Sunday, September 8, 2024
Homeರಾಜ್ಯನೈತಿಕತೆ ಇದ್ದರೆ ನಾಗೇಂದ್ರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ : ಶ್ರೀರಾಮಲು

ನೈತಿಕತೆ ಇದ್ದರೆ ನಾಗೇಂದ್ರ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಲಿ : ಶ್ರೀರಾಮಲು

ಬೆಂಗಳೂರು,ಜು.11– ವಾಲೀಕಿ ಅಭಿವೃದ್ಧಿ ನಿಗಮದ ಹಗರಣದಲ್ಲಿ ನಡೆದಿರುವ ಅಕ್ರಮದ ಪ್ರಮುಖ ರೂವಾರಿ ಮಾಜಿ ಸಚಿವ ಬಿ.ನಾಗೇಂದ್ರ ಅವರಿಗೆ ನೈತಿಕತೆ, ಸ್ವಾಭಿಮಾನವಿದ್ದರೆ ಕೂಡಲೇ ತಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಬಿ.ಶ್ರೀರಾಮಲು ಸವಾಲು ಹಾಕಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ನಾಗೇಂದ್ರ ಅವರಿಗೆ ತಪ್ಪು ಮಾಡಿದ್ದೇನೆ ಎನ್ನುವ ಸ್ವಾಭಿಮಾನವಿದ್ದರೆ ಅವರು ಶಾಸಕ ಸ್ಥಾನದಲ್ಲಿ ಮುಂದುವರೆ ಯಬಾರದು. ಪರಿಶಿಷ್ಟ ಪಂಗಡಕ್ಕೆ ಸೇರಿದ ಹಣವನ್ನು ದುರುಪಯೋಗಪಡಿಸಿಕೊಂಡಿದ್ದೇನೆ ಎಂಬ ಪಾಪಪ್ರಜ್ಞೆ ಇದ್ದರೆ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಬೇಕೆಂದು ಒತ್ತಾಯಿಸಿದರು.

ಸಮುದಾಯದ ಮಂತ್ರಿಯಾಗಿ ಮೀಸಲು ಕ್ಷೇತ್ರದಿಂದ ಗೆದ್ದು ಆ ಸಮುದಾಯದ ಬೆನ್ನಿಗೆ ಚೂರಿ ಹಾಕಿರುವ ನಾಗೇಂದ್ರ ಶಾಸಕ ಸ್ಥಾನದಲ್ಲಿ ಮುಂದುವರೆಯುವ ನೈತಿಕತೆ ಉಳಿಸಿಕೊಂಡಿಲ್ಲ. ಎಸ್‌‍ಐಟಿ ಇಲ್ಲವೇ ಇ.ಡಿ ಅಧಿಕಾರಿಗಳು ತಕ್ಷಣವೇ ಅವರನ್ನು ಬಂಧಿಸಬೇಕೆಂದು ಒತ್ತಾಯಿಸಿದರು.

ಈ ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಆರೋಪಿಗಳ ವಿರುದ್ಧ ತನಿಖಾ ತಂಡದವರು ಪ್ರಬಲವಾದ ಎಫ್‌ಐಆರ್‌ ದಾಖಲಿಸಬೇಕು. ಜೊತೆಗೆ ಒಂದು ತಿಂಗಳೊಳಗೆ ನಿಗಮದ ಹಣವನ್ನು ಸರ್ಕಾರಕ್ಕೆ ಹಿಂತಿರುಗಿಸಬೇಕೆಂದು ಒತ್ತಾಯ ಮಾಡಿದರು.

ಕೇವಲ ವಾಲೀಕಿ ಅಭಿವೃದ್ಧಿ ನಿಗಮವಲ್ಲದೆ, ಇದೇ ರೀತಿ ಅನೇಕ ನಿಗಮಮಂಡಳಿಗಳಲ್ಲೂ ಹಣ ದುರುಪಯೋಗ ಮಾಡಿರುವ ಆರೋಪ ಕೇಳಿಬಂದಿದೆ. ತಕ್ಷಣವೇ ಸರ್ಕಾರ ಪ್ರತಿಯೊಂದು ನಿಗಮಗಳ ಲೆಕ್ಕ ಪರಿಶೋಧನೆ ನಡೆಸಲು ಮುಂದಾಗಬೇಕು ಎಂದು ಹೇಳಿದರು.

ನಾವು ಈ ಪ್ರಕರಣವನ್ನು ತಾರ್ಕಿಕ ಹಂತಕ್ಕೆ ಕೊಂಡೊಯ್ಯುವವರೆಗೂ ಬಿಡುವುದಿಲ್ಲ. ಶೀಘ್ರದಲ್ಲೇ ಪರಿಶಿಷ್ಟ ಪಂಗಡದ ನಿಯೋಗವು ದೆಹಲಿಗೆ ತೆರಳಿ ರಾಷ್ಟ್ರೀಯ ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ದೂರು ನೀಡುತ್ತೇವೆ. ನಮ ಸಮುದಾಯದ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಯಾರೇ ದುರುಪಯೋಗಪಡಿಸಿಕೊಂಡಿದ್ದರೂ ಸುಮನೆ ಬಿಡುವುದಿಲ್ಲ. ಒಂದೊಂದು ರೂಪಾಯಿ ಕೂಡ ವಾಪಸ್‌‍ ಹಿಂತಿರುಗಿಸುವವರೆಗೂ ಬಿಡುವ ಪ್ರಶ್ನೆಯೇ ಇಲ್ಲ ಎಂದು ತಿಳಿಸಿದರು.

ನಾಗೇಂದ್ರ ಅವರ ಆಪ್ತ ಕಾರ್ಯದರ್ಶಿ ಹರೀಶ್‌ ಖಾತೆಗೆ 80 ಲಕ್ಷ ಹಣ ವರ್ಗಾವಣೆಯಾಗಿದೆ. ಇದೇ ರೀತಿ ಅವರ ಸುತ್ತಮುತ್ತಲೂ ಇರುವವರು, ಸಂಬಂಧಿಕರು ಬೇರೆ ಬೇರೆಯವರ ಹೆಸರಿನಲ್ಲಿ ಹಣ ಬೇಕಾಬಿಟ್ಟಿ ವರ್ಗಾ ವಣೆಯಾಗಿರುವುದು ಬೆಳಕಿಗೆ ಬಂದಿದೆ ಎಂದು ಆರೋಪಿಸಿದರು.ಗೃಹಸಚಿವ ಡಾ.ಜಿ.ಪರಮೇಶ್ವರ್‌ ಒಬ್ಬ ಹಿರಿಯರು. ಅವರ ಬಗ್ಗೆ ನನಗೆ ಅಪಾರವಾದ ಗೌರವವಿದೆ. ಆದರೆ ಅವರು ಬೇಜವಾಬ್ದಾರಿಯಾಗಿ ಮಾತನಾಡಿರುವುದಕ್ಕೆ ನೋವಿದೆ ಎಂದು ಅಸಮಾಧಾನ ಹೊರಹಾಕಿದರು.

ಮಾಜಿ ಸಚಿವ ರಾಜೀವ್‌ಗೌಡ ಮಾತನಾಡಿ, ಮೂರು ಕೋಟಿ ಮೇಲೆ ವರ್ಗಾವಣೆ ಆಗಬೇಕಾದರೆ ಚೀ್‌‍ ಸೆಕ್ರೆಟರಿ ಗಮನಕ್ಕೆ ತರಬೇಕು. ಆದರೆ ಯಾರ ಗಮನಕ್ಕೂ ತಾರದೆ 50 ಕೋಟಿ ಒಂದೇ ದಿನ ವರ್ಗಾವಣೆ ಮಾಡಿದ್ದಾರೆ.

ಇತಿಹಾಸದಲ್ಲಿ ಮೊದಲ ಬಾರಿಗೆ ಬ್ಯಾಂಕ್‌ ಮೂಲಕ ಲೂಟಿ ಮಾಡಿದ್ದಾರೆ. ವೈಟ್‌ ಮೂಲಕವೇ ಕೊಳ್ಳೆ ಹೊಡೆಯುವ ಕೆಲಸ ಕಾಂಗ್ರೆಸ್‌‍ ಮಾಡಿದೆ. ವೈಟ್‌ ಮೂಲಕವೇ ಹಣ ವರ್ಗಾವಣೆ ಆಗಿದ್ದು, ಅದನ್ನು ರಿಕವರಿ ಮಾಡುವುದಕ್ಕೆ ಇಷ್ಟು ದಿನ ಬೇಕಾ? ಎಂದು ಪ್ರಶ್ನಿಸಿದರು.

ಮೂಗಿಗೆ ತುಪ್ಪ ಸವರುವ ಕೆಲಸ ಮಾಡುತ್ತ್ತಿದೆ. ಎಸ್ಟಿ ಸಮುದಾಯದ ಪರ ಕೆಲಸ ಮಾಡಲು ನಾವು ಸೋತಿದ್ದೇವೆ. ಕಾಂಗ್ರೆಸ್‌‍ನಿಂದ ಎಸ್ಟಿ ಸಮುದಾಯದ 14 ಜನ ಗೆದ್ದಿದ್ದಾರೆ. ಆದರೆ ಯಾರೂ ಕೂಡ ಮಾತಾಡುತ್ತಿಲ್ಲ. ಎಲ್ಲರೂ ಕೇವಲ ರಬ್ಬರ್‌ ಸ್ಟ್ಯಾಂಪ್‌ ಆಗಿದ್ದಾರೆ ಎಂದರು.
ನಿಗಮದ ಹಣ ಬ್ಯಾಂಕಿನಲ್ಲಿ ಇಡಬೇಕಾದರೆ ಸಿಎಂ ಅನುಮತಿ ಇಲ್ಲದೆ ಇಡಲು ಸಾಧ್ಯವಿಲ್ಲ.

ನಾನು ನಿಗಮದ ಅಧ್ಯಕ್ಷ ಆಗಿದ್ದವನು. ಹಣ ಬಡ್ಡಿ ಹೆಚ್ಚು ಕೊಡ್ತಾರೆ ಅಂದ್ರೆ ಟೆಂಡರ್‌ ಕರೆದು ಇಡಬೇಕು. ಆದರೆ ಇದನ್ನು ಮುಚ್ಚಿಹಾಕಲು ನೋಡುತ್ತಿದ್ದಾರೆ. ಸಿಬಿಐ ಪ್ರವೇಶ ಮಾಡಿರುವುದರಿಂದ ಇನ್ನು ಮುಚ್ಚಿಹಾಕಲು ಸಾಧ್ಯವಾಗಿಲ್ಲ. ಎಸ್ಟಿ ಬೋರ್ಡಿಗೆ ಹಣ ವಾಪಸ್‌‍ ತರಬೇಕು. ಜಮೀನು ತೆಗೆದವರಿಗೆ ಹಣ ಸಿಕ್ಕಿಲ್ಲ, ಬೋರು ಕೊರೆಸಲು ಹಣ ಇಲ್ಲದೆ ಕಾಯುತ್ತಿದ್ದಾರೆ. ನಾಗೇಂದ್ರ ಒಬ್ಬರ ರಾಜೀನಾಮೆ ಪಡೆದರೆ ಸಾಲುವುದಿಲ್ಲ. 187 ಕೋಟಿ ಹಣ ವಾಪಸ್‌‍ ತರಬೇಕು. ಅಧಿಕಾರಿಗಳ ತಲೆದಂಡ ಕೂಡ ಆಗಬೇಕು ಎಂದು ಅವರು ಒತ್ತಾಯಿಸಿದ್ದಾರೆ.

RELATED ARTICLES

Latest News