Sunday, April 12, 2026
Homeರಾಜ್ಯಸರ್ಕಾರದ ಗ್ಯಾರಂಟಿ ಯೋಜನೆಗಳು ವಿನಾಶಕಾರಿ ಮತ್ತು ಅಭಿವೃದ್ಧಿಗೆ ಮಾರಕ : ಮೋಹನದಾಸ್‌‍ ಪೈ

ಸರ್ಕಾರದ ಗ್ಯಾರಂಟಿ ಯೋಜನೆಗಳು ವಿನಾಶಕಾರಿ ಮತ್ತು ಅಭಿವೃದ್ಧಿಗೆ ಮಾರಕ : ಮೋಹನದಾಸ್‌‍ ಪೈ

guarantee schemes are destructive and detrimental to development: Mohandas Pai

ಬೆಂಗಳೂರು, ಫೆ.26- ಕರ್ನಾಟಕ ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ಕುರಿತು ಇನ್ಫೋಸಿಸ್‌‍ನ ಮಾಜಿ ಸಿಎಫ್‌ಒ ಮೋಹನದಾಸ್‌‍ ಪೈ ಅವರು ಗ್ಯಾರಂಟಿ ಯೋಜನೆಗಳು ವಿನಾಶಕಾರಿ ಮತ್ತು ಅಭಿವೃದ್ಧಿ ನಿಧಿಯ ಮೇಲೆ ಬರಿದಾಗುವಿಕೆ ಎಂದು ತೀವ್ರವಾಗಿ ಟೀಕಿಸಿದ್ದಾರೆ.
ಈ ಯೋಜನೆಗಳಿಗೆ ಖರ್ಚು ಮಾಡಿದ 60,000-70,000 ಕೋಟಿ ರೂ.ಗೂ ಹೆಚ್ಚು ಬೆಂಗಳೂರಿನಲ್ಲಿ ಮೂಲಭೂತ ಸೌಕರ್ಯ ಬೆಳವಣಿಗೆಗೆ ಅಡ್ಡಿಯಾಗುತ್ತಿದೆ. ಶೇ.50 ರಷ್ಟು ಅನಗತ್ಯವೆಂದು ಪರಿಗಣಿಸಲಾಗಿದೆ ಎಂದು ಅವರು ತಮ ಫೇಸ್‌‍ ಬುಕ್‌ ನಲ್ಲಿ ಬರೆದುಕೊಂಡಿದ್ದಾರೆ.

ಉಚಿತ ಕೊಡುಗೆಗಳ ಮೇಲೆ ಗಮನಹರಿಸುವುದರಿಂದ ಅಭಿವೃದ್ಧಿ ಯೋಜನೆಗಳು ಅಥವಾ ಹೂಡಿಕೆಗೆ ಹಣವಿಲ್ಲ. ಇದರಿಂದಾಗಿ ಮೂಲಸೌಕರ್ಯದ ಬಗ್ಗೆ ನಿರ್ಲಕ್ಷ್ಯ ಮಾಡಲಾಗುತ್ತಿದೆ. ಬೆಂಗಳೂರು ಪ್ರಸ್ತುತ ಆಡಳಿತದಲ್ಲಿ ನಷ್ಟ ಅನುಭವಿಸಿದೆ ಎಂಬುದು ಅವರ ವಾದವಾಗಿದೆ.
ರಾಜ್ಯವು ಕಲ್ಯಾಣ ಪ್ರಯೋಜನಗಳನ್ನು ಹೇಳಿಕೊಂಡರೂ, ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ ಸೃಷ್ಟಿಯ ಮೇಲೆ ದೀರ್ಘಕಾಲೀನ ಪರಿಣಾಮವು ನಕಾರಾತಕವಾಗಿದೆ ಎಂಬುದನ್ನು ಎಂದು ಅವರು ಗಮನ ಸೆಳೆದಿದ್ದಾರೆ.

ಪ್ರಸ್ತುತ ಹಣಕಾಸು ತಂತ್ರವನ್ನು ವಿನಾಶಕಾರಿ ಪರಿಣಾಮ ಎಂದು ಕರೆದ ಪೈ ಐದು ವರ್ಷಗಳಲ್ಲಿ ರಾಜ್ಯವು ಯಾವ ಅಭಿವೃದ್ಧಿಯನ್ನು ನೋಡುತ್ತದೆ ಎಂದು ಪ್ರಶ್ನೆ ಮಾಡಿದ್ದಾರೆ. ಯೋಜನೆಗಳ ಪ್ರಶಂಸೆಗೆ ಪ್ರತಿಕ್ರಿಯಿಸಿದ ಪೈ, ಕಳೆದ 18 ತಿಂಗಳುಗಳಲ್ಲಿ ಬೆಂಗಳೂರಿನ ಮೂಲಭೂತ ಸೌಕರ್ಯಕ್ಕೆ ಏನು ಮಾಡಲಾಗಿದೆ ಎಂಬುದನ್ನು ತಿಳಿಸಲು ಒತ್ತಾಯಿಸಿದ್ದಾರೆ.

ಜೀವನವು ಹೆಚ್ಚು ಶೋಚನೀಯವಾಗಿದೆ ಮತ್ತು ಭ್ರಷ್ಟಾಚಾರ ಹೆಚ್ಚಾಗಿದೆ ಮೂಲಭೂತ ಸೌಕರ್ಯ, ಶಿಕ್ಷಣದಲ್ಲಿ ಹೆಚ್ಚಿನ ಹೂಡಿಕೆಯನ್ನು ಪ್ರತಿಪಾದಿಸಿದ್ದಾರೆ. 2026 ರ ಆರಂಭದಲ್ಲಿ, ಈ ರಾಜ್ಯ ಮಟ್ಟದ ನೀತಿಗಳಿಂದ ಉಂಟಾಗುವ ಆರ್ಥಿಕ ಒತ್ತಡವನ್ನು ಎದುರಿಸಲು ಮುಂಬರುವ ಕೇಂದ್ರ ಬಜೆಟ್‌‍ನಲ್ಲಿ ಬೆಂಗಳೂರಿಗೆ ವಿಶೇಷ ಹಣವನ್ನು ನೀಡುವಂತೆಯೂ ಮೋಹನ್‌ ದಾಸ್‌‍ ಪೈ ಮನವಿ ಮಾಡಿಕೊಂಡಿದ್ದಾರೆ.

RELATED ARTICLES

Latest News