Homeಬೆಂಗಳೂರುಸಾಮಾಜಿಕ ಜಾಲತಾಣದಲ್ಲಿ ಮಾಯಾಂಗನೆ ಮೋಹಕ್ಕೆ ಸಿಲುಕಿ 5.95 ಕೋಟಿ ಕಳೆದುಕೊಂಡ ಅಮಾಯಕ

ಸಾಮಾಜಿಕ ಜಾಲತಾಣದಲ್ಲಿ ಮಾಯಾಂಗನೆ ಮೋಹಕ್ಕೆ ಸಿಲುಕಿ 5.95 ಕೋಟಿ ಕಳೆದುಕೊಂಡ ಅಮಾಯಕ

Innocent man loses Rs 5.95 crore after falling for a social media scam

ಬೆಂಗಳೂರು,ಜೂ.2- ಫೇಸ್‌‍ಬುಕ್‌ ಮತ್ತು ಗೂಗಲ್‌ನಲ್ಲಿ ಪರಿಚಯವಾಗುವ ಮಾಯಾಂಗನೆಯರ ಮಾತಿನ ಮೋಡಿಗೆ ಹಾಗೂ ಮೋಹಕ್ಕೆ ಮನಸೋತು ಹಣ ಕಳೆದು ಕೊಳ್ಳುತ್ತಿರುವವರ ಸಂಖ್ಯೆ ದಿನೇ ದಿನೇ ಏರುತ್ತಲೇ ಇದೆ.

ಈ ಘಟನೆಗೆ ಉದಾಹರಣೆ ಎಂಬಂತೆ ನಗರದ ವ್ಯಕ್ತಿಯೊಬ್ಬರು ಲಾಭಾಂಶದ ಆಸೆಯಿಂದ ನಕಲಿ ಟ್ರೇಡಿಂಗ್‌ ಆ್ಯಪ್‌ ನಂಬಿ 5.95 ಕೋಟಿ ರೂ. ಕಳೆದುಕೊಂಡಿದ್ದಾರೆ. ಈ ವ್ಯಕ್ತಿಗೆ ಅವರ ಸ್ನೇಹಿತರು ಮೊದಲು ಪಿಯು ಪ್ರೈಮ್‌ ಎಂಬ ಆನ್‌ಲೈನ್‌ ಟ್ರೇಡಿಂಗ್‌ ಬಗ್ಗೆ ಮಾಹಿತಿ ನೀಡಿದ್ದರು.ಆದರೆ ಆನ್‌ಲೈನ್‌ ಹೂಡಿಕೆ ಬಗ್ಗೆ ಅವರಿಗೆ ಅಷ್ಟಾಗಿ ಜ್ಞಾನವಿಲ್ಲದ ಕಾರಣ ಗೂಗಲ್‌ ಮತ್ತು ಫೇಸ್‌‍ಬುಕ್‌ನಲ್ಲಿ ವೃತ್ತಿಪರ ಮಾರ್ಗದರ್ಶನಕ್ಕಾಗಿ ಹುಡುಕಾಟ ನಡೆಸುತ್ತಿದ್ದರು.

ಆ ಸಂದರ್ಭದಲ್ಲಿ ಶಿಲ್ಪಾ ಶಿವಕುಮಾರ್‌ ಎಂಬ ಹೆಸರಿನ ಮಹಿಳೆ ಪರಿಚಯವಾಗಿದ್ದು, ಇವರಿಬ್ಬರ ನಡುವೆ ಲಾಭ ಹಂಚಿಕೆಯ ಒಪ್ಪಂದ ಬಳಿಕ ಅವರನ್ನು ತನ್ನ ವಂಚನೆಯ ತಾಲ ತಾಣದಲ್ಲಿ ನೋಂದಣಿ ಮಾಡಿಸಿದ್ದಾಳೆ.

ಆ ಫ್ಲಾಟ್‌ಫಾರ್ಮ್‌ನಲ್ಲಿ ಟ್ರೇಡಿಂಗ್‌ ಆರಂಭಿಸಿದಾಗ ಡ್ಯಾಶ್‌ಬೋರ್ಡ್‌ನಲ್ಲಿ ಭಾರಿ ಪ್ರಮಾಣದ ಲಾಭ ಕಂಡು ಬಂದಿದ್ದರಿಂದ ಈ ಜಾಲತಾಣವನ್ನು ಸಂಪೂರ್ಣವಾಗಿ ನಂಬಿದ ಈ ವ್ಯಕ್ತಿಗೆ ಆರಂಭದಲ್ಲಿ ಸ್ವಲ್ಪ ಹಣವನ್ನು ಹಿಂಪಡೆಯಲು ಅವಕಾಶ ಸಿಕ್ಕಿದೆ.

ಫ್ಲಾಟ್‌ಫಾರ್ಮ್‌ನ ಅಸಲಿಯತ್ತನ್ನು ಪರೀಕ್ಷಿಸಲು ಬೇರೊಂದು ಖಾತೆ ತೆರೆದಾಗಲೂ ಲಾಭ ತೋರಿಸಲಾಗಿತ್ತು. ಆದರೆ ಇದು ನಕಲಿ ಆ್ಯಪ್‌ ಎಂಬುವುದು ಸಂತ್ರಸ್ತ ವ್ಯಕ್ತಿಗೆ ಗೊತ್ತಾಗಲೇ ಇಲ್ಲ.
ಇದನ್ನೇ ಬಂಡವಾಳ ಮಾಡಿಕೊಂಡ ವಂಚಕರು ಸಂತ್ರಸ್ತ ವ್ಯಕ್ತಿಗೆ ಹೆಚ್ಚಿನ ಹಣ ಹೂಡಿಕೆ ಮಾಡುವಂತೆ ನಿರಂತರವಾಗಿ ಪ್ರಚೋದಿಸಿದ್ದಾರೆ.ಆಗಾಗ್ಗೆ ಲಾಭಾಂಶ ಬರುತ್ತಿದ್ದರಿಂದ ಈ ವ್ಯಕ್ತಿ ತಮ ಹಾಗೂ ಪತ್ನಿಯ ಖಾತೆಯಿಂದ ಹಂತ ಹಂತವಾಗಿ 5.95 ಕೋಟಿ ರೂ. ಹೂಡಿಕೆ ಮಾಡಿದ್ದಾರೆ.

ಟ್ರೇಡಿಂಗ್‌ ಖಾತೆಯಲ್ಲಿ ಬರೋಬ್ಬರಿ 50 ಕೋಟಿ ರೂ. ಲಾಭಾಂಶ ತೋರಿಸುತ್ತಿದ್ದುದ್ದನ್ನು ಗಮನಿಸಿ ಆ ಹಣವನ್ನು ಹಿಂಪಡೆಯಲು ಈ ವ್ಯಕ್ತಿ ಮುಂದಾದಾಗ ಹಣ ಪಡೆದುಕೊಳ್ಳಲಾಗದೇ ಸೈಬರ್‌ ವಂಚಕರ ಗಾಳಕ್ಕೆ ಸಿಕ್ಕಿಹಾಕಿಕೊಂಡಿರುವುದು ಗೊತ್ತಾಗುವಷ್ಟರಲ್ಲಿ ಹೂಡಿಕೆ ಮಾಡಿದ್ದ 5.95 ಕೋಟಿ ರೂ. ಗುಳುಂ ಆಗಿದೆ.

ಮುಂದೇನು ಮಾಡುವುದೆಂದು ತೋಚದೆ ಪೊಲೀಸರ ಮೊರೆ ಹೋಗಿ ಈ ಬಗ್ಗೆ ಅವರು ನಗರದ ಸೈಬರ್‌ ಕ್ರೈಂ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ವಂಚಕರಿಗಾಗಿ ಶೋಧ ಕೈಗೊಂಡಿದ್ದಾರೆ.

RELATED ARTICLES

Latest News