Thursday, September 19, 2024
Homeರಾಜಕೀಯ | Politicsರಾಜ್ಯಸರ್ಕಾರ ಸುಭದ್ರವಾಗಿದೆ, ಬಹುಮತವಿಲ್ಲದೆ ಕೇಂದ್ರ ಸರ್ಕಾರ ಅತಂತ್ರವಾಗಿದೆ : ಚೆಲುವರಾಯಸ್ವಾಮಿ

ರಾಜ್ಯಸರ್ಕಾರ ಸುಭದ್ರವಾಗಿದೆ, ಬಹುಮತವಿಲ್ಲದೆ ಕೇಂದ್ರ ಸರ್ಕಾರ ಅತಂತ್ರವಾಗಿದೆ : ಚೆಲುವರಾಯಸ್ವಾಮಿ

ಮಂಡ್ಯ, ಜೂ.23- ರಾಜ್ಯಸರ್ಕಾರ ಸುಭದ್ರವಾಗಿದ್ದು, ಬಹುಮತವಿಲ್ಲದ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಅತಂತ್ರವಾಗಿದೆ ಎಂದು ಕೃಷಿ ಸಚಿವ ಚೆಲುವರಾಯಸ್ವಾಮಿ ವ್ಯಾಖ್ಯಾನಿಸಿದ್ದಾರೆ. ರಾಜ್ಯಸರ್ಕಾರ ಪತನಗೊಳ್ಳಲಿದೆ ಎಂದು ಬಿಜೆಪಿ ಮತ್ತು ಜೆಡಿಎಸ್‌‍ ನಾಯಕರು ಪದೇ ಪದೇ ಟೀಕೆ ಮಾಡುತ್ತಿರುವುದಕ್ಕೆ ಪ್ರತಿಕ್ರಿಯಿಸಿದ ಅವರು, 112 ಸ್ಥಾನಗಳಿಗೆ ಎದುರಾಗಿ ಕಾಂಗ್ರೆಸ್‌‍ 136 ಶಾಸಕರನ್ನು ಹೊಂದಿದೆ. ನಮ ಸರ್ಕಾರ ಸುಭದ್ರವಾಗಿದೆ. ಕೇಂದ್ರದಲ್ಲಿ ಬಿಜೆಪಿ 240 ಸ್ಥಾನಗಳನ್ನು ಮಾತ್ರ ಪಡೆದಿದೆ. ನಿತೀಶ್‌ಕುಮಾರ್‌ ಮತ್ತು ಚಂದ್ರಬಾಬು ನಾಯ್ಡು ಅವರ ಬೆಂಬಲದಲ್ಲಿ ಸರ್ಕಾರ ರಚಿಸಿದೆ.

ಕಾಂಗ್ರೆಸ್‌‍ ಕೇಂದ್ರದಲ್ಲಿ ಸರ್ಕಾರ ರಚಿಸುವ ಯತ್ನವನ್ನು ಮಾಡಲಿಲ್ಲ. ಬಿಜೆಪಿಗೆ ಅವಕಾಶ ಬಿಟ್ಟುಕೊಟ್ಟಿದೆ. ಮೋದಿಯವರ ಸರ್ಕಾರ ಕಳೆದ ಹತ್ತು ವರ್ಷದಲ್ಲಿ ಮಾಡದೇ ಇರುವುದನ್ನು ಈ ಅವಧಿಯಲ್ಲಿ ಮಾಡುತ್ತದೆ ಎಂದು ಪ್ರಯತ್ನಿಸುತ್ತಿದೆ. ಸಂತೋಷ. ಒಟ್ಟಿನಲ್ಲಿ ಅಭಿವೃದ್ಧಿಯಾಗಬೇಕು ಎಂದು ಹೇಳಿದರು.

ವಿಧಾನಪರಿಷತ್‌ ಸದಸ್ಯ ಸೂರಜ್‌ ರೇವಣ್ಣ, ಮಾಜಿ ಸದಸ್ಯ ಪ್ರಜ್ವಲ್‌ ರೇವಣ್ಣ ಅವರ ವಿರುದ್ಧ ಲೈಂಗಿಕ ದೌರ್ಜನ್ಯ ಪ್ರಕರಣಗಳು ದಾಖಲಾಗಿರುವ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇದರಿಂದ ನಮಗೂ ಮುಜುಗರವಾಗಿದೆ. ಆದರೆ ಯಾರೂ, ಏನೂ ಮಾಡಲು ಸಾಧ್ಯವಿಲ್ಲ. ಕಾನೂನು ಪ್ರಕಾರ, ಕ್ರಮಗಳಾಗುತ್ತವೆ. ಸೂರಜ್‌ ಪ್ರಕರಣದಲ್ಲಿ ದೂರು, ಪ್ರತಿದೂರು ದಾಖಲಾಗಿವೆೆ. ಎರಡು ಪ್ರಕರಣಗಳೂ ತನಿಖೆಯಾಗಲಿವೆ ಎಂದರು.

ದೂರು ಕೊಟ್ಟ ಮೇಲೆ ಪ್ರಕರಣ ದಾಖಲಿಸಬೇಕು. ನಂತರ ಸತ್ಯಾಂಶ ತನಿಖೆಯಲ್ಲಿ ಬೆಳಕಿಗೆ ಬರಲಿದೆ. ಈ ವಿಚಾರದಲ್ಲಿ ಹೆಚ್ಚು ಚರ್ಚೆಯಾಗದೇ ಇರುವುದು ಒಳ್ಳೆಯದು ಎಂದು ಹೇಳಿದರು.

ದಿನಬೆಳಗಾದರೆ ಪೆನ್‌ಡ್ರೈವ್‌ ಇದೆ ಎಂದು ಹೇಳುತ್ತಿದ್ದವರು ನಾವಲ್ಲ. ಬಡವರ ಮಕ್ಕಳು ನಾವು, ನೆಮದಿಯಾಗಿರಬಾರದೆ, ಏನು ಮಾತನಾಡದೇ ಇದ್ದರೂ ಇಂತಹ ವಿಚಾರದಲ್ಲೇ ನಮನ್ನೇ ಏಕೆ ಪ್ರಶ್ನಿಸಲಾಗುತ್ತದೆ? ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಮಾಜಿ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿಯವರು ರಾಜಕಾರಣದಲ್ಲಿ ವೈಯಕ್ತಿಕವಾಗಿ ಟೀಕೆ ಮಾಡುವ ಬದಲಾಗಿ ವಿಷಯಾಧಾರಿತ ಟೀಕೆ ಮಾಡುವಂತೆ ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡರು ಹಲವು ಬಾರಿ ಸಲಹೆ ನೀಡಿದ್ದರು. ಕೇಂದ್ರ ಸಚಿವರಾಗಿರುವ ಕುಮಾರಸ್ವಾಮಿಯವರು ಈಗಲಾದರೂ ರಾಜ್ಯದ ಅಭಿವೃದ್ಧಿಯತ್ತ ಗಮನ ಹರಿಸಲಿ ಎಂದು ಹೇಳಿದರು.

ಕಾಂಗ್ರೆಸ್‌‍ ಶಾಸಕ ಉದಯ್‌ ಅವರ ಗನ್‌ಮ್ಯಾನ್‌ ಮೇಲೆ ದರ್ಶನ್‌ ಅವರ ಅಂಗರಕ್ಷಕರು ಹಲ್ಲೆ ಮಾಡಿದ್ದಾರೆ ಎಂದು ಮಾಧ್ಯಮದವರು ಹೇಳಿದ್ದಾರೆ. ಆದರೆ ಯಾವುದೇ ದೂರು ದಾಖಲಾಗಿಲ್ಲ. ಒಂದು ವೇಳೆ ಘಟನೆ ನಡೆದಿದ್ದರೆ ಪೊಲೀಸ್‌‍ ಇಲಾಖೆಯವರು ಸುಮನೇ ಇರುತ್ತಿರಲಿಲ್ಲ ಎಂದು ಹೇಳಿದರು. ಹಾಗೂ ಸುಮನಾಗದಿದ್ದರೆ ಬಹುಷಃ ಸಣ್ಣ ಘಟನೆಯೆಂದು ರಾಜಿ ಸಂಧಾನ ನಡೆದಿರಬಹುದೇನೋ? ಗೊತ್ತಿಲ್ಲ ಎಂದರು.

ಈ ಹಿಂದೆ ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಿದ್ದಾಗ ಕುದುರೆಮುಖ ಹಾಗೂ ಬಳ್ಳಾರಿಯ ಕುಮಾರಬೆಟ್ಟದಲ್ಲಿನ ಗಣಿಗಾರಿಕೆ ಬೇಡ ಎಂದು ಹೇಳುತ್ತಿದ್ದರು. ಈಗ ಕೇಂದ್ರ ಸಚಿವರಾದ ಬಳಿಕ ಗಣಿಗಾರಿಕೆ ಪುನರ್‌ ಆರಂಭಕ್ಕೆ ಪ್ರಯತ್ನಿಸುತ್ತಿದ್ದಾರೆ. ಇಂತಹ ವಿಚಾರದಲ್ಲಿ ಜನರ ಒಳಿತನ್ನು ಗಮನದಲ್ಲಿಟ್ಟುಕೊಳ್ಳಬೇಕು. ಕುಮಾರಬೆಟ್ಟಕ್ಕೆ ಕೈ ಇಟ್ಟವರು ಸಂಕಷ್ಟ ಅನುಭವಿಸಿದ್ದಾರೆ. ಆ ಬಗ್ಗೆಯೂ ಗಮನ ಹರಿಸಲಿ. ಕಾನೂನು ಪ್ರಕಾರವಾಗಿ ಯಾವುದೇ ಯೋಜನೆ ಕೈಗೆತ್ತಿಕೊಂಡರೂ ರಾಜ್ಯಸರ್ಕಾರ ಸಹಕರಿಸಲಿದೆ ಎಂದರು.

ರಾಜ್ಯದಲ್ಲಿ ಹೆಚ್ಚುವರಿ ಉಪಮುಖ್ಯಮಂತ್ರಿ ಹುದ್ದೆ ಸೃಷ್ಟಿಯ ಬಗ್ಗೆ ಚರ್ಚೆಯಿಲ್ಲ. ಯಾವುದೇ ನಿರ್ಧಾರವಾದರೂ ಹೈಕಮಾಂಡ್‌ ಮಾತ್ರ ತೆಗೆದುಕೊಳ್ಳಲು ಸಾಧ್ಯ. ಸದ್ಯದ ಪರಿಸ್ಥಿತಿಯಲ್ಲಿ ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಅನ್ಯೋನ್ಯತೆಯಿಂದ ಕೆಲಸ ಮಾಡುತ್ತಿದ್ದಾರೆ ಎಂದರು.

ಕೆಆರ್‌ಎಸ್‌‍ನಲ್ಲಿ ನೀರಿನ ಸಂಗ್ರಹ ಕಡಿಮೆ ಇದೆ. ಕೊಳವೆ ಬಾವಿಯಲ್ಲಿ ಮಳೆಗಾಗಿ 110 ಅಡಿ ಮೇಲ್ಪಟ್ಟು ನೀರು ನಿಂತರೆ ಆಗ ಕೃಷಿಗೆ ನೀರೊದಗಿಸುವ ಬಗ್ಗೆ ಚರ್ಚೆ ಮಾಡಬಹುದು. ಆದರೆ ಸದ್ಯದ ಪರಿಸ್ಥಿತಿಯಲ್ಲಿ ಕೃಷಿಗೆ ನೀರು ಬಿಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.

RELATED ARTICLES

Latest News