Tuesday, May 28, 2024
Homeಜಿಲ್ಲಾ ಸುದ್ದಿಗಳು25,000 ಹಣ ನೀಡಿ ಗೆಲ್ಲುವಂತೆ ಶುಭ ಹಾರೈಸಿದ ಚುರುಮುರಿ ವ್ಯಾಪಾರಿ

25,000 ಹಣ ನೀಡಿ ಗೆಲ್ಲುವಂತೆ ಶುಭ ಹಾರೈಸಿದ ಚುರುಮುರಿ ವ್ಯಾಪಾರಿ

ಚಿಕ್ಕಮಗಳೂರು,ಮಾ.23- ಲೋಕಸಭಾ ಚುನಾವಣಾ ಪ್ರಚಾರದ ವೇಳೆ ಬಿಜೆಪಿ ಕಾರ್ಯಕರ್ತ ಹಾಗೂ ಚುರುಮುರಿ ವ್ಯಾಪಾರಿಯೋರ್ವ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಕೋಟಾ ಶ್ರೀನಿವಾಸ ಪೂಜಾರಿಗೆ 25,000 ಹಣ ನೀಡಿ ಗೆಲ್ಲುವಂತೆ ಶುಭ ಹಾರೈಸಿದರು.

ಕೋಟಾ ಶ್ರೀನಿವಾಸ ಪೂಜಾರಿ ಚಿಕ್ಕಮಗಳೂರು ತಾಲ್ಲೂಕಿನ ವಿವಿಧ ಭಾಗದಲ್ಲಿ ಚುನಾವಣಾ ಪ್ರಚಾರ ಕೈಗೊಂಡಿದ್ದಾರೆ. ಈ ವೇಳೆ ಪ್ರಚಾರಕ್ಕೆಂದು ಹೋದಾಗ ಹೊರವಲಯದ ತೇಗೂರು ಸರ್ಕಲ್‍ನಲ್ಲಿನ ಚುರುಮುರಿ ವ್ಯಾಪಾರಿ ಲೊಕೇಶ್ ಬಾಬು ಅವರು ಕೋಟಾ ಶ್ರೀನಿವಾಸ್ ಪೂಜಾರಿಗೆ 25 ಸಾವಿರ ಹಣವನ್ನು ಚುನಾವಣಾ ಖರ್ಚಿಗಾಗಿ ನೀಡಿ ಗೆಲ್ಲುವಂತೆ ಶುಭ ಹಾರೈಸಿದ್ದಾರೆ.

ಕಳೆದ 25 ವರ್ಷಗಳಿಂದ ತೇಗೂರು ಸರ್ಕಲ್‍ನಲ್ಲಿ ಚುರುಮುರಿ ಅಂಗಡಿ ಇಟ್ಟಿರುವ ಲೊಕೇಶ್ ಬಿಜೆಪಿಯ ಅಪ್ಪಟ ಕಾರ್ಯಕರ್ತ. ಇಂದು ಕೋಟಾ ಪ್ರತಿಯೊಂದು ಅಂಗಡಿಗಳಿಗೆ ಹೋಗಿ ಮತಯಾಚನೆ ಮಾಡುವ ವೇಳೆ ಹಣ ನೀಡಿ ಶುಭ ಕೋರಿದ್ದಾರೆ. ಈ ವೇಳೆ ಕೋಟಾ ಜೊತೆಗಿದ್ದ ಮಾಜಿ ಸಚಿವ ಸಿ.ಟಿ ರವಿ ಲೋಕೇಶ್‍ರನ್ನು ಆತ್ಮೀಯವಾಗಿ ತಬ್ಬಿಕೊಂಡು ಇಂತಹ ದೇವ ದುರ್ಲಬ ಕಾರ್ಯಕರ್ತರೇ ಬಿಜೆಪಿಯ ಶಕ್ತಿ ಎಂದು ವರ್ಣಿಸಿದರು.

ನಂತರ ಮಾತನಾಡಿದ ಮಾಜಿ ಸಚಿವ ಸಿ.ಟಿ ರವಿ, ಇಂದು ಮತ್ತು ನಾಳೆ ಚಿಕ್ಕಮಗಳೂರಿನಲ್ಲಿ ಪ್ರಚಾರ ಮಾಡಲಿರುವ ಕೋಟಾ ಶ್ರೀನಿವಾಸ ಪೂಜಾರಿ ಜಿಲ್ಲೆಯ ವಿವಿಧೆಡೆ ಪ್ರಚಾರ ಮಾಡಲಿದ್ದಾರೆ. ಸರಳ ಹಾಗೂ ಸಜ್ಜನ ವ್ಯಕ್ತಿತ್ವದ ಕೋಟಾಗೆ ಮತದಾರರು ಬೆಂಬಲ ನೀಡುವಂತೆ ಭರವಸೆ ನೀಡಿದ್ದಾರೆ ಎಂದರು.ಜಿಜಪಿ ಜಿಲ್ಲಾಧ್ಯಕ್ಷ ದೇವರಾಸ್ ಶೆಟ್ಟಿ ಮುಂಡರಾದ ರಂಗನಾಥ್, ಕನಕರಾಜ್, ಪುಷ್ಪರಾಜ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

RELATED ARTICLES

Latest News