Homeಕ್ರೀಡಾ ಸುದ್ದಿಮೈದಾನಲ್ಲಿ ಡಿಚ್ಚಿ ಹೊಡೆದ ಕಾಶ್ಮೀರ ತಂಡದ ನಾಯಕ ಪರಾಸ್‌‍ ಡೋಗ್ರಾಗೆ ದಂಡ

ಮೈದಾನಲ್ಲಿ ಡಿಚ್ಚಿ ಹೊಡೆದ ಕಾಶ್ಮೀರ ತಂಡದ ನಾಯಕ ಪರಾಸ್‌‍ ಡೋಗ್ರಾಗೆ ದಂಡ

Kashmir team captain Paras Dogra fined

ಹುಬ್ಬಳ್ಳಿ,ಫೆ.26- ರಣಜಿ ಫೈನಲ್‌ನಲ್ಲಿ ಡಿಚ್ಚಿ ಹೊಡೆದ ಜಮು ಕಾಶೀರ ತಂಡದ ನಾಯಕನ ಮೇಲೆ ಕ್ರಮ ಕೈಗೊಂಡಿದ್ದು, ಕಾಶೀರ ತಂಡದ ನಾಯಕ ಪರಾಸ್‌‍ ಡೋಗ್ರಾಗೆ ದಂಡ ವಿಧಿಸಲಾಗಿದೆ. ಎರಡನೇ ದಿನ ಸಂಭಾವನೆಯಿಂದ ಶೇ.50ರಷ್ಟು ಕಟ್‌ ಮಾಡಿದ್ದು, ಶೇ.50 ರಷ್ಟು ದಂಡ ವಿಧಿಸಿದ ಬಿಸಿಸಿಐ ಕ್ರಮ ಕೈಗೊಂಡಿದೆ.

ಹುಬ್ಬಳ್ಳಿಯಲ್ಲಿ ರಣಜಿ ಫೈನಲ್‌ ಪಂದ್ಯದ ವೇಳೆ ಮಾತಿನ ಚಕಮಕಿ ಉಂಟಾಗಿತ್ತು. ಕರ್ನಾಟಕ ಆಟಗಾರನಿಗೆ ಕಾಶೀರ ತಂಡದ ನಾಯಕ ಡೋಗ್ರಾ ಡಿಚ್ಚಿ ಹೊಡೆದಿದ್ದರು. ಮೈದಾನದಲ್ಲಿ ಕರ್ನಾಟಕ ಆಟಗಾರ ಅನೀಶ್‌-ಪರಾಸ್‌‍ ಡೋಗ್ರಾ ಮಧ್ಯೆ ಮಾತಿನ ಚಕಮಕಿ ಸಹ ನಡೆದು ತೀವ್ರ ಸ್ವರೂಪ ಚರ್ಚೆಗೆ ಗ್ರಾಸವಾಗಿತ್ತು.

ಹೆಲೆಟ್‌ ಧರಿಸಿದ್ದ ಅನೀಶ್‌ ತಲೆಗೆ ಪರಾಸ್‌‍ ಕರ್ನಾಟಕ ಆಟಗಾರನಿಗೆ ಡಿಚ್ಚಿ ಹೊಡೆದಿದ್ದಕ್ಕೆ ಮಾಯಾಂಕ್‌ ಅಗರ್‌ವಾಲ್‌‍ ಆಕ್ಷೇಪ ವ್ಯಕ್ತಪಡಿಸಿದ್ದರು. ಮಧ್ಯ ಪ್ರವೇಶಿಸಿದ ಫೀಲ್‌್ಡನಲ್ಲಿದ್ದ ಅಂಪೈರ್‌ಗಳು ಪರಿಸ್ಥಿತಿ ತಿಳಿಗೊಳಿಸಿದ್ದರು.

RELATED ARTICLES

Latest News