ಬೆಂಗಳೂರು,ಅ.8- ಖಾಸಗಿ ವಾಹಿನಿ ನಡೆಸಿಕೊಡುವ ಬಿಗ್ ಬಾಸ್ ಕಾರ್ಯಕ್ರಮಕ್ಕೆ ಮಹಿಳಾ ಆಯೋಗ ಬಿಗ್ ಶಾಕ್ ನೀಡಿದೆ. ಬಿಗ್ಬಾಸ್ನಲ್ಲಿ ಭಾಗವಹಿಸಿರುವ ಸ್ಪರ್ಧಾಳು ಮಹಿಳೆಯರಿಗೆ ಊಟ ಮತ್ತು ಶೌಚಾಲಯ ವಿಚಾರದಲ್ಲಿ ತಾರತಮ್ಯ ನೀತಿ ಅನುಸರಿಸಲಾಗುತ್ತಿದೆ ಎಂದು ಆರೋಪಿಸಿರುವ ಆಯೋಗದ ಅಧ್ಯಕ್ಷೆ ನಾಗಲಕ್ಷ್ಮಿ ಚೌಧರಿ ಬಿಗ್ಬಾಸ್ ಮನೆಗೆ ಭೇಟಿ ನೀಡಿ ಪರಿಶೀಲನೆಗೆ ಮುಂದಾಗಿದ್ದರು.
ಆಯೋಗದ ಈ ನಡೆಗೆ ಗಡ ಗಡ ನಡುಗಿರುವ ಬಿಗ್ಬಾಸ್ ತಂಡ ನಾವೇ ಬಂದು ನಿಮ್ಮ ಪ್ರಶ್ನೆಗಳಿಗೆ ಉತ್ತರಿಸುತ್ತೇವೆ ಬಿಗ್ಬಾಸ್ ಮನೆ ಪ್ರವೇಶ ಬೇಡ ಎಂದು ಪರಿ ಪರಿಯಾಗಿ ಬೇಡಿಕೊಂಡಿದೆ.
ಬಿಗ್ ಬಾಸ್ ಮನೆಗೆ ಎಂಟ್ರಿ ಆಗದಂತೆ ಮಹಿಳಾ ಆಯೋಗಕ್ಕೆ ಬಿಗ್ ಬಾಸ್ ಕಾರ್ಯಕ್ರಮ ಆಯೋಜಕರು ಮನವಿ ಮಾಡಕೊಂಡಿದ್ದು ನಾವೇ ನಿಮ್ಮ ಕಚೇರಿಗೆ ಬಂದು ಉತ್ತರ ನೀಡುತ್ತೇವೆ ಎಂದು ಕೇಳಿಕೊಂಡಿದ್ದಾರೆ. ಬಿಗ್ ಬಾಸ್ ಮನೆಯಲ್ಲಿನ ಊಟದ ವಿಚಾರದಲ್ಲಿನ ತಾರತಮ್ಯ ಹಾಗೂ ಶೌಚಾಲಯದ ಸಮಸ್ಯೆಗಳನ್ನು ಬಗೆಹರಿಸುತ್ತೆವೆ ಎಂದು ಆಯೋಜಕರು ಭರವಸೆ ನೀಡಿದ್ದಾರೆ.
ಸ್ವರ್ಗ ನರಕ ಕಾನ್ಸೆಪ್ಟ್ ನಲ್ಲಿ ಬಿಗ್ ಬಾಸ್ ಮನೆಯಲ್ಲಿ ಸ್ಪಧಿಗಳ ಮೇಲೆ ದೌರ್ಜನ್ಯ ಮಾಡಲಾಗುತ್ತಿರೋದಾಗಿ ದೂರು ಬಂದ ಹಿನ್ನೆಲೆಯಲ್ಲಿ ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಲು ಆಯೋಗದ ಅಧ್ಯಕ್ಷರು ಸಿದ್ದತೆ ಮಾಡಿಕೊಂಡಿದ್ದರು.ಈಗಾಗಲೇ ಸ್ವರ್ಗ ನಿವಾಸಿಗಳಿಗೆ ಸ್ಪಧಿಗಳಿಗೂ ಮೂರು ಹೊತ್ತು ಗಂಜಿ ಊಟದ ಬದಲು ಪೌಷ್ಟಿಕ ಆಹಾರವನ್ನೆ ನೀಡುತ್ತಿರೊದಾಗಿ ದೂರವಾಣಿ ಮೂಲಕ ಮಾಹಿತಿ ನೀಡಲಾಗಿದೆ. ಇಂದು ಅಥವ ನಾಳೆ ಎಲ್ಲ ಸಮಸ್ಯೆಯನ್ನು ಸರಿಪಡಿಸುವ ಭರವಸೆಯನ್ನು ಆಯೋಗಕ್ಕೆ ನೀಡಲಾಗಿದ