Tuesday, December 3, 2024
Homeಆರೋಗ್ಯ / ಜೀವನಶೈಲಿಮಾಗಿದ ಹಣ್ಣಿನ ಪರಿಮಳದಿಂದ ಕ್ಯಾನ್ಸರ್ ಬೆಳವಣಿಗೆ ತಡೆಯಬಹುದಂತೆ

ಮಾಗಿದ ಹಣ್ಣಿನ ಪರಿಮಳದಿಂದ ಕ್ಯಾನ್ಸರ್ ಬೆಳವಣಿಗೆ ತಡೆಯಬಹುದಂತೆ

ಕೋವಿಡ್-19ರ ಸಾಂಕ್ರಾಮಿಕ ಪಿಡುಗು ಕಾಣಿಸಿಕೊಂಡ ಬಳಿಕ ನಮ್ಮ ಘ್ರಾಣೇಂದ್ರಿಯದ (ವಾಸನೆಗಳನ್ನು ಗ್ರಹಿಸುವ ಅಂಗ) ಕಡೆಗೆ ಗಮನ ಹೆಚ್ಚಾಗಿದ್ದು, ಇದು ಸಂಶೋಧನೆಗಳತ್ತಲೂ ಮಾರ್ಗ ತೋರಿಸಿದೆ. ಮೂಗಿನ ಹೊರಳೆಗಳ ಮಿತಿಯಾಚೆಗೆ ವಾಸನೆಗಳಿಗೂ (ದುರ್ಗಂಧಗಳಿಗೂ) ಮತ್ತು ವಂಶವಾಹಿ ಅಭಿವ್ಯಕ್ತಿಗೂ ನಡುವೆ ಗಣನೀಯ ಸಂಬಂಧವಿದೆ ಎಂಬುದನ್ನು ಇತ್ತೀಚಿನ ಅಧ್ಯಯನಗಳು ತೋರಿಸಿವೆ.

ಈ ಶೋಧನೆಗಳು ಕ್ಯಾನ್ಸರ್ ಮತ್ತು ನರ ಸವೆಸುವ ರೋಗಗಳ ವಿರುದ್ಧದ ಹೋರಾಟದಲ್ಲಿ ಬಾಷ್ಪಶೀಲ (ಕೊಳೆಯುವ) ವಸ್ತುಗಳ ಚಿಕಿತ್ಸಕ ಉಪಯೋಗದ ಕುರಿತು ವಿಜ್ಞಾನಿಗಳಲ್ಲಿ ಜಿಜ್ಞಾಸೆ ಮೂಡಿಸಿವೆ. ಈ ಸಂಶೋಧನೆಗಳಿಂದ ಹೊರಹೊಮ್ಮಿರುವ ಅನಿರೀಕ್ಷಿತ ವಿಚಾರವೆಂದರೆ ವಂಶವಾಹಿ ಅಭಿವ್ಯಕ್ತಿಯ ಮೇಲೆ ವಾಸನೆಗಳ ನೇರ ಪರಿಣಾಮವಿದೆ ಎನ್ನುವುದಾಗಿದೆ.

ಈ ಆವಿಷ್ಕಾರವು ಕೆಲವು ನಿಗದಿತ ಚಿಕಿತ್ಸೆಗಳಲ್ಲಿ ಸುಗಂಧದ ಶಕ್ತಿಯ ಬಳಕೆಯ ಸಾಧ್ಯತೆಯನ್ನು ಪರಿಗಣಿಸಬಹುದೇ ಎಂದು ವಿಜ್ಞಾನಿಗಳು ಚಿಂತಿಸುವಂತೆ ಮಾಡಿದೆ. ಕೊಳೆಯುವ ಹಣ್ಣುಗಳು ಮತ್ತು ಕೆಲವು ಆಹಾರ ಪದಾರ್ಥಗಳಲ್ಲಿ ಕಾಣಸಿಗುವ ಬಾಷ್ಪಶೀಲ ವಸ್ತುವಾದ ಡಯಾಸೆಟಿಲ್ ಆವಿಗೆ ಒಡ್ಡಿಕೊಳ್ಳುವುದು ಮಹತ್ವದ ಒಳನೋಟಗಳನ್ನು ಒದಗಿಸಿದೆ. ನೊಣಗಳು, ಇಲಿ ಮತ್ತು ಡಯಾಸೆಟಿಲ್‍ಗೆ ಸಂಬಂಧಪಡುವ ಮಾನವ ಜೀವಕೋಶಗಳು ವಂಶವಾಹಿ ಅಭಿವ್ಯಕ್ತಿಯಲ್ಲಿ, ವಿಶೇಷವಾಗಿ ಮಿದುಳು ಮತ್ತು ಶ್ವಾಸಕೋಶಗಳಂಥ ಮಹತ್ವದ ಅಂಗಗಳಲ್ಲಿ ಗಣನೀಯ ಪರಿವರ್ತನೆಯನ್ನು ತರುವುದು ಕಂಡುಬಂದಿದೆ.

ಗಣನೀಯವಾಗಿ ಡಯಾಸೆಟಿಲ್ ಕ್ಯಾನ್ಸರ್ ಚಿಕಿತ್ಸೆಯಲ್ಲಿ ಬಳಸಲಾಗುವ ಹಿಸ್ಟೋನ್ ಡೀ ಅಸೆಟಲೇಸ ಇನ್‍ಹಿಬಿಟರ್ (ಹೆಚ್‍ಡಿಎಸಿ)ನಂತೆ ಕಾರ್ಯನಿರ್ವಹಿಸುತ್ತದೆ. ವಿಜ್ಞಾನಿಗಳ ಈ ಆವಿಷ್ಕಾರದಿಂದ ಕ್ಯಾನ್ಸರ್ ಬೆಳೆಯದಂತೆ ಮತ್ತು ನರಕೋಶಗಳು ಸವೆಯದಂತೆ ತಡೆಗಟ್ಟುವ ಉತ್ತಮ ಚಿಕಿತ್ಸಾ ಕಾರ್ಯತಂತ್ರಗಳನ್ನು ಅಭಿವೃದ್ಧಿಪಡಿಸಬಹುದು ಎಂಬ ಆಶಾಭಾವನೆ ಮೂಡಿದೆ.

ಹೀಗಿದ್ದರೂ ಆರೋಗ್ಯದ ಮೇಲೆ ಇದರಿಂದ ಆಗುವ ಅಪಾಯಗಳ ಆತಂಕ ನಿವಾರಿಸಿಕೊಳ್ಳಲು ಮತ್ತಷ್ಟು ಅಧ್ಯಯನಗಳು ನಡೆಯಬೇಕಿದೆ. ಡಯಾಸಿಟೈಲ್ ಕ್ಯಾನ್ಸರ್ ಕಣದ ಬೆಳವಣಿಗೆ ಮತ್ತು ನರಕೋಶಗಳ ಸವಕಳಿ ತಡೆಯುವ ಬಗ್ಗೆ ಭರವಸೆ ಮೂಡಿಸುತ್ತಿದ್ದರೂ ಆಬ್ಲಿಟರೇಟಿವ್ ಬ್ರಾಂಕಿಯೋಲೈಟಿಸ್‍ನಂತಹ ಶ್ವಾಸಕೋಶಗಳ ಕಾಯಿಲೆಗಳಲ್ಲಿ ಇದರ ಸಂಬಂಧ ಕುರಿತಂತೆ ಎಚ್ಚರಿಕೆಯ ಸಂದೇಶ ರವಾನಿಸಿದೆ. ಹೀಗಾಗಿ ಕೊಳೆಯುವ ವಸ್ತುಗಳನ್ನು ಚಿಕಿತ್ಸಕ ಬಳಕೆಗೆ ಪರಿಗಣಿಸುವ ಮುನ್ನ ಅವುಗಳ ಸುರಕ್ಷಿತತೆ ಮತ್ತು ಕಾರ್ಯದಕ್ಷತೆ ಬಗ್ಗೆ ಗಹನ ಸಂಶೋಧನೆಗಳು ನಡೆಯಬೇಕಿದೆ.

ಮಿಗಿಲಾಗಿ ಈ ಸಂಶೋಧನೆ ಕೃಷಿ ಪದ್ಧತಿಗಳು ಮತ್ತು ಸುರಕ್ಷತಾ ಮೌಲ್ಯಮಾಪನಗಳಿಗಾಗಿನ ವ್ಯಾಪಕ ಪರಿಣಾಮಗಳನ್ನು ಇನ್ನೂ ರುಜುವಾತುಪಡಿಸಿಲ್ಲ. ಇದು ದೈನಂದಿನ ಜೀವನದಲ್ಲಿ ಎದುರುಗೊಳ್ಳುವ ಬಾಷ್ಪಶೀಲ ರಾಸಾಯನಿಕಗಳ ಸುರಕ್ಷತೆಯನ್ನು ಅಂದಾಜಿಸುವುದರ ಪ್ರಾಮುಖ್ಯದ ಬಗ್ಗೆ ಗಮನ ಸೆಳೆದಿದೆ. ಇವುಗಳಲ್ಲಿ ಆಹಾರ ಮತ್ತು ಸೂಕ್ಷ್ಮ ಜೈವಿಕ ಮೂಲಗಳಿಂದ ಹೊರಸೂಸುವ ಗಂಧಗಳೂ ಸೇರಿವೆ. ಇಷ್ಟೇ ಅಲ್ಲದೆ ಈ ಅಧ್ಯಯನವು ಈ ವಿಚಾರವನ್ನು ವ್ಯವಸಾಯದಲ್ಲೂ ಅಳವಡಿಸಿಕೊಳ್ಳಲು ಸಲಹೆ ಮಾಡುತ್ತದೆ. ಏಕೆಂದರೆ ಪರಿಸರದಲ್ಲಿ ಸಸ್ಯಗಳೂ ಸಹ ಕೊಳೆಯುವ ವಸ್ತುಗಳಿಗೆ ಪ್ರತಿಕ್ರಿಯಿಸುತ್ತವೆ.

RELATED ARTICLES

Latest News