Homeರಾಜ್ಯವಿಡಿಯೋ ಕಾಲ್‌ ಮೂಲಕ ಯುವ ಕ್ರಿಕೆಟಿಗನಿಗೆ ಮಹಿಳೆ ಬ್ಲ್ಯಾಕ್‌ಮೇಲ್‌‍, ಹಣ ವಸೂಲಿ

ವಿಡಿಯೋ ಕಾಲ್‌ ಮೂಲಕ ಯುವ ಕ್ರಿಕೆಟಿಗನಿಗೆ ಮಹಿಳೆ ಬ್ಲ್ಯಾಕ್‌ಮೇಲ್‌‍, ಹಣ ವಸೂಲಿ

Woman blackmails young cricketer through video call, extorts money

ಬೆಂಗಳೂರು, ಜುಲೈ 23- ಡೇಟಿಂಗ್‌ ಆ್ಯಪ್‌ ಮೂಲಕ ಪರಿಚಯವಾದ ಮಹಿಳೆಯೊಬ್ಬಳು ವಿಡಿಯೋ ಕಾಲ್‌ನಲ್ಲಿ ಅಶ್ಲೀಲ ದೃಶ್ಯಗಳನ್ನು ದಾಖಲಿಸಿಕೊಂಡು, ಅದನ್ನು ವೈರಲ್‌ ಮಾಡುವುದಾಗಿ ಬೆದರಿಸಿ ಯುವ ಕ್ರಿಕೆಟಿಗನಿಂದ ಹಣ ವಸೂಲಿ ಮಾಡಿದ ಘಟನೆ ಬೆಂಗಳೂರಿನಲ್ಲಿ ಬೆಳಕಿಗೆ ಬಂದಿದೆ.

ಮೊದಲ ಬಾರಿ ಹಣ ಪಡೆದ ಬಳಿಕವೂ ಮತ್ತಷ್ಟು ಹಣಕ್ಕೆ ಬೇಡಿಕೆ ಇಟ್ಟಿದ್ದರಿಂದ ಸಂತ್ರಸ್ತ ಸೈಬರ್‌ ಕ್ರೈಂ ಪೊಲೀಸ್‌‍ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರ ಪ್ರಕಾರ, ಮಹಾರಾಷ್ಟ್ರ ಮೂಲದ ಯುವ ಕ್ರಿಕೆಟಿಗ ಬೆಂಗಳೂರಿನ ಉತ್ತರ ಭಾಗದ ಖಾಸಗಿ ಪಂಚತಾರಾ ಹೋಟೆಲ್‌ನಲ್ಲಿ ತಂಗಿದ್ದ ವೇಳೆ ಈ ಘಟನೆ ನಡೆದಿದೆ. ಅವರು ಡೇಟಿಂಗ್‌ ಆ್ಯಪ್‌ನಲ್ಲಿ ತಮ ಮೊಬೈಲ್‌ ಸಂಖ್ಯೆಯನ್ನು ನೋಂದಾಯಿಸಿದ್ದರು. ಬಳಿಕ ಆ ಆ್ಯಪ್‌ ಮೂಲಕ ಪರಿಚಯವಾದ ಮಹಿಳೆ ವಿಡಿಯೋ ಕರೆ ಮಾಡಿದ್ದಾಳೆ.

ಆರಂಭದಲ್ಲಿ ಮಹಿಳೆ ವಿಡಿಯೋ ಕರೆಯಲ್ಲೇ ಅಶ್ಲೀಲ ವರ್ತನೆ ತೋರಿದ್ದಳು. ಆಕೆಯ ಪ್ರಚೋದನೆಗೆ ಒಳಗಾದ ಯುವಕ ಕೂಡ ಬಟ್ಟೆ ಬಿಚ್ಚಿದ್ದಾನೆ. ಸುಮಾರು 30 ಸೆಕೆಂಡುಗಳ ಬಳಿಕ ಮಹಿಳೆ ಕರೆ ಕಡಿತಗೊಳಿಸಿದ್ದಾಳೆ.

ಸ್ವಲ್ಪ ಸಮಯದ ಬಳಿಕ ಅದೇ ಮಹಿಳೆ ಹಾಗೂ ಆಕೆಯ ಸಹಚರರು ಯುವಕನ ವಿಡಿಯೋ ಮತ್ತು ಚಿತ್ರಗಳನ್ನು ಕಳುಹಿಸಿ, ಅವುಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಮಾಡುವುದಾಗಿ ಬೆದರಿಸಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ.

ಮಾನಹಾನಿಯ ಭಯದಿಂದ ಯುವ ಕ್ರಿಕೆಟಿಗ ಆರೋಪಿಗಳ ಖಾತೆಗೆ ಹಣ ವರ್ಗಾವಣೆ ಮಾಡಿದ್ದಾರೆ. ಆದರೆ ಹಣ ಪಡೆದ ನಂತರವೂ ನಿರಂತರವಾಗಿ ಕರೆ ಮಾಡಿ ಮತ್ತಷ್ಟು ಹಣ ನೀಡುವಂತೆ ಒತ್ತಡ ಹೇರಿದ್ದಾರೆ ಎನ್ನಲಾಗಿದೆ.

ಇದರಿಂದ ಆತಂಕಗೊಂಡ ಯುವ ಕ್ರಿಕೆಟಿಗ ಸ್ನೇಹಿತರ ಸಲಹೆ ಮೇರೆಗೆ ಬೆಂಗಳೂರು ಸೈಬರ್‌ ಕ್ರೈಂ ಪೊಲೀಸ್‌‍ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಮುಂದುವರಿಸಿದ್ದಾರೆ.

ಅಪರಿಚಿತರಿಂದ ಬರುವ ವಿಡಿಯೋ ಕರೆಗಳನ್ನು ಸ್ವೀಕರಿಸಬಾರದು, ಡೇಟಿಂಗ್‌ ಆ್ಯಪ್‌ಗಳಲ್ಲಿ ವೈಯಕ್ತಿಕ ಮಾಹಿತಿ ಹಂಚಿಕೊಳ್ಳುವಾಗ ಎಚ್ಚರಿಕೆ ವಹಿಸಬೇಕು ಹಾಗೂ ಅಪರಿಚಿತರ ಪ್ರಚೋದನೆಗೆ ಒಳಗಾಗಬಾರದು ಎಂದು ಸಲಹೆ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕೃತಕ ಬುದ್ಧಿಮತ್ತೆ ಸೇರಿದಂತೆ ವಿವಿಧ ತಂತ್ರಜ್ಞಾನಗಳನ್ನು ಬಳಸಿಕೊಂಡು ಇಂತಹ ಸೆಕ್‌್ಸಟಾರ್ಷನ್‌‍ ಮತ್ತು ಸೈಬರ್‌ ವಂಚನೆ ಪ್ರಕರಣಗಳು ಹೆಚ್ಚುತ್ತಿದ್ದು, ಸಾರ್ವಜನಿಕರು ಹೆಚ್ಚಿನ ಜಾಗರೂಕತೆ ವಹಿಸುವಂತೆ ಪೊಲೀಸರು ಮನವಿ ಮಾಡಿದ್ದಾರೆ.

RELATED ARTICLES

Latest News