Wednesday, October 16, 2024
Homeಜಿಲ್ಲಾ ಸುದ್ದಿಗಳು | District Newsಕುಡಿದ ಮತ್ತಿನಲ್ಲಿ ತಾಯಿಯನ್ನೇ ಚುಚ್ಚಿ ಕೊಂದ ಮಗ

ಕುಡಿದ ಮತ್ತಿನಲ್ಲಿ ತಾಯಿಯನ್ನೇ ಚುಚ್ಚಿ ಕೊಂದ ಮಗ

Son Killed Mother

ದೊಡ್ಡಬಳ್ಳಾಪುರ,ಸೆ.10– ಕುಡಿದ ಮತ್ತಿನಲ್ಲಿ ತಾಯಿಯನ್ನೇ ಮಗ ಚಾಕುವಿನಿಂದ ಚುಚ್ಚಿ ಕೊಲೆ ಮಾಡಿರುವ ಘಟನೆ ತಾಲೂಕಿನ ಮುದ್ದನಾಯಕನಹಳ್ಳಿ ಗ್ರಾಮದಲ್ಲಿ ನಡೆದಿದೆ.ಕೊಲೆಯಾದ ದುರ್ದೈವಿಯನ್ನು ರತ್ನಮ ಎಂದು ಗುರುತಿಸಲಾಗಿದೆ.

ತಾಲೂಕಿನ ಮುದ್ದನಾಯಕನಹಳ್ಳಿ ಗ್ರಾಮದ ರಾಗರಾಳಗುಟ್ಟೆ ದಿಣ್ಣೆಯ ಮಂಟಪದಲ್ಲಿ ತಾಯಿ ರತ್ನಮ ಮಗ ಗಂಗರಾಜು ವಾಸವಾಗಿದ್ದರು. ಕುಡಿತದ ದಾಸನಾಗಿದ್ದ ಪುತ್ರ ಆಗಾಗ್ಗೆ ತಾಯಿಯೊಂದಿಗೆ ಜಗಳ ಮಾಡುತ್ತಿದ್ದ. ನಿನ್ನೆಯೂ ಕೂಡ ಕಂಠಪೂರ್ತಿ ಕುಡಿದುಬಂದು ತಾಯಿಯೊಂದಿಗೆ ವಿನಾಕಾರಣ ಜಗಳವಾಡಿದ್ದಾನೆ.

ಈ ವೇಳೆ ಪರಿಸ್ಥಿತಿ ವಿಕೋಪಕ್ಕೆ ತಿರುಗಿ ಚಾಕುವಿನಿಂದ ತಾಯಿಯನ್ನು ಚುಚ್ಚಿ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.ಈ ಸಂಬಂಧ ಸ್ಥಳೀಯರು ದೊಡ್ಡಬಳ್ಳಾಪುರ ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿದ್ದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಆರೋಪಿ ಗಂಗರಾಜನನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News