Monday, March 4, 2024
Homeರಾಷ್ಟ್ರೀಯನೀಟ್ ಪರೀಕ್ಷೆ ಭೀತಿಗೆ ಮತ್ತೊಂದು ಬಲಿ

ನೀಟ್ ಪರೀಕ್ಷೆ ಭೀತಿಗೆ ಮತ್ತೊಂದು ಬಲಿ

ಕೋಟಾ, ನ 28 (ಪಿಟಿಐ) -ನೀಟ್ ಪರೀಕ್ಷೆ ಆತಂಕಕ್ಕೆ ಮತ್ತೊಂದು ಬಲಿಯಾಗಿದೆ. ಇದರೊಂದಿಗೆ ದೇಶದಲ್ಲಿ ಇದುವರೆಗೂ ನೀಟ್‍ನಿಂದ ಪ್ರಾಣ ಕಳೆದುಕೊಂಡವರ ಸಂಖ್ಯೆ 25ಕ್ಕೆ ಏರಿಕೆಯಾಗಿದೆ. ಪಶ್ಚಿಮ ಬಂಗಾಳದ 20 ವರ್ಷದ ನೀಟ್ ಆಕಾಂಕ್ಷಿಯೊಬ್ಬರು ರಾಜಸ್ಥಾನದ ಕೋಟಾ ಜಿಲ್ಲೆಯೊಂದರ ಗ್ರಾಮದ ಬಾಡಿಗೆ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ ಆದರೆ ಅವರ ಕೊಠಡಿಯಿಂದ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.

ಪಶ್ಚಿಮ ಬಂಗಾಳದ ಬಿರ್ಹಮ್ ಜಿಲ್ಲೆಯವರಾದ ಫೌರೀದ್ ಹುಸೇನ್ (20) ಕೋಟಾದ ಕೋಚಿಂಗ್ ಇನ್‍ಸ್ಟಿಟ್ಯೂಟ್‍ನಲ್ಲಿ ವೈದ್ಯಕೀಯ ಪ್ರವೇಶ ಪರೀಕ್ಷೆ ನೀಟ್‍ಗೆ ಸುಮಾರು ಒಂದು ವರ್ಷದಿಂದ ತಯಾರಿ ನಡೆಸುತ್ತಿದ್ದರು. ಈ ವರ್ಷ ಜುಲೈನಿಂದ ವೌಫ್ ನಗರದಲ್ಲಿ ಬಾಡಿಗೆಗೆ ವಾಸವಾಗಿದ್ದರು.

ಉರ್ದು ಶಾಲೆ ಸ್ಥಳಾಂತರ ಮಾಡುವಂತೆ ಒತ್ತಡ : ಸಿಎಂಗೆ ದೂರು

ಅದೇ ಮನೆಯಲ್ಲಿ ಕೋಚಿಂಗ್ ಇನ್‍ಸ್ಟಿಟ್ಯೂಟ್‍ಗಳ ಇತರ ಕೆಲವು ವಿದ್ಯಾರ್ಥಿಗಳು ವಾಸಿಸುತ್ತಿದ್ದರು. ನಿನ್ನೆ ಮಧ್ಯಾಹ್ನ ಹುಸೇನ್ ಕೊನೆಯದಾಗಿ ಕಾಣಿಸಿಕೊಂಡಿದ್ದರು. ರಾತ್ರಿ 8 ಗಂಟೆಯಾದರೂ ಕೊಠಡಿಯಿಂದ ಹೊರಗೆ ಬಾರದಿದ್ದಾಗ ಸ್ನೇಹಿತರು ಕರೆ ಮಾಡಿದರೂ ಬಾಗಿಲು ತೆರೆಯಲಿಲ್ಲ. ನಂತರ ಅವರು ಮನೆಯ ಮಾಲೀಕರಿಗೆ ಮಾಹಿತಿ ನೀಡಿದ್ದು, ಅವರು ಪೊಲೀಸರಿಗೆ ಕರೆ ಮಾಡಿದ್ದಾರೆ ಎಂದು ದಾದಾಬರಿ ಪೊಲೀಸ್ ಠಾಣೆಯ ಸರ್ಕಲ್ ಇನ್ಸ್‍ಪೆಕ್ಟರ್ ರಾಜೇಶ್ ಪಾಠಕ್ ತಿಳಿಸಿದ್ದಾರೆ.

ಪೊಲೀಸರು ಸ್ಥಳಕ್ಕೆ ಧಾವಿಸಿ ಬಾಗಿಲು ಮುರಿದು ಯುವಕ ನೇಣು ಬಿಗಿದಿರುವುದನ್ನು ಕಂಡು, ಕೋಣೆಯಲ್ಲಿ ಯಾವುದೇ ಆತ್ಮಹತ್ಯೆ ಪತ್ರ ಪತ್ತೆಯಾಗಿಲ್ಲ ಮತ್ತು ತೀವ್ರ ಹೆಜ್ಜೆಯ ಹಿಂದಿನ ಕಾರಣವನ್ನು ಇನ್ನೂ ಕಂಡುಹಿಡಿಯಲಾಗಿಲ್ಲ ಎಂದು ಅವರು ಹೇಳಿದರು. ನೀಟ್ ಪರೀಕ್ಷೆ ಆತಂಕದಿಂದ ಆಕೆ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಪೊಲೀಸರು ಶಂಕಿಸಿದ್ದಾರೆ.

RELATED ARTICLES

Latest News