಕೆ ಬಟ್ಟೆ ಕಟ್ಟಿದ್ದಳು. ಯುವಕ ಹಣೆಗೆ ತಿಲಕ ಇಟ್ಟುಕೊಂಡಿದ್ದನು. ಇವರನ್ನು ಕಂಡ ಅನ್ಯಕೋಮಿನ 16 ಜನ ಯುವಕರ ಗ್ಯಾಂಗ್ ಹಿಂದೂ ಯುವಕ, ಮುಸ್ಲಿಂ ಯುವತಿ ಪ್ರೇಮಿಗಳೆಂದು ಥಳಿಸಿದ್ದಾರೆ. ನಂತರ ಅವರನ್ನು ಎಳೆದೊಯ್ದು ಹತ್ತಿರವೊಂದರ ಕೊಠಡಿಯಲ್ಲಿ ಕೂಡಿ ಹಾಕಿ ರಾಡ್‍ನಿಂದ ಹಲ್ಲೆ ನಡೆಸಿದ್ದಾರೆ.

ಈ ವೇಳೆ ಯುವತಿಯನ್ನು ಎಳೆದಾಡಿ ಮಾನಭಂಗಕ್ಕೂ ಪ್ರಯತ್ನಿಸಲಾಗಿದೆ. ಸುಮಾರು 3 ಗಂಟೆಗಳ ಕಾಲ ಈ ದುರುಳರು ಅವರಿಗೆ ಚಿತ್ರಹಿಂಸೆ ಕೊಟ್ಟಿದ್ದಾರೆ. ನಂತರ ಯುವತಿ ಬಳಿ ಇದ್ದ ಯುವತಿ ಮೊಬೈಲ್‍ನಿಂದ ಕುಟುಂಬಸ್ಥರಿಗೆ ಕರೆ ಮಾಡಿದ್ದಾರೆ. ಆಗ ಕುಟುಂಬಸ್ಥರು ಅವರಿಬ್ಬರು ಸಹೋದರಿ, ಸಹೋದರರು ಅಂತ ಹೇಳಿದರೂ ನಂಬದೆ, ಮೊಬೈಲ್ ಸ್ವೀಚ್ ಆಫ್ ಮಾಡಿ ಮತ್ತೆ ಸುಳ್ಳು ಹೇಳುತ್ತಿದ್ದೀರಿ ಎಂದು ಮನಬಂದಂತೆ ಥಳಿಸಿದ್ದಾರೆ.

ಆತಂಕಗೊಂಡ ಕುಟುಂಬಸ್ಥರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಬೆಳಗಾವಿ ಮಾರ್ಕೆಟ್ ಪೊಲೀಸರು ಕ್ಷಿಪ್ರ ಕಾರ್ಯಾಚರಣೆ ನಡೆಸಿ ಮೊಬೈಲ್ ಲೊಕೇಶನ್ ಆಧರಿಸಿ ಘಟನಾ ಸ್ಥಳಕ್ಕೆ ಭೇಟಿ ನೀಡಿ ಇಬ್ಬರನ್ನೂ ರಕ್ಷಿಸಿದ್ದಾರೆ. ಒಟ್ಟು 16 ಮಂದಿಯ ಗ್ಯಾಂಗ್‍ನಲ್ಲಿ ಎಂಟು ಮಂದಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು ಉಳಿದವರಿಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಗಂಭೀರ ಗಾಯಗೊಂಡ ಯುವಕ ಮತ್ತು ಯುವತಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ.

ರೈತರ ನೆರವಿಗೆ ಬರಲು ಆಗದಿದ್ದರೆ ರಾಜೀನಾಮೆ ಕೊಡಿ : ಅಶೋಕ್

ಬೆಳಗಾವಿ ಮಾರ್ಕೆಟ್ ಪೊಲೀಸ್ ಠಾಣೆಯಲ್ಲಿ ಕೊಲೆಯತ್ನ, ಮಾನಭಂಗಕ್ಕೆ ಪ್ರಯತ್ನ, ಜಾತಿನಿಂದನೆ, ಪ್ರಾಣ ಬೆದರಿಕೆ ಹಲವು ಕಾಯ್ದೆಯಡಿ ಪ್ರಕರಣ ದಾಖಲಿಸಿದ್ದಾರೆ. ದೊಡ್ಡಮನ ಮಗನ ಜೊತೆ ಯುವತಿ ಯುವನಿಧಿ ಅರ್ಜಿ ಸಲ್ಲಿಸಲು ಅವರು ಕಚೇರಿಗೆ ಬಂದಿದ್ದರು. ಈ ವೇಳೆ ಒಂದು ಗಂಟೆ ಬಿಟ್ಟು ಬರುವಂತೆ ಅವರಿಗೆ ಸಿಬ್ಬಂದಿಗಳು ಹೇಳಿದರು. ಆದ್ದರಿಂದಾಗಿ ಅವರು ಹತ್ತಿರದಲ್ಲಿದ್ದ ಕೋಟೆಕೆರೆ ಬಳಿಯ ಕಟ್ಟೆಯ ಮೇಲೆ ಕುಳಿತು ಮಾತನಾಡುವಾಗ ಈ ಅನ್ಯಕೋಮಿನ ಯುವಕರು ದಾಳಿ ನಡೆಸಿ ಅಮಾನುಷವಾಗಿ ನಡೆದುಕೊಂಡಿದ್ದಾರೆ.

ನಗರ ಪ್ರಕ್ಷುಬ್ಧ:
ಘಟನೆ ತಿಳಿಯುತ್ತಿದ್ದಂತೆ ಹಿಂದೂ ಪರ ಸಂಘಟನೆಗಳು ಆಕ್ರೋಶ ವ್ಯಕ್ತಪಡಿಸಿದೆ. ನೈತಿಕ ಪೊಲೀಸ್‍ಗಿರಿ ಎಂದು ಹೇಳಿ ಹಿಂದೂ ಯುವಕರನ್ನು ಟಾರ್ಗೆಟ್ ಮಾಡಲಾಗುತ್ತದೆ. ಈಗ ನಗರದಲ್ಲಿ ಅಕ್ಕ-ತಮ್ಮನ ಮೇಲೆ ಮೃಗದ ರೀತಿ ವರ್ತಿಸಿರುವ ಅನ್ಯಕೋಮಿನ ಗ್ಯಾಂಗ್‍ನ ಬಗ್ಗೆ ಯಾರೂ ಚಕಾರ ಎತ್ತುತ್ತಿಲ್ಲ. ಇಲ್ಲಿನ ಕಾಂಗ್ರೆಸ್ ಶಾಸಕರು ಮೌನವಾಗಿದ್ದಾರೆ. ಇದನ್ನು ಗಂಭೀರವಾಗಿ ಪರಿಗಣಿಸಿ ಉಗ್ರ ಹೋರಾಟ ನಡೆಸಲಾಗುವುದು ಎಂದು ತಿಳಿಸಿದ್ದಾರೆ.

ರಾಜ್ಯಾದ್ಯಂತ ಈ ಬಗ್ಗೆ ವ್ಯಾಪಕ ಟೀಕೆಗಳು ವ್ಯಕ್ತವಾಗುತ್ತಿದ್ದು, ಬೆಳಗಾವಿ ನಗರ ಈ ಘಟನೆಯಿಂದ ಪ್ರಕ್ಷುಬ್ದವಾಗಿದೆ. ಮುನ್ನೆಚ್ಚರಿಕೆ ಕ್ರಮವಾಗಿ ಪೊಲೀಸರು ವ್ಯಾಪಕ ಬಂದೋಬಸ್ತ್ ಮಾಡಿದ್ದಾರೆ.

RELATED ARTICLES

Latest News