Thursday, December 5, 2024
Homeರಾಷ್ಟ್ರೀಯ | Nationalಜೆಇಇ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿ ಆತಹತ್ಯೆ

ಜೆಇಇ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ವಿದ್ಯಾರ್ಥಿ ಆತಹತ್ಯೆ

Student preparing for JEE in Kota commits suicide

ಕೋಟಾ(ರಾಜಸ್ಥಾನ),ನ.24- ರಾಜಸ್ಥಾನದ ಕೋಟಾದಲ್ಲಿ ಜೆಇಇ ಪರೀಕ್ಷೆಗೆ ಸಿದ್ಧತೆ ನಡೆಸುತ್ತಿದ್ದ ಮಧ್ಯಪ್ರದೇಶದ ವಿದ್ಯಾರ್ಥಿ ಆತಹತ್ಯೆ ಮಾಡಿಕೊಂಡಿದ್ದಾನೆ.ಮಧ್ಯಪ್ರದೇಶದ ಅಣ್ಣುಪುರದ ನಿವಾಸಿ ವಿವೇಕ್‌ಕುಮಾರ್‌ (18) ಆತಹತ್ಯೆ ಮಾಡಿಕೊಂಡ ವಿದ್ಯಾರ್ಥಿ.

ವಿದ್ಯಾರ್ಥಿ ಕೊಠಡಿಯಿಂದ ಯಾವುದೇ ಡೆತ್‌ನೋಟ್‌ ಪತ್ತೆಯಾಗಿಲ್ಲ. ಆತಹತ್ಯೆಗೆ ಕಾರಣ ತಿಳಿದುಬಂದಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.ಆತಹತ್ಯೆ ಮಾಡಿಕೊಂಡ ವಿದ್ಯಾರ್ಥಿ ಏಪ್ರಿಲ್‌ನಿಂದ ಇಲ್ಲಿನ ಕೋಚಿಂಗ್‌ ಇನ್ಸ್ಟಿಟ್ಯೂಟ್‌ನಲ್ಲಿ ಜೆಇಇಗೆ ತಯಾರಿ ನಡೆಸುತ್ತಿದ್ದ. ನಿನ್ನೆ ಮಧ್ಯರಾತ್ರಿ ಆತಹತ್ಯೆ ಮಾಡಿಕೊಂಡಿದ್ದಾನೆ.

ತನಿಖೆಗೆ ವಸತಿ ನಿಲಯಕ್ಕೆ ಪೊರೆನ್ಸಿಕ್‌ ತಂಡ ಕಳುಹಿಸಲಾಗಿದೆ. ಪೋಷಕರು ಬಂದ ನಂತರ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿ ಅವರ ಹೇಳಿಕೆ ಆಧರಿಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಉಪಪೊಲೀಸ್‌‍ ವರಿಷ್ಠಾಧಿಕಾರಿ ಯೋಗೇಶ್‌ ಶರ್ಮಾ ತಿಳಿಸಿದ್ದಾರೆ.

ಕೋಟಾದಲ್ಲಿ ಈ ವರ್ಷ ಜನವರಿಯಿಂದ ಈವರೆಗೆ 16 ವಿದ್ಯಾರ್ಥಿಗಳು ಆತಹತ್ಯೆ ಮಾಡಿಕೊಂಡಿದ್ದಾರೆ. ಕಳೆದ ವರ್ಷ ನಗರದಲ್ಲಿ ಇಂತಹ 26 ಪ್ರಕರಣಗಳು ನಡೆದಿದ್ದವು.

RELATED ARTICLES

Latest News