ಗಬ್ಬಾ, ಡಿ. 18– ಟೀಮ್ ಇಂಡಿಯಾದ ಲೆಜೆಂಡರಿ ಸ್ಪಿನ್ ಬೌಲರ್ ರವಿಚಂದ್ರನ್ ಅಶ್ವಿನ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಗೆ ವಿದಾಯ ಘೋಷಿಸಿದ್ದಾರೆ. ಆಸ್ಟ್ರೇಲಿಯಾ ವಿರುದ್ಧ ಗಬ್ಬಾದಲ್ಲಿ ನಡೆದ ಮೂರನೇ ಟೆಸ್ಟ್ ಪಂದ್ಯವು ಡ್ರಾನಲ್ಲಿ ಅಂತ್ಯಗೊಂಡ ಬೆನ್ನಲ್ಲೇ ಅನುಭವಿ ಸ್ಪಿನ್ನರ್ ಈ ನಿರ್ಧಾರ ತೆಗೆದುಕೊಳ್ಳುವ ಮೂಲಕ ಅಭಿಮಾನಿಗಳಲ್ಲಿ ಅಚ್ಚರಿ ಮೂಡಿಸಿದ್ದಾರೆ.
ಬಾರ್ಡರ್- ಗವಾಸ್ಕರ್ ಟೆಸ್ಟ್ ಸರಣಿಯ ಉಳಿದ ಪಂದ್ಯಗಳನ್ನು ಆಡಲು ನಿರ್ಧರಿಸಿರುವುದರಿಂದ ಅಶ್ವಿನ್ ನಾಳೆ (ಗುರುವಾರ) ಭಾರತಕ್ಕೆ ಮರಳಲಿದ್ದಾರೆ. `ಭಾರತ ತಂಡದ ಪರ ಇದು ನನ್ನ ಕೊನೆಯ ದಿನವಾಗಿದೆ.
ಟೀಮ್ ಇಂಡಿಯಾದ ಜೊತೆಗಿನ ಸುದೀರ್ಘ ಬಾಂಧವ್ಯವನ್ನು ಕಳೆದುಕೊಳ್ಳುತ್ತಿರುವುದಕ್ಕೆ ನನ್ನ ಮನಸ್ಸಿಗೆ ಸ್ವಲ್ಪಮಟ್ಟಿಗಿನ ನೋವಾಗಿದೆ. ಆದರೆ ಕ್ಲಬ್ ಕ್ರಿಕೆಟ್ ನಲ್ಲಿ ನಾನು ಮುಂದುವರೆಯುತ್ತೇನೆ’ ಎಂದು ಅಶ್ವಿನ್ ತಿಳಿಸಿದ್ದಾರೆ.
ಅಶ್ವಿನ್ ಅಂತಾರಾಷ್ಟ್ರೀಯ ಅಂಕಿ-ಅಂಶಗಳು:
ಟೆಸ್ಟ್ ಕ್ರಿಕೆಟ್ ನಲ್ಲಿ ಕನ್ನಡಿಗ ಅನಿಲ್ ಕುಂಬ್ಳೆ ನಂತರ ಅತಿ ಹೆಚ್ಚು ವಿಕೆಟ್ ಪಡೆದ ಎರಡನೇ ಬೌಲರ್ ಆಗಿ ಗುರುತಿಸಿಕೊಂಡಿರುವ ಆರ್. ಅಶ್ವಿನ್ 106 ಟೆಸ್ಟ್ ಪಂದ್ಯಗಳಿಂದ 3503 ರನ್ ಹಾಗೂ 537 ವಿಕೆಟ್, 116 ಏಕದಿನ ಪಂದ್ಯಗಳಿಂದ 707 ರನ್ ಹಾಗೂ 65 ಟ್ವೆಂಟಿ-20ಐ ಪಂದ್ಯಗಳಿಂದ 184 ರನ್ ಹಾಗೂ 72 ವಿಕೆಟ್ ಪಡೆದಿದ್ದಾರೆ.