Friday, November 22, 2024
Homeರಾಷ್ಟ್ರೀಯ | Nationalಕಳೆದುಹೋದ ಪಾನ್‍ಕಾರ್ಡ್‍ನಿಂದ 46ಕೋಟಿ ರೂ. ವ್ಯವಹಾರ..!

ಕಳೆದುಹೋದ ಪಾನ್‍ಕಾರ್ಡ್‍ನಿಂದ 46ಕೋಟಿ ರೂ. ವ್ಯವಹಾರ..!

ಗ್ವಾಲಿಯರ್,ಮಾ.30- ಪಾನ್ ಕಾರ್ಡ್ ದುರುಪಯೋಗದ ಪರಿಣಾಮ ವಿದ್ಯಾರ್ಥಿಯೊಬ್ಬನಿಗೆ 46 ಕೋಟಿ ರೂ.ಗಳಿಗೆ ತೆರಿಗೆ ಪಾವತಿಸುವಂತೆ ಆದಾಯ ತೆರಿಗೆ ಇಲಾಖೆ ನೋಟೀಸ್ ನೀಡಿರುವ ಘಟನೆ ಮಧ್ಯಪ್ರದೇಶದಲ್ಲಿ ನಡೆದಿದೆ. ಗ್ವಾಲಿಯರ್ ನಿವಾಸಿಯಾಗಿರುವ ವಿದ್ಯಾರ್ಥಿ ಪ್ರಮೋದ್ ಕುಮಾರ್ ದಂಡೋಟಿಯಾ ಎಂಬಾತನಿಗೆ ಐಟಿ ಇಲಾಖೆಯಿಂದ ನೋಟೀಸ್ ಬಂದಾಗಲೇ ನನ್ನ ಬ್ಯಾಂಕ್ ಖಾತೆಯಿಂದ 46 ಕೋಟಿ ರೂ.ಗಳ ವ್ಯವಹಾರ ನಡೆಸಿರುವುದು ಗೊತ್ತಾಗಿರುವುದು.

ತಕ್ಷಣ ಎಚ್ಚೆತ್ತುಕೊಂಡ ವಿದ್ಯಾರ್ಥಿ ನನ್ನ ಪಾನ್ ಕಾರ್ಡ್ ಕಳೆದುಹೋಗಿದೆ. ಅದನ್ನು ದುರುಪಯೋಗಪಡಿಸಿಕೊಂಡಿರುವ ಸಾಧ್ಯತೆ ಇದೆ ಎಂದು ಪೊಲೀಸರಿಗೆ ದೂರು ನೀಡಿದ್ದಾನೆ. ತನ್ನ ಪಾನ್ ಕಾರ್ಡ್ ಮೂಲಕ ಕಂಪನಿಯನ್ನು ನೋಂದಾಯಿಸಲಾಗಿದೆ ಮತ್ತು ಮುಂಬೈ ಮತ್ತು ದೆಹಲಿಯಲ್ಲಿ 2021 ರಲ್ಲಿ ಕಾರ್ಯನಿರ್ವಹಿಸುತ್ತಿದೆ ಎಂದು ಆತ ದೂರಿನಲ್ಲಿ ತಿಳಿಸಿದ್ದಾನೆ.

ನಾನು ಗ್ವಾಲಿಯರ್‍ನಲ್ಲಿ ಕಾಲೇಜು ವಿದ್ಯಾರ್ಥಿಯಾಗಿದ್ದೇನೆ. ಆದಾಯ ತೆರಿಗೆ ಮತ್ತು ಜಿಎಸ್‍ಟಿಯ ಸೂಚನೆಯ ನಂತರ, ಮುಂಬೈ ಮತ್ತು ದೆಹಲಿಯಲ್ಲಿ 2021 ರಲ್ಲಿ ಕಾರ್ಯನಿರ್ವಹಿಸುತ್ತಿರುವ ನನ್ನ ಪಾನ್ ಕಾರ್ಡ್ ಮೂಲಕ ಕಂಪನಿಯೊಂದು ನೋಂದಾಯಿಸಲಾಗಿದೆ ಎಂದು ನನಗೆ ತಿಳಿಯಿತು. ಹೇಗೆ ಎಂದು ನನಗೆ ತಿಳಿದಿಲ್ಲ. ನನ್ನ ಪಾನ್ ಕಾರ್ಡ್ ಅನ್ನು ದುರುಪಯೋಗಪಡಿಸಿಕೊಳ್ಳಲಾಗಿದೆ ಮತ್ತು ವಹಿವಾಟುಗಳನ್ನು ಹೇಗೆ ಮಾಡಲಾಗಿದೆ ಎಂಬುದೇ ತಿಳಿದಿಲ್ಲ ಎಂದಿದ್ದಾನೆ.

ಆದಾಯ ತೆರಿಗೆ ಇಲಾಖೆಯಿಂದ ಮಾಹಿತಿ ಪಡೆದ ಕೂಡಲೇ ಸಂಬಂಧಪಟ್ಟ ಇಲಾಖೆಯೊಂದಿಗೆ ಮಾತನಾಡಿದ್ದೇನೆ ಎಂದು ತಿಳಿಸಿದರು. ಬಳಿಕ ಹಲವು ಬಾರಿ ಪೊಲೀಸರಿಗೆ ದೂರು ನೀಡಲು ಯತ್ನಿಸಿದರೂ ಯಾವುದೇ ಕ್ರಮ ಕೈಗೊಂಡಿರಲಿಲ್ಲ.ಹೀಗಾಗಿ ಮತ್ತೆ ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆಗಮಿಸಿ ಮತ್ತೆ ದೂರು ದಾಖಲಿಸಿದ್ದೇನೆ ಎಂದು ಅವರು ತಿಳಿಸಿದ್ದಾರೆ.

ಯುವಕನಿಂದ ರೂ.46 ಕೋಟಿಗೂ ಹೆಚ್ಚು ಮೊತ್ತದ ವ್ಯವಹಾರವನ್ನು ತನ್ನ ಬ್ಯಾಂಕ್ ಖಾತೆಯಿಂದ ಮಾಡಲಾಗಿದೆ ಎಂದು ಅರ್ಜಿ ಸ್ವೀಕರಿಸಲಾಗಿದೆ, ಈ ಸಂಬಂಧ ದಾಖಲೆಗಳನ್ನು ಪರಿಶೀಲಿಸಲಾಗುತ್ತಿದೆ. ಪಾನ್ ಕಾರ್ಡ್ ದುರುಪಯೋಗಪಡಿಸಿಕೊಂಡಿದೆ, ಅದರ ಮೂಲಕ ಕಂಪನಿಯನ್ನು ನೋಂದಾಯಿಸಲಾಗಿದೆ ಮತ್ತು ಇಷ್ಟು ದೊಡ್ಡ ಮೊತ್ತದ ವ್ಯವಹಾರಗಳನ್ನು ಮಾಡಲಾಗಿದೆ ಎಂಬ ಬಗ್ಗೆ ತನಿಖೆ ನಡೆಸಲಾಗುವುದು ಎಂದು ಹೆಚ್ಚುವರಿ ಪೊಲೀಸ್ ವರಿಷ್ಠಾಧಿಕಾರಿ (ಎಎಸ್‍ಪಿ) ಶಿಯಾಜ್ ಕೆಎಂ ತಿಳಿಸಿದ್ದಾರೆ.

RELATED ARTICLES

Latest News