Saturday, June 7, 2025
Homeರಾಷ್ಟ್ರೀಯ | Nationalದೆಹಲಿಯಲ್ಲಿ ಮಿತಿಮೀರಿದ ಬೀದಿನಾಯಿಗಳ ಹಾವಳಿ, ಒಂಟಿಯಾಗಿ ಓಡಾಡಲು ಹೆದರುತ್ತಿದ್ದಾರೆ ಜನ

ದೆಹಲಿಯಲ್ಲಿ ಮಿತಿಮೀರಿದ ಬೀದಿನಾಯಿಗಳ ಹಾವಳಿ, ಒಂಟಿಯಾಗಿ ಓಡಾಡಲು ಹೆದರುತ್ತಿದ್ದಾರೆ ಜನ

Stray dogs in Delhi, people are afraid to walk alone

ನವದೆಹಲಿ, ಜೂ.7– ಬೀದಿನಾಯಿಗಳ ಹಾವಳಿಯಿಂದಾಗಿ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಜನ ಓಡಾಡಲು ಭಯ ಬೀಳುತ್ತಿರುವ ಪ್ರಸಂಗ ವರದಿಯಾಗಿದೆ. ಒಂದು ಬದಿಯಿಂದ ಮತ್ತೊಂದು ಬದಿಯ 180 ಮೀಟರ್ ದೂರದಲ್ಲಿರುವ ಮನೆಗೆ ನಡೆದುಹೋದರೆ ನಾಯಿಗಳ ಹಾವಳಿಗೆ ಸಿಲುಕಬೇಕಾಗುತ್ತದೆ ಎಂಬ ಕಾರಣಕ್ಕೆ ಮಹಿಳೆಯೊಬ್ಬರು ಬೈಕ್ ಟ್ಯಾಕ್ಸಿ ಬುಕ್ ಮಾಡಿಕೊಂಡು ಮನೆ ತಲುಪಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಇತ್ತೀಚೆಗೆ ದೆಹಲಿಯ ಹಾದಿಬೀದಿಗಳಲ್ಲಿ ಮಕ್ಕಳು, ಮಹಿಳೆಯರ ಮೇಲೆ ಕೆಲವು ಸಂದರ್ಭಗಳಲ್ಲಿ ಪುರುಷರ ಮೇಲೂ ನಾಯಿಗಳು ದಾಳಿ ಮಾಡಿರುವುದು, ಕಚ್ಚಿ ಗಾಯಗೊಳಿಸಿರುವ ಭೀಕರ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿವೆ.

ಹೀಗಾಗಿ ಒಂಟಿಯಾಗಿ ಓಡಾಡಲು ಜನ ಹೆದರುತ್ತಿದ್ದು, ಬೈಕ್ ಟ್ಯಾಕ್ಸಿ, ಆಟೋದಂತಹ ವ್ಯವಸ್ಥೆಗಳ ಮೊರೆ ಹೋಗುತ್ತಿದ್ದಾರೆ. 180 ಮೀಟರ್ ದೂರದ ಬುಕ್ಕಿಂಗ್ ಸ್ವೀಕರಿಸಿದ ಬೈಕ್ ಟ್ಯಾಕ್ಸಿಯ ರೈಡರ್ ಇಷ್ಟು ಕಡಿಮೆ ಅಂತರಕ್ಕೆ ಬೈಕ್ ಟ್ಯಾಕ್ಸಿ ಬುಕ್ ಮಾಡುವ ಅಗತ್ಯವಿತ್ತೇ ಎಂದು ಮಹಿಳೆಯನ್ನು ಪ್ರಶ್ನಿಸಿದ್ದಾರೆ. ಈ ರಸ್ತೆಗಳಲ್ಲಿ ನಾಯಿಗಳ ಹಾವಳಿ ಹೆಚ್ಚಿದೆ. ನಡೆದುಹೋಗಲು ಸಾಧ್ಯವಿಲ್ಲ ಎಂದು ಆಕೆ ಹೇಳಿಕೊಂಡಿದ್ದಾರೆ.

ಆಕೆಯ ಬಗ್ಗೆ ಅನುಕಂಪ ತೋರಿಸಿದ ರೈಡರ್ ಬನ್ನಿ ಡ್ರಾಪ್ ಮಾಡುತ್ತೇನೆ ಎಂದು ಸುರಕ್ಷಿತವಾಗಿ ಕರೆದುಕೊಂಡು ಹೋಗಿ 2 ನಿಮಿಷದಲ್ಲೇ ಡ್ರಾಪ್ ಮಾಡಿ ತಮ್ಮ ಜೀವನದಲ್ಲಿ ಅತೀ ಕಡಿಮೆ ಅವಧಿಯ ಡ್ರಾಪ್ ಇದು ಎಂದು ಪ್ರತಿಕ್ರಿಯಿಸಿದ್ದಾರೆ. ನಾಯಿಗಳ ಹಾವಳಿ ದೆಹಲಿಯ ಜನವಸತಿ ಪ್ರದೇಶಗಳಲ್ಲಿ ತೀವ್ರವಾಗಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಬಿಸಿಬಿಸಿ ಚರ್ಚೆ ನಡೆಯುತ್ತಿವೆ.

RELATED ARTICLES

Latest News