Sunday, September 15, 2024
Homeಜಿಲ್ಲಾ ಸುದ್ದಿಗಳು | District Newsಯಾದಗಿರಿ : ಅಂಗಡಿಗಳಿಗೆ ಬೆಂಕಿ ಬಿದ್ದು ಸುಟ್ಟು ಕರಕಲಾದ ದವಸ -ಧಾನ್ಯಗಳು

ಯಾದಗಿರಿ : ಅಂಗಡಿಗಳಿಗೆ ಬೆಂಕಿ ಬಿದ್ದು ಸುಟ್ಟು ಕರಕಲಾದ ದವಸ -ಧಾನ್ಯಗಳು

ಯಾದಗಿರಿ,ಆ.18-ಅಂಗಡಿಗಳಿಗೆ ಬೆಂಕಿ ಬಿದ್ದು ಅಪಾರ ಪ್ರಮಾಣದ ದವಸ -ಧಾನ್ಯಗಳು,ಆಹಾರ ಪದಾರ್ಥ ಸುಟ್ಟು ಕರಕಲಾಗಿರುವ ಘಟನೆ ಯಾದಗಿರಿ ತಾಲೂಕಿನ ಸೈದಾಪುರ ಪಟ್ಟಣದಲ್ಲಿ ನಡೆದಿದೆ.

ಸುಮಾರು 15 ಕ್ಕೂ ಹೆಚ್ಚು ಅಂಗಡಿಗಳಿಗೆ ಬೆಂಕಿಯಿಂದ ಹಾನಿಯಾಗಿದ್ದು ,ಸ್ಥಳೀಯರು ಹಾಗು ಅಂಗಡಿ ಮಾಲೀಕರು ಆತಂಕಗೊಂಡಿದ್ದಾರೆ. ಸಾಲು ಸಾಲು ಅಂಗಡಿಗಳಲ್ಲಿ ಹೊಟೇಲ್‌‍,ಬೇಕರಿ,ಗ್ಯಾರೇಜ್‌ ಸೇರಿ ಇನ್ನಿತರ ಅಂಗಡಿಗಳಲ್ಲಿ ಇದ್ದವು ಕಳೆದ ರಾತ್ರಿ ಈ ದುರ್ಘಟನೆ ಸಂಭವಿಸಿದೆ.

ಯಾವುದೋ ಅಂಗಡಿಯಲ್ಲಿ ರಾತ್ರಿ ಬೆಂಕಿ ಹೊತ್ತಿಕೊಂಡಿದ್ದು ಅದು ಕ್ರಮೇಣ ಎಲ್ಲಡೆ ವ್ಯಾಪಿಸಿದೆ ಬೆಂಕಿ ಕೆನ್ನಾಲಿಗೆಗೆ ಅಪಾರ ಪ್ರಮಾಣದ ವಸ್ತುಗಳು ಹಾನಿ,ಇದು ಶಾರ್ಟ್‌ಸಕ್ಯೂಟ್‌ನಿಂದ ಅಥವಾ ಕಡಿಗೇಡಿಗಳ ಕೃತ್ಯವೇ ಎಂಬುದು ತಿಳಿದಿಲ್ಲ.

ಯಾದಗಿರಿಯಿಂದ ಇಲ್ಲಿಗೆ ಬರಲು 1 ಗಂಟೆ ಹಿಡಿದ್ದಿದ್ದು,ಕೊನೆಗೂ ಅಗ್ನಿಶಾಮಕ ದಳ,ಬೆಂಕಿ ನಂದಿಸಿದೆ.ಸೈದಾಪುರ ಪೊಲೀಸ್‌‍ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ತನಿಖೆ ಮುಂದುವರೆದಿದೆ.

RELATED ARTICLES

Latest News