ಬೆಂಗಳೂರು, ಮೇ27-ಶಾಸಕರಾದ ಎಸ್.ಟಿ.ಸೋಮಶೇಖರ್ ಮತ್ತು ಶಿವರಾಮ್ ಹೆಬ್ಬಾರ್ ಅವರನ್ನು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದ ಉಚ್ಛಾಟನೆ ಮಾಡಿರುವ ಕಾರಣ ಬಿಜೆಪಿಯ ಶಾಸಕರ ಸಂಖ್ಯೆ 62ಕ್ಕೆ ಕುಸಿದಿದೆ.
2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ 66 ಸ್ಥಾನಗಳನ್ನು ಗೆದ್ದಿತ್ತು. ಕೆಲ ತಿಂಗಳ ಹಿಂದೆ ನಡೆದ ಶಿಗ್ಗಾವಿ ಉಪಚುನಾವಣೆಯಲ್ಲಿ ಕಾಂಗ್ರೆಸ್ ಗೆದ್ದಿದ್ದರಿಂದ 65ಕ್ಕೆ ಇಳಿದಿತ್ತು. ಇದರ ಬೆನ್ನಲ್ಲೇ ಪಕ್ಷ ವಿರೋಧಿ ಚಟುವಟಿಕೆ ನಡೆಸಿದ ಆರೋಪದ ಹಿನ್ನಲೆಯಲ್ಲಿ ಬಿಜಾಪುರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರನ್ನು ಮಾರ್ಚ್ 26ರಂದು ಪಕ್ಷದ ಪ್ರಾಥಮಿಕ ಸದಸ್ಯತ್ವದಿಂದಲೇ ಉಚ್ಛಾಟನೆ ಮಾಡಿದ್ದರಿಂದ ಕಮಲದ ಸಂಖ್ಯೆ 64ಕ್ಕೆ ಇಳಿದಿತ್ತು.
BIG BREAKING : ಬಿಜೆಪಿಯಿಂದ ಶಾಸಕರಾದ ಶಿವರಾಂ ಹೆಬ್ಬಾರ್, ಎಸ್.ಟಿ. ಸೋಮಶೇಖರ್ ಉಚ್ಚಾಟನೆ
ಈ ಬೆಳವಣಿಗೆಗಳ ನಡುವೆಯೇ ಯಶವಂತಪುರದ ಶಾಸಕ ಎಸ್.ಟಿ.ಸೋಮಶೇಖರ್ ಮತ್ತು ಯಲ್ಲಾಪುರ ಶಾಸಕ ಶಿವರಾಮ್ ಹೆಬ್ಬಾರ್ ಅವರನ್ನು ಕೂಡ ಪಕ್ಷ ವಿರೋಧಿ ಚಟುವಟಿಕೆ ಹಿನ್ನಲೆಯಲ್ಲಿ ಆರು ವರ್ಷಗಳ ಕಾಲ ಉಚ್ಛಾಟಿಸಿ ಬಿಜೆಪಿಯಿಂದಲೇ ಹೊರದಬ್ಬಲಾಗಿದೆ.
ಹೀಗಾಗಿ ಬಿಜೆಪಿ ಶಾಸಕರ ಸಂಖ್ಯೆ 62ಕ್ಕೆ ಇಳಿಕೆಯಾಗಿದೆ. ರಾಜ್ಯದ ಒಟ್ಟು 224 ಕ್ಷೇತ್ರಗಳ ಪೈಕಿ ಆಡಳಿತಾರೂಢ ಕಾಂಗ್ರೆಸ್ 138, ಬಿಜೆಪಿ 62, ಜೆಡಿಎಸ್ 18 ಹಾಗೂ ಪಕ್ಷೇತರರು 2, ಉಚ್ಛಾಟಿತರು 3 ಹಾಗೂ 1 ಸ್ಥಾನ ಖಾಲಿ ಇದೆ.
ಸೋಮಶೇಖರ್-ಹೆಬ್ಬಾರ್ ಉಚ್ಚಾಟನೆ ಬಿಜೆಪಿಯಲ್ಲೇ ಪರ-ವಿರೋಧ ಅಭಿಪ್ರಾಯ