Saturday, August 2, 2025
Homeಜಿಲ್ಲಾ ಸುದ್ದಿಗಳು | District Newsಚಿಕ್ಕಮಗಳೂರು | Chikkamagaluruತಾಯಿಯನ್ನು ಕೊಲೆ ಮಾಡಿ ಪಕ್ಕದಲ್ಲೇ ಮಲಗಿದ್ದ ಪಾಪಿ ಮಗ

ತಾಯಿಯನ್ನು ಕೊಲೆ ಮಾಡಿ ಪಕ್ಕದಲ್ಲೇ ಮಲಗಿದ್ದ ಪಾಪಿ ಮಗ

Son who murdered his mother and slept next to her

ಚಿಕ್ಕಮಗಳೂರು, ಜು.31 – ಕುಡಿದ ಮತ್ತಿನಲ್ಲಿ ಪುತ್ರನೇ ತನ್ನ ತಾಯಿಯನ್ನು ಬೆಂಕಿ ಹಚ್ಚಿ ಪಕ್ಕದಲ್ಲೇ ಮಲಗಿದ್ದ ಹೃದಯವಿದ್ರಾವಕ ಘಟನೆ ಜಿಲ್ಲೆಯ ಅರೆನೂರು ಸಮೀಪದ ಅಕ್ಕಿಮಕ್ಕಿ ಗ್ರಾಮದಲ್ಲಿ ನಡೆದಿದೆ. ಭವಾನಿ ಮೃತಪಟ್ಟವರು.

ಕೂಲಿ ಕೆಲಸ ಮಾಡಿಕೊಂಡು ಜೀವನ ಸಾಗಿಸುತ್ತಿದ್ದ ಪವನ್ ತಾಯಿಯ ಜೊತೆ ಅಕ್ಕಿಮಕ್ಕಿ ಗ್ರಾಮದಲ್ಲಿ ವಾಸವಾಗಿದ್ದ. ಕಳೆದ ರಾತ್ರಿ ಕಂಠಪೂರ್ತಿ ಕುಡಿದುಬಂದು ತಾಯಿಯ ಜೊತೆ ವಿನಾಕಾರಣ ಜಗಳ ತೆಗೆದಿದ್ದು, ಆಕೆಗೆ ಬೆಂಕಿ ಹಚ್ಚಿ ಸುಟ್ಟಿದ್ದಲ್ಲದೆ, ಪ್ರಜ್ಞಾಹೀನನಾಗಿ ಪಕ್ಕದಲ್ಲೇ ಮಲಗಿದ್ದನು.

ಮಹಿಳೆಯ ಚೀರಾಟ ಕೇಳಿ ಅಕ್ಕಪಕ್ಕದವರು ದೌಡಾಯಿಸಿ ಬಂದು ನೋಡುವಷ್ಟರಲ್ಲೇ ಭವಾನಿ ಸಂಪೂರ್ಣವಾಗಿ ಸುಟ್ಟು ಕರಕಲಾಗಿದ್ದರು. ವಿಷಯ ತಿಳಿದ ಕೂಡಲೇ ಆಲ್ಲೂರು ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ತಾಯಿ ಕೊಂದ ಪಾಪಿ ಮಗನನ್ನು ಬಂಧಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News