Monday, May 6, 2024
Homeರಾಜ್ಯಶ್ರೀ ಗುರುರಾಘವೇಂದ್ರ, ವಸಿಷ್ಠ ಬ್ಯಾಂಕ್ ಹಗರಣ ತನಿಖೆಗೆ ವಿಶೇಷ ದಳ ರಚನೆ ಡಿಸಿಎಂ

ಶ್ರೀ ಗುರುರಾಘವೇಂದ್ರ, ವಸಿಷ್ಠ ಬ್ಯಾಂಕ್ ಹಗರಣ ತನಿಖೆಗೆ ವಿಶೇಷ ದಳ ರಚನೆ ಡಿಸಿಎಂ

ಬೆಂಗಳೂರು,ಏ.24- ಶ್ರೀ ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಮತ್ತು ವಸಿಷ್ಠ ಬ್ಯಾಂಕ್ ಹಗರಣದ ತನಿಖೆಗೆ ವಿಶೇಷ ತನಿಖಾ ದಳ ರಚಿಸಿ ಠೇವಣಿದಾರರಿಗೆ ನ್ಯಾಯ ದೊರಕಿಸಲು ಕ್ರಮ ಕೈಗೊಳ್ಳುವುದಾಗಿ ಕೆಪಿಸಿಸಿ ಅಧ್ಯಕ್ಷ ಹಾಗೂ ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಭರವಸೆ ನೀಡಿದ್ದಾರೆ.

ಕೆಪಿಸಿಸಿ ಕಚೇರಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗುರುರಾಘವೇಂದ್ರ ಸಹಕಾರ ಬ್ಯಾಂಕ್‍ನಲ್ಲಿ 3 ಲಕ್ಷಕ್ಕೂ ಹೆಚ್ಚು ಜನ ತಮ್ಮ ಖಾತೆಯಲ್ಲಿ ಉಳಿತಾಯಕ್ಕೆ ಹಣವನ್ನಿಟ್ಟಿದ್ದರು. ಅದು ಬಿಜೆಪಿ ನಾಯಕರ ಪಾಲಾಗಿದೆ. ಹೀಗಾಗಿ ತೊಂದರೆಗೆ ಸಿಲುಕಿದ ಬಹಳಷ್ಟು ಜನ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಒಟ್ಟು 300 ಕ್ಕೂ ಹೆಚ್ಚು ಪ್ರಾಣಹಾನಿಯಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಹಗರಣವನ್ನು ರಾಜ್ಯಸರ್ಕಾರ ಈಗಾಗಲೇ ಸಿಬಿಐ ತನಿಖೆಗೆ ಒಪ್ಪಿಸಿದೆ. ಆದರೆ ಹಗರಣದಲ್ಲಿ ಬಿಜೆಪಿ ನಾಯಕರೇ ಹೆಚ್ಚು ಭಾಗಿಯಾಗಿರುವುದರಿಂದಾಗಿ ಸಿಬಿಐ ಈವರೆಗೂ ತನಿಖೆ ಕೈಗೆತ್ತಿಕೊಂಡಿಲ್ಲ. ಬೇರೆಬೇರೆ ಪ್ರಕರಣಗಳಲ್ಲಿ ನಮ್ಮಂಥವರಿಗೆ ಕಿರುಕುಳ ಕೊಡುವುದರಲ್ಲಿ ಸಿಬಿಐ ತೊಡಗಿದೆ ಎಂದು ಆರೋಪಿಸಿದರು.

ಗುರುರಾಘವೇಂದ್ರ ಸಹಕಾರ ಬ್ಯಾಂಕ್ ಮತ್ತು ವಸಿಷ್ಠ ಬ್ಯಾಂಕ್ ಠೇವಣಿದಾರರು ಇಂದು ಕಾಂಗ್ರೆಸ್‍ನ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಯವರನ್ನು ಭೇಟಿ ಮಾಡಿ ತಮ್ಮ ಅಳಲು ತೋಡಿಕೊಂಡರು.ಈ ವೇಳೆ ಠೇವಣಿದಾರರಿಗೆ ಭರವಸೆ ನೀಡಿರುವ ಪ್ರಿಯಾಂಕ ಗಾಂ ಸಿಬಿಐ ಸೂಕ್ತ ತನಿಖೆ ನಡೆಸಿ ನ್ಯಾಯ ಕೊಡಿಸುವುದಾದರೆ ಕೊಡಿಸಿ. ಇಲ್ಲವಾದರೆ, ರಾಜ್ಯಸರ್ಕಾರವೇ ವಿಶೇಷ ತನಿಖಾ ದಳ ರಚನೆ ಮಾಡಿ ಸಂತ್ರಸ್ತರ ನೆರವಿಗೆ ಬರಬೇಕು ಎಂದು ಸೂಚನೆ ನೀಡಿದ್ದಾರೆ.

ಈ ವಿಷಯವಾಗಿ ತಮ್ಮೊಂದಿಗೂ ಚರ್ಚಿಸಿದ್ದು, ಮುಖ್ಯಮಂತ್ರಿಯವರಿಗೆ ಪತ್ರ ಬರೆಯುವುದಾಗಿ ಪ್ರಿಯಾಂಕ ಗಾಂಧಿ ಹೇಳಿರುವುದಾಗಿ ಡಿ.ಕೆ.ಶಿವಕುಮಾರ್ ವಿವರಿಸಿದರು.ಲೋಕಸಭಾ ಚುನಾವಣೆ ಬಳಿಕ ಕಾನೂನು ರೀತಿಯಲ್ಲಿ ಎಸ್‍ಐಟಿ ರಚಿಸಿ ನ್ಯಾಯ ಕೊಡಿಸಲು ತಮ್ಮ ಸರ್ಕಾರ ಬದ್ಧವಾಗಿದೆ ಎಂದು ತಿಳಿಸಿದರು.

RELATED ARTICLES

Latest News