Friday, March 7, 2025
Homeಕ್ರೀಡಾ ಸುದ್ದಿ | SportsSteve Smith Retires : ಏಕದಿನ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಆಸೀಸ್ ನಾಯಕ ಸ್ಟೀವನ್...

Steve Smith Retires : ಏಕದಿನ ಕ್ರಿಕೆಟ್‌ಗೆ ಗುಡ್ ಬೈ ಹೇಳಿದ ಆಸೀಸ್ ನಾಯಕ ಸ್ಟೀವನ್ ಸ್ಮಿತ್

Steve Smith retires from ODIs

ಬೆಂಗಳೂರು, ಮಾ.5- ಭಾರತ ವಿರುದ್ಧ ನಡೆದ ಚಾಂಪಿಯನ್ಸ್ ಟ್ರೋಫಿಯ ಸೆಮಿಫೈನಲ್ ಪಂದ್ಯದ ಸೋಲಿನ ಬೆನ್ನಲ್ಲೇ ಆಸ್ಟ್ರೇಲಿಯಾದ ನಾಯಕ ಸ್ಟೀವನ್ ಸ್ಮಿತ್ (Steve Smith) ಅವರು ತಮ್ಮ ಏಕದಿನ ಕ್ರಿಕೆಟ್ (ODI cricket) ಜೀವನಕ್ಕೆ ಗುಡ್‌ ಬೈ ಹೇಳಿದ್ದಾರೆ.

ದುಬೈನಲ್ಲಿ ನಡೆದ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಸ್ಮಿತ್ 73 ರನ್ ಗಳಿಸಿದ ಪರಿಣಾಮ ಆಸ್ಟ್ರೇಲಿಯಾ 265 ಸ್ಪರ್ಧಾತ್ಮಕ ಮೊತ್ತ ಗಳಿಸಿತು. ಆದರೆ ವಿರಾಟ್‌ ಕೊಹ್ಲಿ ಅರ್ಧಶತಕ (84) ನೆರವಿನಿಂದ ಭಾರತ 4 ವಿಕೆಟ್ ಗೆಲುವು ಸಾಧಿಸಿ ಫೈನಲ್ ಪ್ರವೇಶಿಸಿತು. ಈ ಸೋಲಿನಿಂದ ಬೇಸತ್ತ ಸ್ಮಿತ್ ತಮ್ಮ 25 ವರ್ಷಗಳ ಏಕದಿನ ಪಯಣಕ್ಕೆ ವಿದಾಯ ಹೇಳಿದ್ದಾರೆ.

ಟೆಸ್ಟ್ ಕ್ರಿಕೆಟ್ ನ ಫ್ಯಾಬ್ 4ರಲ್ಲಿ ಒಬ್ಬರಾಗಿ ಗುರುತಿಸಿಕೊಂಡಿರುವ ಸ್ಟೀವನ್ ಸ್ಮಿತ್ 2015ರ ಏಕದಿನ ಹಾಗೂ 2021ರ ಟ್ವೆಂಟಿ-20 ವಿಶ್ವಕಪ್ ಟೂರ್ನಿಗಳಲ್ಲಿ ಆಸ್ಟ್ರೇಲಿಯಾ ಚಾಂಪಿಯನ್ ಪಟ್ಟ ಅಲಂಕರಿಸುವಲ್ಲಿ ಮಹತ್ತರ ಪಾತ್ರ ವಹಿಸಿದ್ದರು.

ನನ್ನ ವೃತ್ತಿ ಜೀವನದಲ್ಲಿ ಹಲವಾರು ಉತ್ಕೃಷ್ಟ ಆಟಗಾರರೊಂದಿಗೆ ಮೈದಾನ ಹಂಚಿಕೊಂಡಿದ್ದೇನೆ ಅಲ್ಲದೆ ಎರಡು ವಿಶ್ವಕಪ್ ಗೆದ್ದಿರುವುದು ಸದಾ ನೆನಪಾಗಿರುತ್ತದೆ. ಮುಂಬರುವ 2027ರ ಏಕದಿನ ವಿಶ್ವಕಪ್ ಟೂರ್ನಿಯಲ್ಲಿ ಯುವ ಆಟಗಾರರಿಗೆ ತಂಡದಲ್ಲಿ ಸ್ಥಾನ ಕಲ್ಪಿಸುವ ದೃಷ್ಟಿಯಿಂದಾಗಿ ಏಕದಿನ ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳುವ ನಿರ್ಧಾರ ಕೈಗೊಂಡಿದ್ದರೂ, ಮುಂಬರುವ ವಿಶ್ವ ಟೆಸ್ಟ್ ಚಾಂಪಿಯನ್ ಶಿಪ್ ದೃಷ್ಟಿಯಿಂದ ಟೆಸ್ಟ್ ಕ್ರಿಕೆಟ್ ನತ್ತ ಸಂಪೂರ್ಣವಾಗಿ ಗಮನಹರಿಸುತ್ತೇನೆ ಎಂದು ಸ್ಟೀವನ್ ಸ್ಮಿತ್ ಸುದ್ದಿಗೋಷ್ಠಿಯಲ್ಲಿ ಹೇಳಿದ್ದಾರೆ.

2010ರಲ್ಲಿ ಮೆಲ್ಲೋರ್ನ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧದ ಪಂದ್ಯದ ಮೂಲಕ ಏಕದಿನ ಕ್ರಿಕೆಟ್ ಗೆ ಪಾದರ್ಪಣೆ ಮಾಡಿದ ಸ್ಮಿತ್, 170 ಏಕದಿನ ಪಂದ್ಯಗಳಿಂದ 5800 ರನ್ ಹಾಗೂ 28 ವಿಕೆಟ್ ಪಡೆದಿದ್ದು 12 ಶತಕ ಹಾಗೂ 35 ಅರ್ಧಶತಕ ಸಿಡಿಸಿದ್ದಾರೆ.

RELATED ARTICLES

Latest News