ಬೆಂಗಳೂರು,ಅ.16- ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ವಿಡಿಯೋ ಅಪಪ್ರಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಇದುವರೆಗೂ 15 ಜನರನ್ನು ಸಿಸಿಬಿಯ ಸೈಬರ್ ಕ್ರೈಂ ಪೊಲೀಸರು ವಿಚಾರಣೆಗೆ ಒಳಪಡಿಸಿ ಸ್ಟಿಂಗ್ನ ಮಾಸ್ಟರ್ ಮೈಂಡ್ ಯಾರು ಎಂಬುವು ದನ್ನು ಪತ್ತೆಹಚ್ಚಲು ತನಿಖೆ ಚುರುಕುಕೊಳಿಸಿದ್ದಾರೆ.
ಪೊಲೀಸರ ಪ್ರಾಥಮಿಕ ತನಿಖೆಯಲ್ಲಿ ವಿಡಿಯೋ ಅಪ್ಲೋಡ್ ಮಾಡುವ ಉದ್ದೇಶಕ್ಕಾಗಿಯೇ ಯೂಟ್ಯೂಬ್ಚಾಲನ್ವೊಂದನ್ನು ತೆರೆಯಲಾಗಿದೆ ಎಂಬುವುದು ಕಂಡು ಬಂದಿದೆ.
ದುಷ್ಕರ್ಮಿಗಳು ಕರ್ನಾಟಕ ಹನಿಟ್ರ್ಯಾಪ್ ಹೆಸರಿನ ಯೂಟ್ಯೂಬ್ ಚಾನಲ್ ತೆಗೆದ ತಕ್ಷಣವೇ ನಾಲ್ಕು ವಿಡಿಯೋಗಳನ್ನು ಅಪ್ಲೋಡ್ ಮಾಡಲಾಗಿದೆ ಎಂಬುವುದು ತಿಳಿದು ಬಂದಿದೆ.
ಈ ಚಾನಲ್ಗೆ 15 ಮಂದಿ ಚಂದದಾರರು ಆಗಿದ್ದು, ಆ ಚಂದದಾರರ ಪಟ್ಟಿಯನ್ನು ಸಿದ್ಧಪಡಿಸಿರುವ ಸೈಬರ್ ಕ್ರೈಂ ಪೊಲೀಸರು ಅವರುಗಳನ್ನು ವಿಚಾರಣೆಗೆ ಒಳಪಡಿಸಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ.ಈಗಾಗಲೇ ಈ 54 ಮಂದಿಯ ಹಿನ್ನಲೆಯನ್ನೂ ಸಹ ಪೊಲೀಸರು ಪರಿಶೀಲಿಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ನಿನ್ನೆ ನಗರ ಪೊಲೀಸ್ ಆಯುಕ್ತರ ಕಚೇರಿಗೆ ತೆರಳಿದ ಮಾಜಿ ಮುಖ್ಯಮಂತ್ರಿ, ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ ಅವರು ನಗರ ಪೊಲೀಸ್ ಆಯುಕ್ತ ಸೀಮಂತ್ಕುಮಾರ್ ಸಿಂಗ್ ಅವರ ಜೊತೆ ಸುಮಾರು ಅರ್ಧ ಗಂಟೆಗಳ ಕಾಲ ಚರ್ಚಿಸಿದರು. ನಂತರ ಆಯುಕ್ತ ಕಚೇರಿಯ ಮೆಟ್ಟಿಲುಗಳ ಮೇಲೆ ಧರಣಿ ಮಾಡಿದರು. ಆಗ ಆಯುಕ್ತರು ಅವರ ಮನವೊಲಿಸಿದ ಪರಿಣಾಮ ಧರಣಿಯನ್ನು ಕೈಬಿಟ್ಟರು.
ಆಯುಕ್ತರು ಕಚೇರಿಯಿಂದ ತೆರಳುವಾಗ ಸ್ಟಿಂಗ್ ಆಪರೇಷನ್ನ ಪ್ರಮುಖ ರುವಾರಿಗಳನ್ನು ಎರಡು ದಿನಗಳಲ್ಲಿ ಬಂದಿಸದಿದ್ದರೇ ರಾಜ್ಯಾದ್ಯಂತ ಪ್ರತಿಭಟನೆ ನಡೆಸುವುದಾಗಿ ಕುಮಾರಸ್ವಾಮಿ ಅವರು ಎಚ್ಚರಿಕೆ ನೀಡಿದರು. ಈ ಹಿನ್ನಲೆಯಲ್ಲಿ ಆಯುಕ್ತರಾದ ಸೀಮಂತ್ಕುಮಾರ್ ಸಿಂಗ್ ಅವರೇ ಈ ಪ್ರಕರಣದ ತನಿಖೆಯ ಪ್ರಗತಿಯ ಇಂಚಿಂಚು ಮಾಹಿತಿಯನ್ನು ಪಡೆದುಕೊಂಡು ತನಿಖಾಧಿಕಾರಿಗಳಿಗೆ ಮಾರ್ಗದರ್ಶನ ನೀಡುತ್ತಿದ್ದಾರೆ.
