Monday, June 17, 2024
Homeರಾಜ್ಯವಿನಯ ಕುಲಕರ್ಣಿ ವಿರುದ್ಧದ ದೋಷಾರೋಪ ರದ್ದತಿಗೆ ಸುಪ್ರೀಂ ನಕಾರ

ವಿನಯ ಕುಲಕರ್ಣಿ ವಿರುದ್ಧದ ದೋಷಾರೋಪ ರದ್ದತಿಗೆ ಸುಪ್ರೀಂ ನಕಾರ

ಹುಬ್ಬಳ್ಳಿ,ಜೂ.11- ಬಿಜೆಪಿ ಕಾರ್ಯಕರ್ತ ಯೋಗೇಶ್‌ ಗೌಡ ಹತ್ಯೆ ಪ್ರಕರಣದಲ್ಲಿ ರಾಜ್ಯದ ಮಾಜಿ ಸಚಿವ ವಿನಯ ಕುಲಕರ್ಣಿ ಅವರ ವಿರುದ್ಧ ವಿಶೇಷ ನ್ಯಾಯಾಲಯದಲ್ಲಿ ನಿಗದಿಯಾಗಿರುವ ದೋಷಾರೋಪವನ್ನು ರದ್ದುಪಡಿಸಲು ಸುಪ್ರೀಂಕೋರ್ಟ್‌ ನಿರಾಕರಿಸಿದೆ.

2016ರಲ್ಲಿ ಧಾರವಾಡದಲ್ಲಿ ಯೋಗೇಶ್‌ ಅವರನ್ನು ಹತ್ಯೆ ಮಾಡಲಾಗಿತ್ತು. ನ್ಯಾಯಮೂರ್ತಿಗಳಾದ ಸಂಜಯ್‌ಕುಮಾರ್‌ ಮತ್ತು ಆಗಸ್ಟೀನ್‌ ಜಾರ್ಜ್‌ ಮಸೀಹ್‌ ಅವರು ಇದ್ದ ರಜಾಕಾಲದ ವಿಭಾಗೀಯ ಪೀಠವು ಕರ್ನಾಟಕ ಹೈಕೋರ್ಟ್‌ ನೀಡಿದ ಆದೇಶದಲ್ಲಿ ಮಾರ್ಪಾಡು ಮಾಡಲು ನಿರಾಕರಿಸಿತ್ತು.

ಕುಲಕರ್ಣಿ ಅವರ ವಿರುದ್ಧ ವಿಶೇಷ ನ್ಯಾಯಾಲಯವು ದೋಷಾರೋಪ ನಿಗದಿ ಮಾಡಿರುವುದರಲ್ಲಿ ಮಧ್ಯಪ್ರವೇಶ ಮಾಡಲು ಹೈಕೋರ್ಟ್‌ ಏಪ್ರಿಲ್‌ 8ರಂದು ನಿರಾಕರಿಸಿತ್ತು. ವಿಚಾರಣೆಯನ್ನು ಪೂರ್ಣಗೊಳಿಸಿ, ಕ್ರಿಮಿನಲ್‌ ಪ್ರಕರಣವನ್ನು ಸಾಧ್ಯವಾದಷ್ಟುಮಟ್ಟಿಗೆ ಮೂರು ತಿಂಗಳಲ್ಲಿ ಇತ್ಯರ್ಥಪಡಿಸುವಂತೆ ವಿಚಾರಣಾ ನ್ಯಾಯಾಲಯಕ್ಕೆ ಸೂಚಿಸಿತ್ತು.

RELATED ARTICLES

Latest News