Wednesday, May 1, 2024
Homeರಾಷ್ಟ್ರೀಯಕಾರ್ತಿಕ ಹುಣ್ಣಿಮೆ ದೀಪದ ಕಿಚ್ಚಿಗೆ ಜೀವಂತ ದಹಿಸಿ ಹೋದ ಬಾಲಕಿ

ಕಾರ್ತಿಕ ಹುಣ್ಣಿಮೆ ದೀಪದ ಕಿಚ್ಚಿಗೆ ಜೀವಂತ ದಹಿಸಿ ಹೋದ ಬಾಲಕಿ

ಹಜಾರಿಬಾಗ್,ನ.28- ಕಾರ್ತಿಕ ಹುಣ್ಣೆಮೆ ಅಂಗವಾಗಿ ಹಚ್ಚಲಾಗಿದ್ದ ಮಣ್ಣಿನ ದೀಪಗಳಿಂದ ಉಂಟಾದ ಬೆಂಕಿ ಅನಾಹುತದಲ್ಲಿ 6 ವರ್ಷದ ಬಾಲಕಿಯೊಬ್ಬಳು ಜೀವಂತವಾಗಿ ದಹಿಸಿ ಹೋಗಿ ಮತ್ತೆ ನಾಲ್ವರು ಗಂಭೀರವಾಗಿ ಗಾಯಗೊಂಡಿರುವ ಘಟನೆ ಜಾರ್ಖಂಡ್‍ನ ಹಜಾರಿಬಾಗ್‍ನಲ್ಲಿ ನಡೆದಿದೆ.

ನಿನ್ನೆ ಸಂಜೆ ಕಾರ್ತಿಕ ಪೂರ್ಣಿಮೆಯ ಸಂದರ್ಭದಲ್ಲಿ ಜನರು ದಿಯಾಸ್ (ಮಣ್ಣಿನ ದೀಪಗಳು) ಹಚ್ಚಿದ ಘಟನೆ ಮಾಳವಿಯಾ ಮಾರ್ಗದ ಜನನಿಬಿಡ ಮಾರುಕಟ್ಟೆ ಪ್ರದೇಶದಲ್ಲಿ ನಡೆದಿದೆ. ಮಾರುಕಟ್ಟೆ ಪ್ರದೇಶದಲ್ಲಿನ ಖಾಸಗಿ ನಿವಾಸದಲ್ಲಿ ಬೆಂಕಿ ಕಾಣಿಸಿಕೊಂಡಿತು ಮತ್ತು ತಕ್ಷಣವೇ ಪಕ್ಕದ ಕಟ್ಟಡಗಳಿಗೆ ಹರಡಿತು ಎಂದು ಹಜಾರಿಬಾಗ್ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮನೋಜ್ ರತನ್ ಚೌಥೆ ತಿಳಿಸಿದ್ದಾರೆ, ಮಧ್ಯರಾತ್ರಿಯ ನಂತರವೂ ಮುಂದುವರಿದ ಐದು ಗಂಟೆಗಳ ಕಾಲ ಶ್ರಮಿಸಿ ಬೆಂಕಿ ನಂದಿಸಲಾಯಿತು.

ಉರ್ದು ಶಾಲೆ ಸ್ಥಳಾಂತರ ಮಾಡುವಂತೆ ಒತ್ತಡ : ಸಿಎಂಗೆ ದೂರು

ಘಟನೆಯಲ್ಲಿ ಅಣ್ಣು ಎಂದು ಗುರುತಿಸಲಾದ ಆರು ವರ್ಷದ ಬಾಲಕಿ ಸಾವನ್ನಪ್ಪಿದ್ದು, ನಾಲ್ವರು ಗಂಭೀರವಾಗಿ ಗಾಯಗೊಂಡಿದ್ದಾರೆ ಎಂದು ಅವರು ಹೇಳಿದರು. ಗಾಯಾಳುಗಳು ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರ ಸ್ಥಿತಿ ಚಿಂತಾಜನಕವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಅಗ್ನಿಶಾಮಕ ಕಾರ್ಯಾಚರಣೆಯ ಸಮಯದಲ್ಲಿ ಇಡೀ ಪ್ರದೇಶವನ್ನು ಸುತ್ತುವರಿಯಲಾಗಿದೆ, ಬೆಂಕಿಯನ್ನು ಪ್ರಚೋದಿಸಲು ಕಾರಣವೇನು ಎಂಬುದನ್ನು ಖಚಿತಪಡಿಸಿಕೊಳ್ಳಲು ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಅವರು ಹೇಳಿದರು.

RELATED ARTICLES

Latest News