Sunday, October 6, 2024
Homeರಾಷ್ಟ್ರೀಯ | Nationalಹೈಕೋರ್ಟ್‌ ನ್ಯಾಯಮೂರ್ತಿ ಶ್ರೀಶಾನಂದ ಅವರ ಹೇಳಿಕೆ ವೈರಲ್, ವರದಿ ಕೇಳಿದ ಸುಪ್ರೀಂ

ಹೈಕೋರ್ಟ್‌ ನ್ಯಾಯಮೂರ್ತಿ ಶ್ರೀಶಾನಂದ ಅವರ ಹೇಳಿಕೆ ವೈರಲ್, ವರದಿ ಕೇಳಿದ ಸುಪ್ರೀಂ

Supreme Court initiates suo motu case after Justice V Srishananda's Controversial Comments

ನವದೆಹಲಿ,ಸೆ.20- ವಿಚಾರಣಾ ಸಂದರ್ಭದಲ್ಲಿ ಕರ್ನಾಟಕ ಹೈಕೋರ್ಟ್‌ ನ್ಯಾಯಮೂರ್ತಿ ವೇದವ್ಯಾಸ ಚಾರ್‌ ಶ್ರೀಶಾನಂದ ವಿವಾದಾತ್ಮಕ ಹೇಳಿಕೆ ಕುರಿತು ವರದಿ ನೀಡುವಂತೆ ಸುಪ್ರೀಂಕೋರ್ಟ್‌ ನಿರ್ದೇಶನ ನೀಡಿದೆ. ಸಾಮಾಜಿಕ ಜಾಲತಾಣದಲ್ಲಿ ನ್ಯಾಯಮೂರ್ತಿ ಶ್ರೀಶಾನಂದ ಅವರ ಹೇಳಿಕೆ ವೈರಲ್ಲಾದ ಹಿನ್ನಲೆಯಲ್ಲಿ ಸುಪ್ರೀಂಕೋರ್ಟ್‌ ಸ್ವಯಂ ದೂರು ದಾಖಲಿಸಿಕೊಂಡಿತ್ತು.

ಬೆಳಗ್ಗೆ ಸುಪ್ರೀಂಕೋರ್ಟ್‌ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್‌, ನ್ಯಾಯಮೂರ್ತಿಗಳಾದ ಸಂಜೀವ್‌ಕುಮಾರ್‌, ವಿ.ಆರ್‌.ಗವಾಯ್‌, ಸೂರ್ಯಕಾಂತ್‌ ಮತ್ತು ಋಷಿಕೇಶರಾಯ್‌ ಅವರನ್ನೊಳಗೊಂಡ ಪಂಚಪೀಠವು ಕರ್ನಾಟಕ ಹೈಕೋರ್ಟ್‌ ನ್ಯಾಯಾಧೀಶರ ಹೇಳಿಕೆ ಕುರಿತು ವರದಿ ನೀಡಬೇಕೆಂದು ರಿಜಿಸ್ಟ್ರರ್‌ ಜನರಲ್‌ಗೆ ಸೂಚನೆ ಕೊಟ್ಟಿದೆ.

ಅರ್ಟಾನಿ ಜನರಲ್‌ ವೆಂಕಟರಮಣಿ ಅವರಿಗೆ ಸೂಚನೆ ನೀಡಿದ ಸುಪ್ರೀಂಕೋರ್ಟ್‌ ಮುಖ್ಯ ನ್ಯಾಯಮೂರ್ತಿ ಚಂದ್ರಚೂಡ್‌ ಅವರು ನಾವು ಕೆಲವು ಮೂಲಭೂತ ಮಾರ್ಗಸೂಚಿಗಳನ್ನು ಹಾಕಬಹುದು ಹಾಗೂ ರಿಜಿಸ್ಟ್ರಾರ್‌ ಜನರಲ್‌ ಅವರಿಂದ ವರದಿಯನ್ನು ಕೇಳಬಹುದೆಂದು ನ್ಯಾಯಪೀಠಕ್ಕೆ ತಿಳಿಸಿದರು.

ನಮಗೆ ಸಹಾಯ ಮಾಡಲು ನಾವು ಈ ವಿಚಾರದಲ್ಲಿ ಅಟಾರ್ನಿ ಜನರಲ್‌ ಆರ್‌.ವೆಂಕಟರಮಣಿ ಮತ್ತು ಸಾಲಿಸಿಟರ್‌ ಜನರಲ್‌ ತುಷಾರ್‌ ಮೆಹ್ತಾ ಅವರ ಸಹಾಯವನ್ನೂ ಕೋರಿದ್ದೇವೆ ಎಂದು ಸಿಜೆಐ ಹೇಳಿದರು.

ಕರ್ನಾಟಕ ಹೈಕೋರ್ಟಿನ ಮುಖ್ಯ ನ್ಯಾಯಾಧೀಶರಿಂದ ಆಡಳಿತಾತಕ ನಿರ್ದೇಶನಗಳನ್ನು ಕೋರಿದ ನಂತರ ಈ ಪ್ರಕ್ರಿಯೆಯನ್ನು 2 ವಾರಗಳಲ್ಲಿ ಕೈಗೊಳ್ಳಬಹುದು. ಇಂತಹ ಸಂದರ್ಭದಲ್ಲಿ ಕೆಲವು ಮೂಲಭೂತ ಮಾರ್ಗಸೂಚಿಗಳನ್ನು ಹಾಕಬಹುದು ಎಂದು ಸುಪ್ರೀಂ ಕೋರ್ಟ್‌ ವಿಚಾರಣೆ ಸಂದರ್ಭದಲ್ಲಿ ಹೇಳಿದೆ.

ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳಿಂದ ಆಡಳಿತಾತಕ ನಿರ್ದೇಶಗಳನ್ನು ಕೋರಿ ಸುಪ್ರೀಂಕೋರ್ಟ್‌ಗೆ ವರದಿ ತಿಳಿಸುವಂತೆ ರಿಜಿಸ್ಟ್ರಾರ್‌ ಜನರಲ್‌ಗೆ ಸೂಚನೆ ನೀಡಿದ ಪೀಠವು ಅರ್ಜಿ ವಿಚಾರಣೆಯನ್ನು ಮುಂದಿನ ಸೋಮವಾರಕ್ಕೆ ಮುಂದೂಡಿದೆ.

ಸಾಮಾಜಿಕ ಜಾಲತಾಣದ ಈ ಯುಗದಲ್ಲಿ ನಮನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ. ಹೀಗಾಗಿ ಅದಕ್ಕೆ ಅನುಗುಣವಾಗಿಯೇ ನಾವು ಕಾರ್ಯ ನಿರ್ವಹಿಸಬೇಕು ಎಂದು ಚಂದ್ರಚೂಡ್‌ ಸೂಚ್ಯವಾಗಿ ಹೇಳಿದರು.

ಇತ್ತೀಚೆಗೆ ಹೈಕೋರ್ಟ್‌ನಲ್ಲಿ ಅರ್ಜಿ ವಿಚಾರಣೆ ವೇಳೆ ಎರಡು ವಿಡಿಯೋ ತುಣುಕುಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ಲಾಗಿದ್ದವು. ನ್ಯಾಯಮೂರ್ತಿ ಶ್ರೀಶಾನಂದ ಅವರು ವಿಚಾರಣೆ ಸಂದರ್ಭದಲ್ಲಿ ಬೆಂಗಳೂರಿನ ಗೋರಿಪಾಳ್ಯವನ್ನು ಪಾಕಿಸ್ತಾನ ಎಂದು ಉಲ್ಲೇಖಿಸಿದ್ದು, ಇನ್ನೊಂದು ವಿಡಿಯೋದಲ್ಲಿ ಮಹಿಳಾ ವಕೀಲರಿಗೆ ಆಕ್ಷೇಪಾರ್ಹ ಹೇಳಿಕೆ ನೀಡಿರುವುದು ವೈರಲ್ಲಾಗಿತ್ತು. ಇದರ ಬಗ್ಗೆ ಸಾಕಷ್ಟು ಪರ-ವಿರೋಧ ಚರ್ಚೆ ನಡೆಯುತ್ತಿರುವಾಗಲೇ ಸುಪ್ರೀಂಕೋರ್ಟ್‌ ಸ್ವಯಂಪ್ರೇರಿತ ದೂರು ದಾಖಲಿಸಿಕೊಂಡಿದೆ.

RELATED ARTICLES

Latest News