Friday, November 22, 2024
Homeಅಂತಾರಾಷ್ಟ್ರೀಯ | Internationalತೈವಾನ್‍ನ ರಾಜಧಾನಿ ತೈಪೆಯಲ್ಲಿ ಪ್ರಬಲ ಭೂಕಂಪ: ಧರೆಗುರುಳಿದ ಕಟ್ಟಡಗಳು..

ತೈವಾನ್‍ನ ರಾಜಧಾನಿ ತೈಪೆಯಲ್ಲಿ ಪ್ರಬಲ ಭೂಕಂಪ: ಧರೆಗುರುಳಿದ ಕಟ್ಟಡಗಳು..

ತೈಪೇತಿ, ಏ.3-ಕಾಲು ಶತಮಾನದಲ್ಲೇ ಭೂಕಂಪ ಇಂದು ಬೆಳಗ್ಗೆ ಜನದಟ್ಟಣೆಯ ವೇಳೆ ತೈವಾನ್‍ಅನ್ನು ನಡುಗಿಸಿದ್ದು, ಕಟ್ಟಡಗಳನ್ನು ಹಾನಿಗೊಳಿಸಿದೆ, ನಾಲ್ವರು ಸಾವಿಗೀಡಾಗಿದ್ದಾರೆ. 57 ಮಂದಿ ಗಾಯಗೊಂಡಿದ್ದಾರೆ. ದಕ್ಷಿಣ ಜಪಾನೀ ದ್ವೀಪಗಳ ತೀರಕ್ಕೆ ಸುನಾಮಿ ಅಲೆಗಳು ಅಪ್ಪಳಿಸಲು ಭೂಕಂಪ ಕಾರಣವಾಯಿತು.

ಎರಡು ಗಂಟೆಗಳ ಬಳಿಕ ಸುನಾಮಿ ಮುನ್ನೆಚ್ಚರಿಕೆ ನೀಡಲಾಯಿತು. ಭೂಕಂಪದ ಕೇಂದ್ರಕ್ಕೆ ಸಮೀಪವಿರುವ ಹುವಾಲಿಯೆನ್ ಕರಾವಳಿ ನಗರದ ನೈಋತ್ಯಕ್ಕಿರುವ ಸಾಧಾರಣ ಜನಸಂಖ್ಯೆಯುಳ್ಳ ಐದು ಅಂತಸ್ತಿನ ಕಟ್ಟಡ ತೀವ್ರ ಜಖಂಗೊಂಡಿದೆ. ಕಟ್ಟಡದ ಮೊದಲ ಮಹಡಿ ಕುಸಿದಿದ್ದು, ಉಳಿದ ಭಾಗ 45 ಡಿಗ್ರಿಯಷ್ಟು ವಾಲಿಕೊಂಡಿದೆ.

ರಾಜಧಾನಿಯಲ್ಲಿ ಹಳೆಯ ಕಟ್ಟಡಗಳಿಂದ ಹೆಂಚುಗಳು ಬಿದ್ದಿವೆ. ಕೆಲವು ಕಟ್ಟಡಗಳ ನಿವೇಶನಗಳಿಂದ ಅವಶೇಷಗಳು ಬಿದ್ದಿವೆ. ಶಾಲೆಗಳು ವಿದ್ಯಾರ್ಥಿಗಳನ್ನು ಆಟದ ಮೈದಾನಗಳಿಗೆ ಸ್ಥಳಾಂತರಗೊಳಿಸಿವೆ. ಕೆಲವು ವಿದ್ಯಾರ್ಥಿಗಳು ಮರುಕಂಪನಗಳ ಪರಿಣಾಮವಾಗಿ ಬೀಳುತ್ತಿದ್ದ ವಸ್ತುಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಲು ತಲೆಗೆ ಪುಸ್ತಕಗಳನ್ನು ಅಡ್ಡ ಹಿಡಿದು ಓಡಿದರು.

23 ದಶಲಕ್ಷ ಜನಸಂಖ್ಯೆಯ ದ್ವೀಪದಾದ್ಯಂತ ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ. ಉಪನಗರ ರೈಲು ಸಂಚಾರವೂ ಸ್ಥಗಿತಗೊಂಡಿದೆ. ನೆಲದಿಂದ ಮೇಲೆ ನೂತನವಾಗಿ ನಿರ್ಮಿಸಲಾಗಿದ್ದ ರೈಲು ಹಳಿ ಭಾಗಶಃ ಬೇರ್ಪಟ್ಟಿದೆ. ರಾಷ್ಟ್ರೀಯ ಶಾಸಕಾಂಗ ಭವನ, 2ನೇ ಮಹಾಯುದ್ಧಕ್ಕೆ ಮುನ್ನ ನಿರ್ಮಿಸಿ ಶಾಲೆಯನ್ನಾಗಿ ಪರಿವರ್ತಿಸಲಾಗಿದ್ದ ಒಂದು ಕಟ್ಟಡದ ಗೋಡೆಗಳು ಮತ್ತು ಛಾವಣಿಗಳಿಗೆ ಹಾನಿಯಾಗಿದೆ.

ಪೂರ್ವ ಕರಾವಳಿಯ ಉದ್ದಕ್ಕೂ ವಾಹನ ಸಂಚಾರ ಅಕ್ಷರಶಃ ಸ್ತಬ್ಧವಾಗಿದೆ. ಗುಡ್ಡಗಾಡುಗಳಿರುವ ಈ ಪ್ರದೇಶದಲ್ಲಿ ಭೂಕಂಪನಗಳು ಮತ್ತು ಬೀಳುತ್ತಿರುವ ಅವಶೇಷಗಳು ಸುರಂಗಮಾರ್ಗ ಮತ್ತು ಹೆದ್ದಾರಿಗಳನ್ನು ಮುಚ್ಚಿ ಹಾಕುತ್ತಿವೆ. ವಾಹನಗಳು ಜಖಂ ಆಗಿವೆ.

RELATED ARTICLES

Latest News