Tuesday, February 11, 2025
Homeಅಂತಾರಾಷ್ಟ್ರೀಯ | Internationalಉತ್ತರ ಮೆಕ್ಸಿಕೋದಲ್ಲಿ ಚುನಾವಣಾ ಪ್ರಚಾರದ ವೇಳೆ ಬಿರುಗಾಳಿಗೆ ವೇದಿಕೆ ಕುಸಿದು 9 ಮಂದಿ ಸಾವು

ಉತ್ತರ ಮೆಕ್ಸಿಕೋದಲ್ಲಿ ಚುನಾವಣಾ ಪ್ರಚಾರದ ವೇಳೆ ಬಿರುಗಾಳಿಗೆ ವೇದಿಕೆ ಕುಸಿದು 9 ಮಂದಿ ಸಾವು

ಮೆಕ್ಸಿಕೊ, ಮೇ 23 (ಎಪಿ) ಉತ್ತರ ಮೆಕ್ಸಿಕನ್‌ ರಾಜ್ಯವಾದ ನ್ಯೂವೊ ಲಿಯಾನ್‌ನಲ್ಲಿ ಚುನಾವಣಾ ಪ್ರಚಾರ ರ್ಯಾಲಿಯಲ್ಲಿ ಬಿರುಗಾಳಿ ಬೀಸಿದ ಪರಿಣಾಮ ವೇದಿಕೆಯನ್ನು ಉರುಳಿ ಮಗು ಸೇರಿದಂತೆ ಒಂಬತ್ತು ಜನರು ಸಾವನ್ನಪ್ಪಿ ಸುಮಾರು 63 ಮಂದಿ ಗಾಯಗೊಂಡರು.

ಅಧ್ಯಕ್ಷೀಯ ಅಭ್ಯರ್ಥಿ ಜಾರ್ಜ್‌ ಅಲ್ವಾರೆಜ್‌ ಮೈನೆಜ್‌ ಅವರು ತಪ್ಪಿಸಿಕೊಳ್ಳಲು ವೇದಿಕೆಯಿಂದ ಓಡಿದ್ದಾರೆ ಈ ವೇಳೆ ವೇದಿಕೆ ಕುಸಿದಿದೆ.ಮುಂಬರುವ ಪ್ರಚಾರ ಕಾರ್ಯಕ್ರಮಗಳನ್ನು ಅವರು ಸ್ಥಗಿತಗೊಳಿಸಿದ್ದಾರೆ.ಸೈನಿಕರು, ಪೊಲೀಸರು ಮತ್ತು ಇತರ ಅಽಕಾರಿಗಳು ಕಾರ್ಯಕ್ರಮ ನಡೆದ ಉದ್ಯಾನವನದ ಮೈದಾನದಲ್ಲಿ ಸುತ್ತಾಡಿದಾಗ ಹತ್ತಿರದ ಅನೇಕರು ದುರಂತದಿಂದ ದಿಗ್ಭಮೆಗೊಂಡಿದ್ದಾರೆ.

ಇತರ ಅಧ್ಯಕ್ಷೀಯ ಅಭ್ಯರ್ಥಿಗಳು ಸೇರಿದಂತೆ ಮೆಕ್ಸಿಕೋದಾದ್ಯಂತ ಸಂತಾಪಗಳು ಹರಿದುಬಂದವು.ಮಾಂಟೆರ್ರಿ ನಗರದ ಬಳಿ ಸ್ಯಾನ್‌ ಪೆಡ್ರೊ ಗಾರ್ಜಾ ಗಾರ್ಸಿಯಾದ ಶ್ರೀಮಂತ ಉಪನಗರದ ನಿವಾಸಿಗಳು ಗಾಯಗೊಂಡಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಜೂನ್‌ 2 ರಂದು ಅಧ್ಯಕ್ಷೀಯ, ರಾಜ್ಯ ಮತ್ತು ಪುರಸಭೆಯ ಚುನಾವಣೆಗಳ ನಿಗದಿಯಾಗಿದೆ.

RELATED ARTICLES

Latest News