Friday, October 3, 2025
Homeರಾಜ್ಯಯೂಟ್ಯೂಬರ್‌ಗಳಿಗೆ ಎಸ್‌‍ಐಟಿ ಮತ್ತೊಮೆ ನೋಟೀಸ್‌‍

ಯೂಟ್ಯೂಬರ್‌ಗಳಿಗೆ ಎಸ್‌‍ಐಟಿ ಮತ್ತೊಮೆ ನೋಟೀಸ್‌‍

ಬೆಳ್ತಂಗಡಿ,ಅ.3-ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಡಿಯೋಗಳನ್ನು ತಯಾರಿಸಿದ ಸಮೀರ್‌ ಸೇರಿದಂತೆ ಐದಕ್ಕೂ ಹೆಚ್ಚು ಯೂಟ್ಯೂಬರ್‌ಗಳಿಗೆ ವಿಚಾರಣೆಗೆ ಹಾಜರಾಗುವಂತೆ ಎಸ್‌‍ಐಟಿ ಮತ್ತೊಮೆ ನೋಟೀಸ್‌‍ ಜಾರಿಗೊಳಿಸಿದೆ. ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ ತನಿಖೆ ಚುರುಕುಗೊಳಿಸಿರುವ ವಿಶೇಷ ತನಿಖಾ ತಂಡ, ಬುರುಡೆ ಚಿನ್ನಯ್ಯ ವಿಚಾರಣೆ ವೇಳೆ ಹೇಳಿರುವ ಹೇಳಿಕೆಗಳನ್ನು ಆಧರಿಸಿ ಯೂಟ್ಯೂಬರ್‌ ಸಮೀರ್‌, ಕೇರಳದ ಲಾರಿ ಮಾಲೀಕ ಮುನಾಫ್‌, ಅಭಿಷೇಕ್‌, ಅಜಯ್‌, ವಿಜಯ್‌ ಸೇರಿದಂತೆ ಹಲವರಿಗೆ ನೋಟೀಸ್‌‍ ನೀಡಿದೆ.

ಹಲವರು ಯೂಟ್ಯೂಬರ್‌ಗಳು ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿದಂತೆ ಹಲವು ವಿಡಿಯೋಗಳನ್ನು ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟು ಸಾರ್ವಜನಿಕರಲ್ಲಿ ಒಂದು ರೀತಿ ಭೀತಿ ಉಂಟು ಮಾಡಿದ್ದರು.
ಯೂಟ್ಯೂಬರ್‌ಗಳ ವಿಚಾರಣೆಗಾಗಿ ಈಗಾಗಲೇ ಬೆಳ್ತಂಗಡಿ ಎಸ್‌‍ಐಟಿ ಕಚೇರಿಯಲ್ಲಿ ಎಲ್ಲಾ ಸಿದ್ದತೆಗಳನ್ನು ಅಧಿಕಾರಿಗಳು ಮಾಡಿಕೊಂಡಿದ್ದು, ಯಾವ ವಿಷಯಗಳ ಬಗ್ಗೆ ಅವರಿಂದ ಉತ್ತರ ಪಡೆದುಕೊಳ್ಳಬೇಕೆಂಬುವುದರ ಬಗ್ಗೆಯೂ ತಯಾರಿ ಮಾಡಿಕೊಳ್ಳುತ್ತಿದ್ದಾರೆ.

ಬುರುಡೆ ಚಿನ್ನಯ್ಯ ವಿಚಾರಣೆ ವೇಳೆ ನೀಡಿದ ಹೇಳಿಕೆಗಳಲ್ಲಿ ಕೆಲವೊಂದು ವಿಚಾರಗಳ ಬಗ್ಗೆ ಯೂಟ್ಯೂಬರ್‌ಗಳನ್ನು ವಿಚಾರಣೆಗೆ ಒಳಪಡಿಸಿ, ಮರುಪರಿಶೀಲನೆ ನಡೆಸುವ ಸಾಧ್ಯತೆ ಇದೆ.
ಈ ಹಿಂದೆ ಎಸ್‌‍ಐಟಿ ಯೂಟ್ಯೂಬರ್‌ಗಳಾದ ಅಭಿಷೇಕ್‌,ಮುನಾಫ್‌ ಸೇರಿದಂತೆ ಹಲವರನ್ನು ವಿಚಾರಣೆ ನಡೆಸಿದ್ದು, ಇದೀಗ ಮತ್ತೆ ವಿಚಾರಣೆಗೆ ಹಾಜರಾಗುವಂತೆ ಸೂಚಿಸಿದೆ.

RELATED ARTICLES

Latest News