Thursday, June 20, 2024
Homeಜಿಲ್ಲಾ ಸುದ್ದಿಗಳುಲಾರಿ ಖರೀದಿ ವಿಚಾರಕ್ಕೆ ಜಗಳ : ಅಪ್ಪನನ್ನೇ ಕೊಂದ ಮಗ

ಲಾರಿ ಖರೀದಿ ವಿಚಾರಕ್ಕೆ ಜಗಳ : ಅಪ್ಪನನ್ನೇ ಕೊಂದ ಮಗ

ಹಾಸನ, ಜೂ.11-ಲಾರಿ ಖರೀದಿ ವಿಚಾರವಾಗಿ ತಂದೆ-ಮಗನ ನಡುವೆ ನಡೆದ ಜಗಳ ಅಪ್ಪನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ ಆಲೂರು ತಾಲ್ಲೂಕಿನ ಕಡಬಗಾಲ ಗ್ರಾಮದಲ್ಲಿ ತಡರಾತ್ರಿ ನಡೆದಿದೆ.

ಚಂದ್ರಶೇಖರ್‌ (60) ಕೊಲೆಯಾದ ತಂದೆ. ಈತನ ಪುತ್ರ ಸಚಿನ್‌ (30) ಡ್ರೈವರ್‌ ಕೆಲಸ ಮಾಡುತ್ತಿದ್ದು, ಕಂಠಪೂರ್ತಿ ಕುಡಿದು ಬಂದು ಜಮೀನು ಮಾರಾಟ ಮಾಡಿ ಲಾರಿ ಕೊಡಿಸುವಂತೆ ತಂದೆ ಜತೆ ಜಗಳವಾಡುತ್ತಿದ್ದ.

ಕಳೆದ ರಾತ್ರಿಯೂ ಸಹ ಕುಡಿದು ಬಂದು ನನಗೆ ಕೂಡಲೇ ಲಾರಿ ಕೊಡಿಸುವಂತೆ ಜಗಳ ಮಾಡಿದ್ದಾನೆ. ಈ ವೇಳೆ ಮಾತಿಗೆ ಮಾತು ಬೆಳೆದಿದ್ದು, ಕುಡಿದ ಮತ್ತಿನಲ್ಲಿದ್ದ ಸಚಿನ್‌ ಎಡೆಮಟ್ಟೆಯಿಂದ ತಂದೆಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಿದ್ದಾನೆ.

ತೀವ್ರ ರಕ್ತಸ್ರಾವದಿಂದ ಚಂದ್ರಶೇಖರ್‌ ಸ್ಥಳದಲ್ಲೇ ಮೃತಪಟ್ಟಿದ್ದಾನೆ ಎಂದು ತಿಳಿದುಬಂದಿದೆ.ಸುದ್ದಿ ತಿಳಿದ ಕೂಡಲೇ ಆಲೂರು ಠಾಣೆ ಪೊಲೀಸರು ಸ್ಥಳಕ್ಕಾಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News