Sunday, July 7, 2024
Homeರಾಜ್ಯಕೇಂದ್ರ ಸಂಪುಟ ರಚನೆಯಲ್ಲಿ ಸಾಮಾಜಿಕ ನ್ಯಾಯ ಪಾಲನೆ ಆಗಿಲ್ಲ : ಗೃಹಸಚಿವ ಪರಮೇಶ್ವರ್‌

ಕೇಂದ್ರ ಸಂಪುಟ ರಚನೆಯಲ್ಲಿ ಸಾಮಾಜಿಕ ನ್ಯಾಯ ಪಾಲನೆ ಆಗಿಲ್ಲ : ಗೃಹಸಚಿವ ಪರಮೇಶ್ವರ್‌

ಬೆಂಗಳೂರು,ಜೂ.10- ಕೇಂದ್ರ ಸಚಿವ ಸಂಪುಟದಲ್ಲಿ ಸಾಮಾಜಿಕ ನ್ಯಾಯ ಪಾಲಿಸದೇ ಇರುವ ಬಿಜೆಪಿಗೆ ಪರಿಶಿಷ್ಟರು ಹಾಗೂ ಹಿಂದುಳಿದವರ ಸಹಕಾರ ಬೇಕಿಲ್ಲ ಎಂದೆನಿಸುತ್ತದೆ ಎಂದು ಗೃಹಸಚಿವ ಡಾ.ಜಿ.ಪರಮೇಶ್ವರ್‌ ವಿಶ್ಲೇಷಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜ್ಯದಲ್ಲಿ ಬಿಜೆಪಿಯಿಂದ ಪರಿಶಿಷ್ಟ ಜಾತಿ ಹಾಗೂ ಹಿಂದುಳಿದ ವರ್ಗಗಳ ಸಂಸದರು ಆಯ್ಕೆಯಾಗಿದ್ದರು. ಅವರನ್ನು ಕೇಂದ್ರ ಸಂಪುಟಕ್ಕೆ ಪರಿಗಣಿಸಬಹುದಿತ್ತು. ಆ ಸಮುದಾಯಗಳನ್ನು ನಿರ್ಲಕ್ಷಿಸುವುದನ್ನು ನೋಡಿದರೆ ಬಿಜೆಪಿಗೆ ಪರಿಶಿಷ್ಟ ಜಾತಿಯ ಹಾಗೂ ಹಿಂದುಳಿದ ವರ್ಗದ ಸಮುದಾಯಗಳು ಬೇಕಿಲ್ಲ ಎಂದು ಭಾವಿಸಬಹುದು ಎಂದು ಹೇಳಿದರು.

ರಾಜ್ಯದಿಂದ ಕೇಂದ್ರಸಂಪುಟದಲ್ಲಿ ಸಚಿವರಾಗಿರುವ ಐದು ಮಂದಿಗೆ ಅಭಿನಂದನೆ ಸಲ್ಲಿಸುತ್ತೇನೆ. ಹೊಸ ಸಚಿವರ ಮುಂದೆ ಸವಾಲುಗಳು ದೊಡ್ಡದಿವೆ. ಜಿಎಸ್‌‍ಟಿ ಪಾಲಿನ ಹಂಚಿಕೆ, ರಾಜ್ಯದಲ್ಲಿನ ನೀರಾವರಿ ಯೋಜನೆಗೆ ನೆರವು, ಭದ್ರಾ ಮೇಲ್ದಂಡೆಯನ್ನು ರಾಷ್ಟ್ರೀಯ ಯೋಜನೆಯನ್ನಾಗಿ ಘೋಷಿಸುವುದು, ಕಳಸಾ ಬಂಡೂರಿ ಸಮಸ್ಯೆ ಬಗೆಹರಿಸುವುದು, ಮೇಕೆದಾಟಿಗೆ ಅನುಮತಿ ಸೇರಿದಂತೆ ನಾನಾ ರೀತಿಯ ಕೆಲಸಗಳಾಗಬೇಕು. ಕೇಂದ್ರ ಸಚಿವರು ಸಂಬಂಧಪಟ್ಟ ಸಚಿವಾಲಯಗಳು ಹಾಗೂ ಪ್ರಧಾನಮಂತ್ರಿಯವರ ಜೊತೆ ಚರ್ಚೆ ನಡೆಸಿ ರಾಜ್ಯಕ್ಕೆ ಅಗತ್ಯ ನೆರವು ಕೊಡಿಸಬೇಕು ಎಂದು ಒತ್ತಾಯಿಸಿದರು.

ಹೊಸ ಸರ್ಕಾರದ ಮೇಲೆ ಸಾಕಷ್ಟು ವಿಶ್ವಾಸವಿದೆ. ಅದು ಈಡೇರದೇ ಇದ್ದರೆ ಮತ್ತೆ ಪ್ರತಿಭಟನೆ ಅನಿವಾರ್ಯವಾಗುತ್ತದೆ. ಅದಕ್ಕೆ ಅವಕಾಶವಾಗದಂತೆ ಕೇಂದ್ರ ಸರ್ಕಾರ ನಡೆದುಕೊಳ್ಳಬೇಕು ಎಂದರು.

ಎಚ್‌.ಡಿ.ಕುಮಾರಸ್ವಾಮಿಯವರು 2 ಬಾರಿ ಮುಖ್ಯಮಂತ್ರಿಯಾಗಿದ್ದ ಅನುಭವಿ ರಾಜಕಾರಣಿ. ಅವರ ಮೇಲೆ ಬಹಳಷ್ಟು ನಿರೀಕ್ಷೆಗಳಿವೆ. ರಾಜ್ಯದ ಹಿತ ಕಾಪಾಡುವ ನಿಟ್ಟಿನಲ್ಲಿ ಅವರು ಶ್ರಮಿಸುತ್ತಾರೆ ಎಂಬ ವಿಶ್ವಾಸವಿದೆ ಎಂದು ಹೇಳಿದರು.

ಜಮು-ಕಾಶೀರದಲ್ಲಿ ಭಯೋತ್ಪಾದನಾ ಚಟುವಟಿಕೆಗಳನ್ನು ಹತ್ತಿಕ್ಕಿ ಶಾಂತಿಯ ವಾತಾವರಣ ನಿರ್ಮಿಸಲಾಗಿದೆ ಎಂದು ಕೇಂದ್ರಸರ್ಕಾರ ಹೇಳಿಕೊಳ್ಳುತ್ತದೆ. ಆದರೆ ಭಯೋತ್ಪಾದನಾ ಧಾಳಿಯಿಂದ ತಪ್ಪಿಸಿಕೊಳ್ಳಲು ರಸ್ತೆ ಬದಿ ಚಲಿಸಿದ್ದ ಯೋಧರಿದ್ದ ಬಸ್ಸು ಕಂದಕಕ್ಕೆ ಉರುಳಿ ದುರ್ಘಟನೆ ಸಂಭವಿಸಿದೆ. ಇದರರ್ಥ ಜಮು-ಕಾಶೀರದಲ್ಲಿ ಭಯೋತ್ಪದನಾ ಚಟುವಟಿಕೆ ಪೂರ್ತಿಯಾಗಿ ನಿಂತಿಲ್ಲ ಎಂದರು.

RELATED ARTICLES

Latest News