Saturday, September 21, 2024
Homeರಾಜ್ಯಮುನಿರತ್ನ ಮೇಲಿನ ಪ್ರಕರಣಗಳ ತನಿಖೆಗೆ ಎಸ್ಐಟಿ ರಚನೆ..!?

ಮುನಿರತ್ನ ಮೇಲಿನ ಪ್ರಕರಣಗಳ ತನಿಖೆಗೆ ಎಸ್ಐಟಿ ರಚನೆ..!?

SIT probe into charges against Munirathna

ಬೆಂಗಳೂರು,ಸೆ.21- ಶಾಸಕ ಮುನಿರತ್ನ ಅವರ ಕರ್ಮಕಾಂಡಗಳ ತನಿಖೆಗೆ ವಿಶೇಷ ತನಿಖಾ ದಳ ರಚಿಸಲು ನಿರ್ಧರಿಸಲಾಗಿದ್ದು, ಯಾವುದೇ ಕ್ಷಣದಲ್ಲಿ ಸರ್ಕಾರದಿಂದ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆ ಇದೆ. ಮುನಿರತ್ನ ಅವರ ವಿರುದ್ಧ ಹಲವು ರೀತಿಯ ಪ್ರಕರಣಗಳು ದಾಖಲಾಗಿವೆ. ಹೀಗಾಗಿ ಹೊಸದಾಗಿ ಬೆಳಕಿಗೆ ಬಂದ ಹನಿಟ್ರ್ಯಾಪ್, ಎಚ್ಐವಿ ಸೋಂಕು ಹರಡಿಸುವ ಹುನ್ನಾರ, ಅತ್ಯಾಚಾರ ಸೇರಿದಂತೆ ನಾನಾ ಆರೋಪಗಳಲ್ಲಿ ಪ್ರಕರಣ ದಾಖಲಾಗಿವೆ.

ಈ ಮೊದಲು 2009 ರಿಂದಲೂ ಮುನಿರತ್ನ ವಿರುದ್ಧ ಹಲವು ಸ್ವರೂಪದ ಪ್ರಕರಣಗಳು ವಿವಿಧ ಹಂತದಲ್ಲಿವೆ. ಬಿಬಿಎಂಪಿಯ ಕಡತಗಳನ್ನು ತಮ ಮನೆಯಲ್ಲಿ ಇಟ್ಟುಕೊಂಡಿರುವುದು, ಕಾಮಗಾರಿಗಳಲ್ಲಿ ನೂರಾರು ಕೋಟಿ ರೂ. ಅಕ್ರಮ ಸೇರಿದಂತೆ ಹಲವು ದೂರುಗಳಿವೆ.
ಮುನಿರತ್ನ ಅವರು ರಾಜಕೀಯ ಎದುರಾಳಿಗಳನ್ನು ಹತ್ತಿಕ್ಕಲು ಯಾವ ಹಂತಕ್ಕಾದರೂ ತಲುಪುತ್ತಾರೆ ಎಂಬ ಆರೋಪಗಳಿವೆ.

ಈ ಹಿನ್ನೆಲೆಯಲ್ಲಿ ಮುನಿರತ್ನ ಹಲವಾರು ಕುಕೃತ್ಯಗಳನ್ನು ನಡೆಸಿದ್ದು, ಒಂದೊಂದಾಗಿ ಬೆಳಕಿಗೆ ಬರುತ್ತಿದೆ. ಆರಂಭದಲ್ಲಿ ದೂರು ನೀಡಿದವರು ಹಿಂದೇಟು ಹಾಕಿದವರು ಈಗ ಒಬ್ಬೊಬ್ಬರಾಗಿ ದೂರು ನೀಡಲಾರಂಭಿಸಿದ್ದಾರೆ.

ಗುತ್ತಿಗೆದಾರ ಚೆಲುವರಾಜು ಅವರನ್ನು ಅವಹೇಳನಕಾರಿಯಾಗಿ ನಿಂದಿಸಿದ ಬಳಿಕ ಮುನಿರತ್ನ ಅವರ ಗ್ರಹಚಾರ ಕೆಟ್ಟಂತಾಗಿದೆ. ಜಾತಿನಿಂದನೆ ಸೇರಿದಂತೆ ವಿವಿಧ ಆರೋಪಗಳಡಿ ಬಂಧನಕ್ಕೊಳಗಾಗಿ ಜೈಲುಪಾಲಾಗಿದ್ದಾರೆ. ಅದರ ಬೆನ್ನಲ್ಲೇ ಮಹಿಳೆಯೊಬ್ಬರು ಅತ್ಯಾಚಾರದ ಆರೋಪದಡಿ ದೂರು ದಾಖಲಿಸಿದ್ದಾರೆ. ಹೀಗಾಗಿ ಜಾಮೀನು ದೊರೆತರೂ ಮುನಿರತ್ನ ಮತ್ತೆ ಜೈಲಿನಲ್ಲೇ ಉಳಿಯುವಂತಾಗಿದೆ.

ಒಕ್ಕಲಿಗ ಸಮುದಾಯದ ಪ್ರಮುಖ ನಾಯಕರು ಸಭೆ ನಡೆಸಿ ಮುನಿರತ್ನ ಅವರ ಹೇಳಿಕೆಗಳ ವಿರುದ್ಧ ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಭೇಟಿ ಮಾಡಿ ಅವರ ವಿರುದ್ಧದ ಎಲ್ಲಾ ದೂರುಗಳನ್ನು ವಿಶೇಷ ತನಿಖಾ ದಳ ರಚಿಸಿ ವಿಚಾರಣೆ ನಡೆಸುವಂತೆ ಮನವಿ ಮಾಡಿದರು.

ಒಕ್ಕಲಿಗ ಸಮುದಾಯುದ ಈ ಬೇಡಿಕೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಬಹುತೇಕ ಸಂಬಂಧಿಸಿದ್ದು ಎಸ್ಐಟಿ ರಚನೆಗೆ ಕ್ರಮ ಕೈಗೊಳ್ಳುವಂತೆ ಗೃಹಸಚಿವ ಡಾ.ಜಿ.ಪರಮೇಶ್ವರ್ ಅವರಿಗೆ ಸೂಚನೆ ನೀಡಿದ್ದು, ಅದರ ಪ್ರಕಾರ, ಎಸ್ಐಟಿ ರಚನೆ ಬಹುತೇಕ ಖಚಿತವಾಗಿದ್ದು, ಯಾವುದೇ ಕ್ಷಣದಲ್ಲಿ ಅಧಿಕೃತ ಆದೇಶ ಹೊರಬೀಳುವ ಸಾಧ್ಯತೆಯಿದೆ.

RELATED ARTICLES

Latest News