Friday, September 12, 2025
Homeರಾಜ್ಯಧರ್ಮಾಂಧರಿಂದ ಕಲ್ಲು ತೂರಾಟ ಪ್ರಕರಣ : ಮದ್ದೂರು ಠಾಣೆ ಇನ್ಸ್ ಪೆಕ್ಟರ್‌ ಅಮಾನತು

ಧರ್ಮಾಂಧರಿಂದ ಕಲ್ಲು ತೂರಾಟ ಪ್ರಕರಣ : ಮದ್ದೂರು ಠಾಣೆ ಇನ್ಸ್ ಪೆಕ್ಟರ್‌ ಅಮಾನತು

Stone pelting case by fanatics: Maddur police station inspector suspended

ಬೆಂಗಳೂರು,ಸೆ.12– ಕರ್ತವ್ಯ ಲೋಪದ ಅರೋಪದ ಮೇಲೆ ಮದ್ದೂರು ಪೊಲೀಸ್‌‍ ಠಾಣೆಯ ಇನ್‌್ಸಪೆಕ್ಟರ್‌ ಶಿವಕುಮಾರ್‌ರವರನ್ನು ಅಮಾನತು ಮಾಡಲಾಗಿದೆ. ಭಾನುವಾರ ರಾತ್ರಿ ಮದ್ದೂರು ನಗರದ ಚೆನ್ನೇಗೌಡನ ದೊಡ್ಡಿಯಲ್ಲಿ ಪ್ರತಿಷ್ಠಾಪಿಸಿದ್ದ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆ ರಾಮ್‌ ರಹೀಂ ನಗರದ ಮಸೀದಿ ಮುಂದೆ ಸಾಗುತ್ತಿದ್ದಾಗ ಲೈಟ್‌ ಆಫ್‌ ಮಾಡಿ ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದರು.

ಈ ಹಿನ್ನೆಲೆಯಲ್ಲಿ ಸಂಘರ್ಷ ಉಂಟಾಗಿದ್ದರಿಂದ ನಿಷೇಧಾಜ್ಞೆ ಜಾರಿಗೊಳಿಸಲಾಗಿತ್ತು. ಮಾರನೇ ದಿನ ಅಂದಿನ ಘಟನೆಯನ್ನು ಖಂಡಿಸಿ ಹಿಂದೂಪರ ಸಂಘಟನೆಗಳು ಪ್ರತಿಭಟನೆ ನಡೆಸಿದ್ದರಿಂದ ಸಾವಿರಾರು ಮಂದಿ ಜಮಾಯಿಸಿದ್ದರು.

ಪರಿಸ್ಥಿತಿ ಕೈ ಮೀರುತ್ತಿರುವುದನ್ನು ಅರಿತ ಪೊಲೀಸರು ಗುಂಪನ್ನು ಚದುರಿಸಲು ಲಾಠಿಪ್ರಹಾರ ನಡೆಸಿದರು. ಆ ವೇಳೆ ಆರೇಳು ಮಂದಿ ಗಾಯಗೊಂಡರು.ಮಂಗಳವಾರ ಬಿಜೆಪಿ ಹಾಗೂ ಜೆಡಿಎಸ್‌‍ ನಾಯಕರು ಹಾಗೂ ಸಹಸ್ರಾರು ಮಂದಿ ಪಾಲ್ಗೊಂಡು ಸಾಮೂಹಿಕ ಗಣೇಶ ಮೂರ್ತಿಗಳನ್ನು ವಿಸರ್ಜಿಸಿದ್ದಾರೆ.

ಮದ್ದೂರು ಘಟನೆಯನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ ಇದೀಗ ಇನ್‌್ಸಪೆಕ್ಟರ್‌ರವರನ್ನು ಅಮಾನತು ಮಾಡಿದೆ.ಈ ನಡುವೆಯೇ ಮಂಡ್ಯ ಜಿಲ್ಲಾ ಅಡಿಷನಲ್‌ ಎಸ್ಪಿ ತಿಮಯ್ಯ ಅವರನ್ನೂ ಸಹ ಸರ್ಕಾರ ವರ್ಗಾವಣೆ ಮಾಡಿದೆ.

RELATED ARTICLES

Latest News