Monday, June 17, 2024
Homeರಾಜ್ಯದಾಂಡೇಲಿ : ಕಾಳಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 6 ಮಂದಿ ದಾರುಣ ಸಾವು

ದಾಂಡೇಲಿ : ಕಾಳಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 6 ಮಂದಿ ದಾರುಣ ಸಾವು

ಕಾರವಾರ,ಎ.22- ಪ್ರವಾಸಕ್ಕೆಂದು ಬಂದಿದ್ದ ಒಂದೇ ಕುಟುಂಬದ ಆರು ಮಂದಿ ಕಾಳಿ ನದಿಯಲ್ಲಿ ಮುಳುಗಿ ಸಾವನ್ನಪ್ಪಿದ ಘಟನೆ ದಾಂಡೇಲಿಯ ಅಕೊರ್ಡಾ ಬಳಿ ನಡೆದಿದೆ. ಮೃತರನ್ನು ಹುಬ್ಬಳ್ಳಿಯ ಈಶ್ವರನಗರ ನಿವಾಸಿಗಳಾದ ನಜೀರ ಅಹ್ಮದ್ (40), ಅಲ್ಛೀಯಾ ಅಹ್ಮದ್ (10), ಮೋಹಿನ್ ಅಹ್ಮದ್ (6), ರೇಷಾ ಉನ್ನಿಸಾ (38), ಇಫ್ರಾ ಅಹ್ಮದ್ (15), ಅಬೀದ್ ಅಹ್ಮದ್ (12) ಎಂದು ಗುರುತಿಸಲಾಗಿದೆ.

ಒಟ್ಟು ಎಂಟು ಮಂದಿ ನಿನ್ನೆ ರಜೆ ಕಾರಣ ಪ್ರವಾಸಕ್ಕೆ ಆಗಮಿಸಿದ್ದರು ಮಧ್ಯಾಹ್ನ ಸಂತೋಷ ಕೊಟ ನಡೆಸಿ ಸಂಜೆ ಮಕ್ಕಳು ಸೇರಿ ಆರು ಮಂದಿ ಕಾಳಿ ನದಿಯಲ್ಲಿ ಈಜಲು ಇಳಿದಿದ್ದರು.ಇದರಲ್ಲಿ ಒಬ್ಬ ಬಾಲಕಿ ನೀರಿನಲ್ಲಿ ಮುಳುಗಿದ್ದಾಳೆ ಆಕೆಯನ್ನು ರಕ್ಷಿಸಲು ಹೋಗಿ ಉಳಿದವರು ನದಿಯಲ್ಲಿ ಮುಳುಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

ಸ್ಥಳಕ್ಕೆ ಧಾವಿಸಿದ ದಾಂಡೇಲಿ ಗ್ರಾಮಾಂತರ ಪೊಲೀಸರು ಅಗ್ನಿಶಮಕ ಸಿಬ್ಬಂದಿ ಹಾಗು ಈಜುಗಾರರ ಸಹಾಯದಿಂದ ಎಲ್ಲಾ ಮೃತದೇಹಗಳನ್ನು ರಾತ್ರಿ ವೇಳೆಗೆ ಪತ್ತೆಯಾಗಿವೆ. ಮೃತದೇಹಗಳನ್ನು ದಾಂಡೇಲಿ ಆಸ್ಪತ್ರೆ ಶವಾಗಾರಕ್ಕೆ ಸಾಗಿಸಲಾಗಿದೆ. ಘಟನೆ ವೇಳೆ ಇಬ್ಬರು ಮಹಿಳೆಯರು ದಡದಲ್ಲೇ ಇದ್ದರು ಸಹಾಯಕ್ಕಾಗಿ ಕೂಗಿಕೊಂಡರು ಯಾವುದೇ ಪ್ರಯೋಜನವಾಗಲಿಲ್ಲ .

RELATED ARTICLES

Latest News