ನಾಗಮಂಗಲ, ಅ.31– ನೂತನ ರಾಘವೇಂದ್ರ ಭವನ ಹೋಟೆಲ್ನಲ್ಲಿ ಸಿಕ್ಕಿದ 7 ಲಕ್ಷ ಮೌಲ್ಯದ ಚಿನ್ನದ ಸರವನ್ನು ಸಪ್ಲೇಯರ್ ಗಮನಿಸಿ ಅದನ್ನು ಸಂಬಂಧಪಟ್ಟವರಿಗೆ ತಲುಪಿಸುವ ಮೂಲಕ ಪ್ರಾಮಾಣಿಕತೆ ಮೆರೆದಿದ್ದಾರೆ.
ಈ ಹೋಟೇಲ್ಗೆ ಬಂದಿದ್ದ ತಮ್ಮಣ್ಣ ಎಂಬುವವರು 60ಗ್ರಾಂ ಚಿನ್ನದ ಸರವನ್ನು ಕಳೆದು ಕೊಂಡಿದ್ದಾರೆ. ಅದೇ ಹೋಟೆಲ್ನಲ್ಲಿ ಸಪ್ಲೇಯರ್ ಆಗಿ ಕೆಲಸ ಮಾಡುತ್ತಿದ್ದ ನಾಗರಾಜ್ ಅವರಿಗೆ ಸರ ಸಿಕ್ಕಿದೆ.
ಸಪ್ಲೇಯರ್ ಆ ಸರವನ್ನು ತೆಗೆದುಕೊಂಡು ಹೋಟೇಲ್ ಮಾಲೀಕರಿಗೆ ಕೊಟ್ಟಿದ್ದಾರೆ. ಮಾಲೀಕರು ಸರ ಕಳೆದುಕೊಂಡಿದ್ದವರನ್ನು ಪತ್ತೆ ಹಚ್ಚಿ ಸುಮಾರು 7 ಲಕ್ಷ ಮೌಲ್ಯದ ಸರವನ್ನು ಸಂಬಂಧಪಟ್ಟವರಿಗೆ ತಲುಪಿಸಿದ್ದಾರೆ. ಹೋಟೇಲ್ ಸಪ್ಲೇಯರ್ ಹಾಗೂ ಮಾಲೀಕರಿಗೆ ಸಾರ್ವಜನಿಕರು, ಹೋಟೆಲ್ ಗ್ರಾಹಕರು ಅಭಿನಂದಿಸಿದ್ದಾರೆ.

