Sunday, May 18, 2025
Homeರಾಜ್ಯಚನ್ನಗಿರಿ ಪೊಲೀಸ್‌‍ ಠಾಣೆ ಮೇಲೆ ಕಲ್ಲು ತೂರಾಟ : 11 ಸಿಬ್ಬಂದಿಗೆ ಗಾಯ, 10ಕ್ಕೂ ಹೆಚ್ಚು...

ಚನ್ನಗಿರಿ ಪೊಲೀಸ್‌‍ ಠಾಣೆ ಮೇಲೆ ಕಲ್ಲು ತೂರಾಟ : 11 ಸಿಬ್ಬಂದಿಗೆ ಗಾಯ, 10ಕ್ಕೂ ಹೆಚ್ಚು ವಾಹನಗಳು ಜಖಂ

ದಾವಣಗೆರೆ, ಮೇ 25- ಲಾಕಪ್‌ ಡೆತ್‌ ಎಂದು ಆರೋಪಿಸಿ ಮೃತನ ಸಂಬಂಧಿಕರು ರಾತ್ರಿ ಚನ್ನಗಿರಿ ಪೊಲೀಸ್‌‍ ಠಾಣೆ ಮೇಲೆ ಕಲ್ಲು ತೂರಾಟ ನಡೆಸಿದ್ದರಿಂದ 11 ಮಂದಿ ಪೊಲೀಸ್‌‍ ಸಿಬ್ಬಂದಿ ಗಾಯಗೊಂಡಿದ್ದು, 10 ಕ್ಕೂ ಹೆಚ್ಚು ಪೊಲೀಸ್‌‍ ವಾಹನಗಳು ಜಖಂ ಗೊಂಡಿವೆ. ಚನ್ನಗಿರಿಯಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದ್ದು, ಪೊಲೀಸ್‌‍ ಬಂದೋಬಸ್ತು ಮಾಡಲಾಗಿದೆ.

ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾ ಪೊಲೀಸ್‌‍ ವರಿಷ್ಠಾಧಿಕಾರಿ ಉಮಾಪ್ರಶಾಂತ್‌, ಮಟ್ಕ ಆಡಿಸುತ್ತಿದ್ದ ಆರೋಪದ ಮೇಲೆ ಆದಿಲ್‌(30) ಎಂಬ ಯುವಕನನ್ನು ಠಾಣೆಗೆ ಕರೆತಂದ ಐದಾರು ನಿಮಿಷದಲ್ಲಿಯೇ ಆತನ ಆರೋಗ್ಯದಲ್ಲಿ ಏರಿಪೇರಾಗಿ ಕುಸಿದು ಬಿದ್ದಿದ್ದಾನೆ. ತಕ್ಷಣ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಯಿತು.

ವೈದ್ಯರು ಪರೀಕ್ಷಿಸಿ ಮೃತಪಟ್ಟಿದ್ದಾನೆ ಎಂದು ತಿಳಿಸಿದ್ದಾರೆ. ಆದರೂ ಕೂಡ ಈತನ ಸಂಬಂಧಿಕರು ಲಾಕಪ್‌ ಡೆತ್‌ ಎಂದು ಹೇಳುತ್ತಿದ್ದಾರೆ. ನಮಲ್ಲಿ ಸಿಸಿ ಕ್ಯಾಮೆರಾ ಇದ್ದು ಪರಿಶೀಲನೆ ಮಾಡಿ ಪ್ರಮಾಣಿಕ ತನಿಖೆ ನಡೆಸುತ್ತೇವೆ ಎಂದು ಅವರು ತಿಳಿಸಿದ್ದಾರೆ.

ಈ ಸಂಬಂಧ ಮೃತನ ತಂದೆ ದೂರು ಕೊಟ್ಟಿದ್ದಾರೆ. ಇದು ಗಂಭೀರ ಪ್ರಕರಣವಾದ ಹಿನ್ನೆಲೆಯಲ್ಲಿ ಸೂಕ್ತ ತನಿಖೆ ಮಾಡಲಾಗುವುದು. ಈಗಾಗಲೇ ಮೃತದೇಹವನ್ನು ಜಿಲ್ಲಾಸ್ಪತ್ರೆಗೆ ಕಳುಹಿಸಲಾಗಿದೆ ಎಂದರು.ನಿನ್ನೆ ಸಂಜೆ ಕಲ್ಲು ತೂರಾಟ ನಡೆಸಿದ್ದರಿಂದ ನಾಲ್ಕು ಪ್ರಕರಣ ದಾಖಲಿಸಲಾಗಿದೆ. ಸದ್ಯಕ್ಕೆ ಪರಿಸ್ಥಿತಿ ನಿಯಂತ್ರಣದಲ್ಲಿದೆ ಎಂದು ಅವರು ಹೇಳಿದರು.

RELATED ARTICLES

Latest News