Saturday, February 15, 2025
Homeರಾಷ್ಟ್ರೀಯ | Nationalಕಾರಿಗೆ ಎಸ್‍ಯುವಿ ಡಿಕ್ಕಿ, 6 ಮಂದಿ ದುರ್ಮರಣ

ಕಾರಿಗೆ ಎಸ್‍ಯುವಿ ಡಿಕ್ಕಿ, 6 ಮಂದಿ ದುರ್ಮರಣ

ರೇವಾರಿ, ಮಾ 11 (ಪಿಟಿಐ) ಹರಿಯಾಣದಲ್ಲಿ ಎಸ್‍ಯುವಿ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಆರು ಮಂದಿ ಸಾವನ್ನಪ್ಪಿದ್ದು, ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ತಡರಾತ್ರಿ ಕಾರಿನಲ್ಲಿದ್ದವರು ರಾಜಸ್ಥಾನದ ಖತು ಶ್ಯಾಮ್ ದೇವಸ್ಥಾನದಲ್ಲಿ ಪ್ರಾರ್ಥನೆ ಸಲ್ಲಿಸಿ ಹಿಂತಿರುಗುತ್ತಿದ್ದಾಗ ಮಸಾನಿ ಗ್ರಾಮದ ಬಳಿ ಈ ಅಪಘಾತ ಸಂಭವಿಸಿದೆ ಎಂದು ಅವರು ತಿಳಿಸಿದ್ದಾರೆ.

ವಾಪಸ್ ಬರುವಾಗ ಕಾರಿನ ಟೈರ್ ಪಂಕ್ಚರ್ ಆಯಿತು. ಅಷ್ಟರಲ್ಲಿ ಹಿಂದಿನಿಂದ ಎಸ್‍ಯುವಿ ಕಾರಿಗೆ ಡಿಕ್ಕಿ ಹೊಡೆದಿದೆ. ಮೃತರನ್ನು ಉತ್ತರ ಪ್ರದೇಶದ ಗಾಜಿಯಾಬಾದ್ ನಿವಾಸಿಗಳಾದ ರೋಶ್ನಿ (58), ನೀಲಂ (54), ಪೂನಂ ಜೈನ್ (50) ಮತ್ತು ಶಿಖಾ (40) ಎಂದು ಗುರುತಿಸಲಾಗಿದೆ. ಹಿಮಾಚಲ ಪ್ರದೇಶದ ನಿವಾಸಿ ಚಾಲಕ ವಿಜಯ್ (40) ಮತ್ತು ಇಲ್ಲಿನ ಖರ್ಖರ ಗ್ರಾಮದ ನಿವಾಸಿ ಸುನೀಲ್ (24) ಎಂದು ಗುರುತಿಸಲಾಗಿದೆ.

ಗಾಯಾಳುಗಳನ್ನು ರೆವಾರಿ ಮತ್ತು ಗುರುಗ್ರಾಮ್‍ನ ಆಸ್ಪತ್ರೆಗಳಿಗೆ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

RELATED ARTICLES

Latest News