Thursday, April 3, 2025
Homeರಾಷ್ಟ್ರೀಯ | Nationalಹತ್ರಾಸ್‌‍ ಕಾಲ್ತುಳಿತ ದುರಂತ : ಸರ್ಕಾರಕ್ಕೆ ತನಿಖೆಯ ವರದಿ ಸಲ್ಲಿಸಿದ ಎಸ್‌‍ಐಟಿ

ಹತ್ರಾಸ್‌‍ ಕಾಲ್ತುಳಿತ ದುರಂತ : ಸರ್ಕಾರಕ್ಕೆ ತನಿಖೆಯ ವರದಿ ಸಲ್ಲಿಸಿದ ಎಸ್‌‍ಐಟಿ

ಲಕ್ನೋ,ಜು.9-ಹತ್ರಾಸ್‌‍ ಕಾಲ್ತುಳಿತದ ತನಿಖೆಗಾಗಿ ರಚಿಸಲಾದ ವಿಶೇಷ ತನಿಖಾ ತಂಡ (ಎಸ್‌‍ಐಟಿ) ಉತ್ತರ ಪ್ರದೇಶ ಸರ್ಕಾರಕ್ಕೆ ತನ್ನ ವರದಿಯನ್ನು ಸಲ್ಲಿಸಿದೆ.

ಹೆಚ್ಚುವರಿ ಪೊಲೀಸ್‌‍ ಮಹಾನಿರ್ದೇಶಕ (ಆಗ್ರಾ ವಲಯ) ಅನುಪಮ್‌ ಕುಲಶ್ರೇಷ್ಠ ಅವರು ಎಸ್‌‍ಐಟಿಯ ನೇತೃತ್ವ ವಹಿಸಿದ್ದರು. ಎಸ್‌‍ಐಟಿ ತನ್ನ ವರದಿಯನ್ನು ಸರಕಾರಕ್ಕೆ ಸಲ್ಲಿಸಿದೆ ಎಂದು ಮಾಹಿತಿ ನಿರ್ದೇಶಕ ಶಿರ್ಶಿ ತಿಳಿಸಿದ್ದಾರೆ.

ಆದರೆ, ವರದಿಯ ಅಂಶಗಳನ್ನು ಅವರು ಬಹಿರಂಗಪಡಿಸಿಲ್ಲ. ಅಲಹಾಬಾದ್‌ ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಬ್ರಿಜೇಶ್‌ ಕುಮಾರ್‌ ಶ್ರೀವಾಸ್ತವ ಮತ್ತು ನಿವೃತ್ತ ಐಪಿಎಸ್‌‍ ಹೇಮಂತ್‌ ರಾವ್‌ ನೇತೃತ್ವದ ಪ್ರತ್ಯೇಕ ನ್ಯಾಯಾಂಗ ಆಯೋಗವೂ ಹತ್ರಾಸ್‌‍ ಕಾಲ್ತುಳಿತ ಪ್ರಕರಣದ ತನಿಖೆ ನಡೆಸುತ್ತಿದೆ.

RELATED ARTICLES

Latest News