ಹುಣಸೂರು,ಅ.23- ಪ್ರಿಯಕರನೊಂದಿಗೆ ಸೇರಿ ಇಡ್ಲಿಗೆ ದತ್ತೂರಿ ಬೀಜದ ಪುಡಿ ಬೆರೆಸಿ, ಬಳಿಕ ಕತ್ತು ಹಿಸುಕಿ ಪತಿಯನ್ನೇ ಪತಿ ಕೊಲೆ ಮಾಡಿರುವ ಘಟನೆ ಹುಣಸೂರಿನ ವಿನೋಬ ಕಾಲೋನಿಯಲ್ಲಿ ನಡೆದಿದೆ.ಗಾರೆ ಕೆಲಸ ಮಾಡುತ್ತಿದ್ದ ರಾಮಪ್ರಸಾದ್ (35) ಕೊಲೆಯಾದ ದುರ್ದೈವಿ.
ಮೈಸೂರಿನ ಕೆಸರೆಯ ಮಹಿಳೆಯನ್ನು ಮದುವೆಯಾಗಿದ್ದ ರಾಮಪ್ರಸಾದ್ ದಂಪತಿಗೆ 11 ವರ್ಷದ ಗಂಡು ಮಗು ಹಾಗೂ 9 ವರ್ಷದ ಹೆಣ್ಣು ಮಗು ಇದೆ. ಅದೇ ಗ್ರಾಮದ ವ್ಯಕ್ತಿಯೊಂದಿಗೆ ಮಹಿಳೆ ಅನೈತಿಕ ಸಂಬಂಧ ಹೊಂದಿದ್ದಳು ಎನ್ನಲಾಗಿದೆ. ಈ ವಿಚಾರವಾಗಿ ದಂಪತಿ ನಡುವೆ ಆಗಾಗ ಜಗಳ ನಡೆಯುತ್ತಿತ್ತು.
ಅ.16 ರಂದು ಕುಡಿದು ಬಂದಿದ್ದ ರಾಮಪ್ರಸಾದ್ಗೆ ಇಡ್ಲಿಯಲ್ಲಿ ದತ್ತೂರಿ ಬೀಜದ ಪುಡಿ ಬೆರೆಸಿ ತಿನ್ನಿಸಿದ್ದಾಳೆ. ಯೂಟ್ಯೂಬ್ನಲ್ಲಿ ದತ್ತೂರಿ ಬೀಜದ ಕುರಿತು ಮಾಹಿತಿ ಪಡೆದು ಈ ಕೃತ್ಯ ಎಸಗಿದ್ದಾಳೆ. ಇದಕ್ಕೂ ಸಾಯದಿದ್ದಾಗ ಕತ್ತು ಹಿಸುಕಿ ಕೊಲೆ ಮಾಡಿದ್ದಾಳೆ.
ಬಳಿಕ ಪತಿಯ ಸಹೋದರ ನಿಗೆ ಕರೆ ಮಾಡಿ ಪತಿ ಮೊಸರು ತಿಂದು ಮಲಗಿ ಎದ್ದೇಳುತ್ತಿಲ್ಲ ಎಂದು ಹೇಳಿದ್ದಾಳೆ. ಬಳಿಕ ಅಣ್ಣನನ್ನು ಆಸ್ಪತ್ರೆಗೆ ಕೊಂಡೊಯ್ದ ಸಹೋದರನಿಗೆ ಆತ ಮೃತಪಟ್ಟಿರುವುದು ತಿಳಿದಿದೆ. ಸ್ವಗ್ರಾಮದಲ್ಲಿ ಅಂತ್ಯಕ್ರಿಯೆಯೂ ಜರುಗಿತ್ತು.
ಅದೇ ರಾತ್ರಿ ರಾತ್ರಿ ಪ್ರಿಯಕರ ಮಹಿಳೆಯ ಮನೆಗೆ ಹೋಗಿದ್ದರ ಬಗ್ಗೆ ಸ್ಥಳೀಯರು ಮಾಹಿತಿ ನೀಡಿದ್ದು, ಅನುಮಾನಗೊಂಡ ಸಹೋದರ ಪೊಲೀಸರಿಗೆ ದೂರು ನೀಡಿದ್ದಾರೆ.ಪೊಲೀಸರ ತನಿಖೆಯಲ್ಲಿ ಘಟನೆಯ ಸತ್ಯಾಂಶ ಬಯಲಾಗಿದ್ದು,ಮಹಿಳೆ ಹಾಗೂ ಪ್ರಿಯಕರ ಇಬ್ಬರನ್ನು ಹುಣಸೂರು ಗ್ರಾಮಾಂತರ ಪೊಲೀಸರು ಬಂಧಿಸಿದ್ದಾರೆ.
