ಅನೇಕಲ್,ಜ.5-ಮನೆಯಲ್ಲಿ ತಾಯಿಯನ್ನು ಕೊಂದು ಬಳಿಕ ಮಗನೂ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಭೀಕರ ಘಟನೆ ಹಳೆ ಚಂದಾಪುರದಲ್ಲಿ ನಡೆದಿದೆ. ಲಕ್ಷ್ಮಿ ದೇವಿ (41) ಕೊಲೆಯಾದ ಮಹಿಳೆ. ರಮೇಶ್ (21) ತಾಯಿಯನ್ನ ಕೊಲೆ ಮಾಡಿ ಆತಹತ್ಯೆಗೆ ಶರಣಾದ ಮಗ.
ಚಿತ್ರದುರ್ಗ ಜಿಲ್ಲೆ ಚಳ್ಳಕೆರೆಯ ಚಿಕ್ಕಹಳ್ಳಿ ಮೂಲದ ಮಂಜಣ್ಣ ತನ್ನ ಪತ್ನಿ ಮಹಾಲಕಿ ಮತ್ತು ಪುತ್ರರಮೇಶ್‌ನೊಂದಿಗೆ ಕಳೆದ 7 ವರ್ಷದ ಹಿಂದೆ ಕೆಲಸ ಅರಸಿಕೊಂಡು ಇಲ್ಲಿಗೆ ಬಂದು ಬಾಡಿಗೆ ಮನೆಯಲ್ಲಿ ವಾಸವಾಗಿದ್ದರು.
ಮಂಜಣ್ಣ ಸ್ಥಳೀಯ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ಲಕ್ಷಿ ದೇವಿ ಸಣ್ಣಪುಟ್ಟ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದರು.ಮೂರ್ಚೆ ರೋಗದಿಂದ ಬಳಲುತ್ತಿದ್ದ ಆಗಗ ಪಿಟ್ಸ್ ಬರುತ್ತಿತ್ತು.ಪೋಷಕರು ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಿಸಿದ್ದರು.
ಸಣ್ಣ ಪುಟ್ಟ ಕೆಲಸ ಮಾಡುತ್ತಾ ಉಂಡಾಡಿಗುಂಡನಾಗಿ ಸರಿಯಾಗಿ ಔಷದ ಮಾತ್ರೆ ತೆಗೆದುಕೊಳ್ಳದೆ ಮದ್ಯವ್ಯಸನಗಿಯಾಗಿ ತಂಟೆ ಮಾಡುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.ನಿನ್ನೆ ರಾತ್ರಿ 10.30ರಲ್ಲಿ ಕುಡಿದು ಮನೆಗೆ ಬಂದ ರಮೇಶ್ ಮತ್ತೆ ತಾಯಿ ಲಕ್ಷಿ ದೇವಿ ಜೊತೆ ಗಲಾಟೆ ಮಾಡಿದ್ದ ಇದು ವಿಕೋಪಕ್ಕೆ ತಿರುಗಿ ಮೊಬೈಲ್ ಚಾರ್ಜಿಂಗ್ ವೈರ್‌ನಿಂದ ತಾಯಿ ಕುತ್ತಿಗೆಗೆ ಬಿಗಿದು ಹತ್ಯೆ ಮಾಡಿದ್ದಾನೆ.
ಕೆಲಸ ಮುಗಿಸಿಕೊಂಡ ಮಂಜಣ್ಣ ಮನೆಗೆ ಬಂದಾಗ ಈ ದೃಶ್ಯ ನೋಡಿ ಕೂಗಿಕೊಂಡಿದ್ದಾರೆ. ಅಕ್ಕಪಕ್ಕದವರು ತಕ್ಷಣ ಪೊಲೀಸರಿಗೆ ಮಾಹಿತಿ ನೀಡಿದ್ದು ,ಸ್ಥಳಕ್ಕೆ ದಾವಿಸಿದ ಸೂರ್ಯನಗರ ಪೊಲೀಸರ ಪರಿಶೀಲನೆ ನಡೆಸಿ ಮೃತ ದೇಹಗಳನ್ನು ಅತ್ತಿಬೆಲೆ ಆಕ್‌್ಸಫರ್ಡ್ ಆಸ್ಪತ್ರೆಗೆ ರವಾನಿಸಿದ್ದಾರೆ.ಬೆಂಗಳೂರು ಗ್ರಾಮಾಂತರ ಹೆಚ್ಚುವರಿ ಎಸ್‌ಪಿ ನಾಗೇಶ್ ಕುಮಾರ್ ಸ್ಥಳಕ್ಕೆ ಭೇಟಿ ಪರಿಶೀಲನೆ ನಡೆಸಿದ್ದಾರೆ.