ಬೆಂಗಳೂರು, ಅ.24- ಕರ್ನಾಟಕ ದರ್ಶನಕ್ಕಾಗಿ ರೂಪಿಸಲಾಗಿದ್ದ ಗೋಲ್ಡನ್ ಚಾರಿಯೇಟ್ ಐಷಾರಾಮಿ ಪ್ರವಾಸಿ ರೈಲು ಸೇವೆಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮರು ಚಾಲನೆ ನೀಡಿದ್ದಾರೆ.ಪ್ರವಾಸೋಧ್ಯಮ ಸಚಿವ ಕೆ.ಜೆ.ಜಾರ್ಜ್ ಹಾಗೂ ರೈಲ್ವೆ ಇಲಾಖೆಯ ಅಧಿಕಾರಿಗಳು ಇದರಲ್ಲಿ ಭಾಗವಹಿಸಿದ್ದರು. ಕೇಂದ್ರ ರೈಲ್ವೆ ರಾಜ್ಯ ಸಚಿವ ವಿ.ಸೋಮಣ್ಣ, ವೀಡಿಯೊ ಕಾನ್ಫರೆನ್್ಸನಲ್ಲಿ ಭಾಗವಹಿಸಿದರು.
ಈ ಹಿಂದೆ ಸಿದ್ದರಾಮಯ್ಯ ಅವರ ಮೊದಲ ಅವಧಿಯ ಸರ್ಕಾರ ಆರಂಭಗೊಂಡಿದ್ದ ಗೋಲ್ಡನ್ ಚಾರಿಯೇಟ್ ಮಧ್ಯದಲ್ಲಿ ಕೆಲಕಾಲ ಸ್ಥಗಿತಗೊಂಡಿತ್ತು. ಈಗ ಮತ್ತೆ ಆರಂಭಿಸಲಾಗಿದೆ.ರೈಲಿಗೆ ಚಾಲನೆ ನೀಡಿ, ಸ್ವಲ್ಪ ದೂರ ಪ್ರಯಾಣ ಮಾಡಿದ ಡಿ.ಕೆ.ಶಿವಕುಮಾರ್ ಅವರು, ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದರು.
ಇದು ಕರ್ನಾಟಕದ ಹೆಮೆ. ರಾಜ್ಯ ಪ್ರವಾಸವನ್ನು ಈವರೆಗೂ ಮಾಡದೇ ಇರುವವರಿಗೆ ಉತ್ತಮ ಅವಕಾಶ. 5 ರಾತ್ರಿ, 6 ದಿನಗಳ ಪ್ರವಾಸದಲ್ಲಿ ಬಂಡೀಪುರ, ಮೈಸೂರು, ಹಳೇಬೀಡು, ಚಿಕ್ಕಮಗಳೂರು, ಹಂಪಿ ಸೇರಿದಂತೆ ಎಲ್ಲೆಡೆ ಪ್ರವಾಸ ಮಾಡಲು ಅವಕಾಶ ಇದೆ. ಒಂದು ಅವಧಿಯಲ್ಲಿ 80 ಜನ ಪ್ರವಾಸ ಮಾಡಬಹುದಾಗಿದ್ದು, 60 ಜನ ಸಿಬ್ಬಂದಿಗಳು ಸೇವೆ ಒದಗಿಸಲಿದ್ದಾರೆ. ರೈಲಿನಲ್ಲಿ ಎರಡು ರೆಸ್ಟೋರೆಂಟ್ಗಳಿವೆ. ಸ್ಪಾ, ಜಿಮ್ ಸೇರಿದಂತೆ ಹಲವು ಐಷಾರಾಮಿ ಸೌಲಭ್ಯಗಳನ್ನು ಅಳವಡಿಸಲಾಗಿದೆ. ರೈಲಿನಲ್ಲಿ ವಿಶ್ರಾಂತಿಗೆ ಅವಕಾಶ ಇದೆ. ಪ್ರವಾಸಿ ತಾಣಗಳ ವೀಕ್ಷಣೆಗೂ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.
ಪ್ರಯಾಣದ ವೆಚ್ಚ ತುಸು ದುಬಾರಿಯಾಗಿದೆ. ಆಫ್ ಸೀಜನ್ನಲ್ಲಿ ಜನಸಾಮಾನ್ಯರ ಕೈಗೆಟಕುವಂತೆ ಕಡಿಮೆ ದರ ನಿಗದಿ ಮಾಡುವ ಬಗ್ಗೆಯೂ ಚರ್ಚೆಗಳೂ ನಡೆಯುತ್ತಿವೆ ಎಂದರು. ಮೊದಲ ಹಂತದಲ್ಲಿ 75 ಜನ ಈ ಪ್ರಯಾಣಕ್ಕೆ ಮುಂಗಡವಾಗಿ ನೊಂದಾಯಿಸಿಕೊಂಡಿದ್ದಾರೆ ಎಂದು ಹೇಳಿದರು.
ರೈಲು ಕರ್ನಾಟಕ ಸರ್ಕಾರಕ್ಕೆ ಸೇರಿದ್ದು. ಆದರೆ ಕೇಂದ್ರ ಸರ್ಕಾರದ ರೈಲ್ವೆ ಇಲಾಖೆಯ ಮಾರ್ಗಗಳನ್ನು ಬಳಸಿಕೊಳ್ಳುತ್ತಿದ್ದೇವೆ. ಪ್ರಯಾಣದ ಮಾರ್ಗವನ್ನು ಮತ್ತಷ್ಟು ವಿಸ್ತರಿಸುವ ಬಗ್ಗೆಯೂ ಚಿಂತನೆ ಇದೆ. ನಿಯಮಿತವಾದ ರೈಲು ಮಾರ್ಗಗಳಿಗೆ ತೊಂದರೆಯಾಗದಂತೆ ಯೋಜನೆ ರೂಪಿಸುವುದಾಗಿ ಹೇಳಿದರು. ಇದಲ್ಲದೆ 4 ದಿನಗಳ ಗ್ಲಿಂಪ್್ಸ ಆಫ್ ಕರ್ನಾಟಕ ಆರಂಭಿಸುವ ಆಲೋಚನೆ ಕೂಡ ಇದೆ.
ಜ್ಯೂವೆಲ್್ಸ ಆಫ್ ಸೌತ್ ಯೋಜನೆಯಲ್ಲಿ ದಕ್ಷಿಣ ಭಾರತದ ಅನೇಕ ಪ್ರವಾಸ ತಾಣಗಳಿಗೆ ಪ್ರವಾಸಿಗರನ್ನು ಕರೆದೊಯ್ಯಲು ಯೋಜನೆ ಸಿದ್ಧಗೊಂಡಿದೆ. ಹಂಪಿ, ಮಹಾಬಲಿಪುರಂ, ಮೈಸೂರು, ಬೆಂಗಳೂರು, ಕೊಚ್ಚಿನ್, ಚಿಟ್ಟಿನಾಡು ಸೇರಿದಂತೆ ಮತ್ತಿತರ ತಾಣಗಳಿಗೆ ಪ್ರಯಾಣದ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಿದರು. ದೇಶದಲ್ಲಿ ಈ ರೀತಿಯ 4 ರೈಲುಗಳು ಮಾತ್ರ ಇವೆ. ಅದರಲ್ಲಿ ಕರ್ನಾಟಕ ಮತ್ತು ರಾಜಸ್ತಾನದ ರೈಲುಗಳು ಐಷಾರಾಮಿ ಸೌಲಭ್ಯ ಹೊಂದಿವೆ. ಮುಂಬೈನಲ್ಲಿ ಈ ರೀತಿಯ ರೈಲು ಇದ್ದರೂ ಅದು ಸಾಮಾನ್ಯ ಸೌಲಭ್ಯಗಳು ಹೊಂದಿದೆ ಎಂದು ಹೇಳಿದರು.
ಪ್ರವಾಸೋದ್ಯಮ ಇಲಾಖೆಯಿಂದ ಆಯೋಜಿಲಾಗಿರುವ ಈ ಯೋಜನೆಗಳಿಂದ ಲಾಭವಾಗದಿದ್ದರೂ ನಷ್ಟವಾಗಬಾರದು. ಕರ್ನಾಟಕದ ಅಪರಿಮಿತವಾದ ವನ್ಯ ಸಂಪತ್ತು, ಪ್ರಕೃತಿ ಹಾಗೂ ನಾಡಿದ ಪಾರಂಪರಿಕ ತಾಣಗಳನ್ನು ವಿದೇಶಿಗರಿಗೆ ಪರಿಚಯಿಸುವುದು ತಮ ಆದ್ಯತೆ ಎಂದರು. ಗೋಲ್ಡನ್ ಚಾರಿಯೇಟ್ ರೈಲು ನೋಡಿ ತಮಗೆ ಖುಷಿಯಾಗಿದೆ. ಇದರಲ್ಲಿ ಪ್ರಯಾಣ ಮಾಡಲು ತಮಗೆ ಯಾವಾಗ ಅವಕಾಶ ಸಿಗಲಿದೆ ಎಂಬುದನ್ನು ಕಾದು ನೋಡುವುದಾಗಿ ತಿಳಿಸಿದರು.
