Monday, November 25, 2024
Homeರಾಜ್ಯರಾಜ್ಯದಲ್ಲಿ ಈವರೆಗೆ 446.92 ಕೋಟಿ ರೂ.ಗಳಿಗೂ ಹೆಚ್ಚು ಚುನಾವಣಾ ಅಕ್ರಮ ಪತ್ತೆ

ರಾಜ್ಯದಲ್ಲಿ ಈವರೆಗೆ 446.92 ಕೋಟಿ ರೂ.ಗಳಿಗೂ ಹೆಚ್ಚು ಚುನಾವಣಾ ಅಕ್ರಮ ಪತ್ತೆ

ಬೆಂಗಳೂರು,ಮೇ.1- ರಾಜ್ಯದ 14 ಲೋಕಸಭಾ ಕ್ಷೇತ್ರಗಳ ಮತದಾನ ಮುಕ್ತಾಯವಾದ ಬಳಿಕ ಜಪ್ತಿಯಾಗುತ್ತಿರುವ ನಗದು, ಚಿನ್ನ, ಬೆಳ್ಳಿ, ಡ್ರಗ್ಸ್ , ಉಚಿತ ಉಡುಗೊರೆಗಳ ಪ್ರಮಾಣ ಇಳಿಕೆಯಾಗಿದೆ. ಆದರೂ ಈವರೆಗೆ 446.92 ಕೋಟಿ ರೂ.ನಷ್ಟು ಜಪ್ತಿ ಮಾಡಲಾಗಿದೆ.

ಮಾ.16 ರಿಂದ ರಾಜ್ಯದಲ್ಲಿ ಮಾದರಿ ನೀತಿ ಸಂಹಿತೆ ಜಾರಿಗೆ ಬಂದಿದ್ದು, ಅಂದಿನಿಂದ ನಿಯಮಬಾಹಿರವಾಗಿ ಸಾಗಾಟ ಮಾಡುವ ಹಣ, ಮದ್ಯ, ಡ್ರಗ್‌್ಸ, ಚಿನ್ನ, ಬೆಳ್ಳಿ ಹಾಗೂ ಇತರ ವಸ್ತುಗಳನ್ನು ನಿರಂತರವಾಗಿ ಜಪ್ತಿ ಮಾಡಲಾಗುತ್ತಿದೆ. ಈತನಕ ಒಟ್ಟಾರೆ 446.92 ಕೋಟಿ ರೂ.ನಷ್ಟು ನಗದು, ಚಿನ್ನ, ಬೆಳ್ಳಿ ಹಾಗೂ ಇತರ ವಸ್ತುಗಳನ್ನು ಜಪ್ತಿ ಮಾಡಿಕೊಳ್ಳಲಾಗಿದೆ ಎಂದು ರಾಜ್ಯ ಮುಖ್ಯ ಚುನಾವಣಾಧಿಕಾರಿಗಳ ಕಚೇರಿ ಪ್ರಕಟಣೆ ತಿಳಿಸಿದೆ.

ರಾಜ್ಯದ 2ನೇ ಹಂತದ 14 ಕ್ಷೇತ್ರಗಳಿಗೆ ಮತದಾನ ನಡೆಯಲು ಇನ್ನೂ ಒಂದು ವಾರ ಬಾಕಿ ಇದೆ. ಹೀಗಾಗಿ ಉತ್ತರ ಕರ್ನಾಟಕ ಭಾಗದಲ್ಲಿ ಪ್ರತಿನಿತ್ಯ ನಗದು, ಮದ್ಯ, ಡ್ರಗ್ಸ್ , ಉಚಿತ ಉಡುಗೊರೆ ಸೇರಿದಂತೆ ಒಂದಲ್ಲಾ ಒಂದು ವಸ್ತುಗಳು ಪೊಲೀಸ್‌ ಕ್ಷಿಪ್ರಪಡೆಗಳು, ಸ್ಥಿರ ಕಣ್ಗಾವಲು ತಂಡಗಳಿಗೆ ಸಿಗುತ್ತಲೇ ಇವೆ. ರಾಜ್ಯದಲ್ಲಿ 140.32 ಕೋಟಿ ರೂ. ಮೊತ್ತದ ನಗದು, ಮದ್ಯ, ಡ್ರಗ್ಸ್ , ಚಿನ್ನ, ಬೆಳ್ಳಿ, ಉಚಿತ ಉಡುಗೊರೆಗಳನ್ನು ಪೊಲೀಸರು, ಕ್ಷಿಪ್ರಪಡೆಗಳು, ಸ್ಥಿರ ಕಣ್ಗಾವಲು ತಂಡಗಳು ವಶಪಡಿಸಿಕೊಂಡಿವೆ.

ಅಬಕಾರಿ ಇಲಾಖೆಯವರು 178.39 ಕೋಟಿ ರೂ. ವೌಲ್ಯದ ಮದ್ಯ, ಡ್ರಗ್‌್ಸ ಅನ್ನು ವಶಪಡಿಸಿಕೊಂಡಿದ್ದಾರೆ. ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು 48.09 ಕೋಟಿ ರೂ. ವೌಲ್ಯದ ನಗದು, ಚಿನ್ನ, ವಜ್ರದ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ವಾಣಿಜ್ಯ ತೆರಿಗೆ ಅಧಿಕಾರಿಗಳು 80.11 ಕೋಟಿ ರೂ. ಮೊತ್ತದ ಚಿನ್ನ, ಬೆಳ್ಳಿ, ಉಚಿತ ಉಡುಗೊರೆ ಹಾಗೂ ಇತರ ವಸ್ತುಗಳನ್ನು ವಶಪಡಿಸಿಕೊಂಡಿದ್ದಾರೆ.

616.48 ಕೆಜಿ ತೂಕದ 11.54 ಕೋಟಿ ರೂ. ವೌಲ್ಯದ ಡ್ರಗ್ಸ್ ಹಾಗೂ 178.84 ಕೋಟಿ ರೂ. ಮೊತ್ತದ ಮದ್ಯ, 137.25 ಕೆಜಿ ಚಿನ್ನ, 302.37 ಕೆಜಿ ಬೆಳ್ಳಿ, 47.23 ಕ್ಯಾರೆಟ್‌ ವಜ್ರವನ್ನು ವಶಪಡಿಸಿಕೊಳ್ಳಲಾಗಿದೆ.ಚುನಾವಣೆ ಹಿನ್ನೆಲೆಯಲ್ಲಿ ಇದುವರೆಗೆ 2,226 ಎಫ್‌ಐಆರ್‌ಗಳನ್ನು ದಾಖಲಿಸಲಾಗಿದ್ದು, 1,996 ವಿವಿಧ ರೀತಿಯ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ.

ಶಿವಮೊಗ್ಗ ಲೋಕಸಭಾ ಕ್ಷೇತ್ರದ ಬೈಂದೂರಿನಲ್ಲಿ 15 ಲಕ್ಷ ರೂ. ನಗದನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ಅಬಕಾರಿ ಇಲಾಖೆಯವರು ಕೊಪ್ಪಳ ಲೋಕಸಭಾ ಕ್ಷೇತ್ರ ವ್ಯಾಪ್ತಿಯಲ್ಲಿ 1,115 ಕೇಸ್‌ ಪೆಟ್ಟಿಗೆಗಳ ಬಿಯರ್‌ ಅನ್ನು ವಶಪಡಿಸಿಕೊಂಡಿದ್ದಾರೆ. ಇದರ ವೌಲ್ಯ 29,33,512 ರೂ. ಎಂದು ಅಂದಾಜಿಸಲಾಗಿದೆ.

RELATED ARTICLES

Latest News