ಚಿಕ್ಕಮಗಳೂರು,ಜ.11- ಶಸ್ತ್ರಾಸ್ತ್ರ ತ್ಯಜಿಸಿ ಎರಡು ದಿನದ ಹಿಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಎದುರು ಶರಣಾಗಿದ್ದ ಕೆಂಪು ಮಾವೋವಾದಿ ನಕ್ಸಲೀಯರು ಕಾಡಿನಲ್ಲಿ ಹುದುಗಿಸಿಟ್ಟಿದ್ದ ಭಾರೀ ಪ್ರಮಾಣದ ಶಸ್ತ್ರಾಸ್ತ್ರಗಳನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಮೇಗೂರು ಅರಣ್ಯದಲ್ಲಿ ಹೂತಿಡಲಾಗಿದ್ದ ಎ.ಕೆ 56 ಒಂದು, 303 ರೈಫಲ್ ಮೂರು, 12 ಕಂಟ್ರಿ ಮೇಡ್, (ದೇಶಿನಿರ್ಮಿತ) ಪಿಸ್ತೂಲ್ ಒಂದು ಸೇರಿದಂತೆ ಒಟ್ಟು ಹಲವು ಬಂದೂಕುಗಳು ಪತ್ತೆಯಾಗಿವೆ. ಜೊತೆಗೆ ಹನ್ನೊಂದು 7.62 ಎಂಎಂ ಎ.ಕೆ. ಮದ್ದು ಗುಂಡುಗಳು, 303 ಬಂದೂಕಿನ 133 ಗುಂಡುಗಳು ಸೇರಿದಂತೆ 176 ಜೀವಂತ ಗುಂಡುಗಳು ಪತ್ತೆಯಾಗಿವೆ. ಈ ಸಂಬಂಧ ಜಯಪುರ ಪೊಲೀಸ್ ಠಾಣೆಯಲ್ಲಿ 25(1ಬಿ), 7 ಮತ್ತು 25(1ಎ) ಶಸಾ್ತ್ರಸ್ತ್ರ ಕಾಯ್ದೆ 1959ರಡಿ ಪ್ರಕರಣ ದಾಖಲಾಗಿದೆ.
ನಕ್ಸಲರು ಶರಣಾಗತಿಗೂ ಮುನ್ನ ಮೇಗೂರು ಅರಣ್ಯದಲ್ಲಿ ಅಡಗಿದ್ದರು. ಶರಣಾಗುವ ದಿನ ಮೇಗೂರು ಅರಣ್ಯದಲ್ಲೇ ಕೊನೆಯ ಬಾರಿಗೆ ಸಭೆ ನಡೆಸಿದ್ದರು. ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಮುಂದೆ ಶರಣಾಗಿದ್ದರು. ಮೇಲ್ನೋಟಕ್ಕೆ ನಕ್ಸಲರದ್ದೇ ಎಂದು ಹೇಳಲಾಗುತ್ತಿದ್ದರೂ, ಇನ್ನೂ ಖಚಿತವಾಗಿಲ್ಲ. ಈ ಬಗ್ಗೆ ಪೊಲೀಸರು ಎಫ್ಐಆರ್ ದಾಖಲಿಸಿಕೊಂಡು ತನಿಖೆಗೆ ಮುಂದಾಗಿದ್ದಾರೆ. ಶರಣಾಗತಿ ವೇಳೆ ಶಸಾ್ತ್ರಸ್ತ್ರ ಹಸ್ತಾಂತರವಾಗದ ಬಗ್ಗೆ ಚರ್ಚೆಯಾಗಿತ್ತು. ಈ ಹಿನ್ನೆಲೆಯಲ್ಲಿ ಕೊಪ್ಪ ಠಾಣೆ ಇನ್್ಸಪೆಕ್ಟರ್ ಮಂಜುನಾಥ್ ನೇತೃತ್ವದ ತಂಡ ಎರಡು ದಿನಗಳಿಂದ ಹುಡುಕಾಟ ನಡೆಸಿ ಶಸಾ್ತ್ರಸ್ತ್ರಗಳನ್ನು ಪತ್ತೆಹಚ್ಚಿದೆ. ನಕ್ಸಲರು ಕೊನೆಯ ಬಾರಿಗೆ ಸಭೆ ನಡೆಸಿದ್ದ ಸ್ಥಳದಲ್ಲೇ ಶಸಾ್ತ್ರಸ್ತ್ರಗಳು ಪತ್ತೆಯಾಗಿವೆ ಎಂದು ಮೂಲಗಳು ತಿಳಿಸಿವೆ.
ಶರಣಾದ ಎಲ್ಲಾ 6 ಮಂದಿ ನಕ್ಸಲರಿಗೆ ಸಿಎಂ ಸಿದ್ದರಾಮಯ್ಯ ಗುಲಾಬಿ ಹೂವು ಹಾಗೂ ಸಂವಿಧಾನದ ಪ್ರತಿ ನೀಡಿ ಸ್ವಾಗತಿಸಿದರು. ಆದರೆ ಶರಣಾದ ನಕ್ಸಲರು ಯಾವುದೇ ಶಸಾ್ತ್ರಸ್ತ್ರಗಳನ್ನು ಒಪ್ಪಿಸಿರಲಿಲ್ಲ, ಹಾಗಾಗಿ ಅವರ ಶಸಾ್ತ್ರಸ್ತ್ರ ಎಲ್ಲಿ ಎನ್ನುವ ಪ್ರಶ್ನೆ ಸಾಕಷ್ಟು ಕುತೂಹಲಕ್ಕೆ ಕಾರಣವಾಗಿತ್ತು. ಇದೀಗ ಆ ಎಲ್ಲ ಕುತೂಹಲಕ್ಕೆ ತೆರೆ ಬಿದ್ದಿದೆ. ಪೊಲೀಸರು 6 ಮಂದಿ ನಕ್ಸಲರನ್ನು ರಾಷ್ಟ್ರೀಯ ತನಿಖಾ ದಳದ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸುವ ಮೊದಲು ಶಸಾ್ತ್ರಸ್ತ್ರಗಳ ಬಗ್ಗೆ ಮಾಹಿತಿಯನ್ನು ಪಡೆದುಕೊಂಡಿದ್ದರು. ಕೆಲವರು ಶಸಾ್ತ್ರಸ್ತ್ರಗಳನ್ನು ಅರಣ್ಯದ ರಹಸ್ಯ ಸ್ಥಳದಲ್ಲಿ ಅಡಗಿಸಿ ಇಟ್ಟಿರುವುದಾಗಿ ತಿಳಿದುಬಂದಿತ್ತು. ಈ ಸ್ಥಳಗಳ ಮಾಹಿತಿ ಪೊಲೀಸರಿಗೆ ಇರಲಿಲ್ಲ. ಹೀಗಾಗಿ ಪೊಲೀಸರು ಬಾಡಿ ವಾರಂಟ್ ಪಡೆದು ಅವರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದ ಬಳಿಕ ಶಸಾ್ತ್ರಸ್ತ್ರ ವಶಕ್ಕೆ ಪಡೆಯಲಿದ್ದಾರೆ ಎನ್ನಲಾಗಿತ್ತು.
ಶಸಾ್ತ್ರಸ್ತ್ರ ಪತ್ತೆಯಾದ ವಿಚಾರವಾಗಿ ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ.ರವಿ ಮಾತನಾಡಿ, ಶರಣಾಗತಿಯಾದವರು ಶಸಾ್ತ್ರಸ್ತ್ರಗಳ ಬಗ್ಗೆ ಸಮಗ್ರ ಮಾಹಿತಿ ಪೊಲೀಸರಿಗೆ ನೀಡಬೇಕು. ನಕ್ಸಲರು ಮಾಹಿತಿ ನೀಡದಿದ್ದರೆ ಸರ್ಕಾರ ಯಾಕೆ ಪ್ಯಾಕೇಜ್ ಕೊಡುತ್ತಿದೆ? ಶರಣಾಗತಿಯಾದ ನಕ್ಸಲರಿಗೆ ಬಂದೂಕು, ಗುಂಡು ನೀಡಿದ್ದು ಯಾರು? ಎಲ್ಲಾ ಮಾಹಿತಿ ನೀಡಿದರೆ ಮಾತ್ರ ಶರಣಾಗತಿ ಪ್ಯಾಕೇಜ್ಗೆ ಅರ್ಥವಿರುತ್ತದೆ. ತನಿಖೆಗೆ ಪೂರ್ಣ ಸಹಕಾರ ನೀಡಿದರೆ ಮಾತ್ರ ಪ್ಯಾಕೇಜ್ ನೀಡಬೇಕು ಎಂದು ಹೇಳಿದರು.
ಶರಣಾಗತಿಯಾದ ನಕ್ಸಲರು ಪೊಲೀಸ್ ತನಿಖೆಗೆ ಸಹಕಾರ ನೀಡಬೇಕು. ಪೊಲೀಸರು, ಯೋಧರು, ಸಾರ್ವಜನಿಕರನ್ನು ನಕ್ಸಲರು ಕೊಂದಿದ್ದಾರೆ. ನಕ್ಸಲರಿಗೆ ಸಹಕಾರ ನೀಡಿದ್ದು ಯಾರು ಎಂದು ಮಾಹಿತಿ ನೀಡಬೇಕು. ನಕ್ಸಲರದ್ದು ಅಪಾಯಕಾರಿ ಸಿದ್ಧಾಂತವಾಗಿದೆ. ಒಂದು ತಂತ್ರಗಾರಿಕೆ ಭಾಗವಾಗಿ ನಕ್ಸಲರು ಶರಣಾಗಿದ್ದಾರೆ ಎನಿಸುತ್ತದೆ. ಆರೂ ಮಂದಿ ನಕ್ಸಲ್ ಸಿದ್ಧಾಂತದಿಂದ ಹೊರಬಂದ ಬಗ್ಗೆ ಖಚಿತವಾಗಬೇಕು. ಕೇವಲ ಐಸೋಲೇಟೆಡ್ ಆಗಿ ನಾಲ್ಕು ಜನರಿಗೆ ಸೀಮಿತವಾಗಬಾರದು. ಇದರ ಹಿಂದೆ ಯಾರಿದ್ದಾರೆ ಎಂದು ಎನ್ಐಎ ತನಿಖೆ ಮಾಡಬೇಕು ಎಂದರು.
ಪರಪ್ಪನ ಅಗ್ರಹಾರದಲ್ಲಿ ನಕ್ಸಲರು :
ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಗೃಹ ಸಚಿವ ಜಿ.ಪರಮೇಶ್ವರ ಅವರ ಎದುರು ಬುಧವಾರ ರಾತ್ರಿ ಶರಣಾದ ನಕ್ಸಲರಾದ ಮುಂಡಗಾರು ಲತಾ, ಸುಂದರಿ ಕುತ್ಲೂರು, ವನಜಾಕ್ಷಿ ಬಾಳೆಹೊಳೆ, ಟಿ.ಎನ್.ಜಿಶಾ, ಕೆ.ವಸಂತ್, ಮಾರೆಪ್ಪ ಅರೋಲಿ ಅವರನ್ನು ಕೋರ್ಟ್ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಡಿವೈಎಸ್ಪಿ ಬಾಲಾಜಿ ಸಿಂಗ್ ಅವರ ನೇತ್ವತ್ವದಲ್ಲಿ ಗುರುವಾರ ನಗರದದಲ್ಲಿರುವ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರು ಪಡಿಸಲಾಗಿತ್ತು. ನ್ಯಾಯಾಲಯವು ಆರು ಮಂದಿಯನ್ನು ಜನವರಿ 30ರವರೆಗೆ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿ ಆದೇಶ ನೀಡಿತ್ತು. ನಂತರ ಪೊಲೀಸರು 6 ಮಂದಿ ನಕ್ಸಲರನ್ನು ಬಿಗಿ ಭದ್ರತೆ ನಡುವೆ ಗುರುವಾರ ರಾತ್ರಿ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹಕ್ಕೆ ಬಿಟ್ಟು ಬಂದಿದ್ದಾರೆ. ಆರು ಮಂದಿ ನಕ್ಸಲರ ವಿರುದ್ಧವೂ ಕಾನೂನು ಬಾಹಿರ ಚಟುವಟಿಕೆಗಳ ನಿಯಂತ್ರಣ ಕಾಯ್ದೆ(ಯುಎಪಿಎ) ಅಡಿ ಪ್ರಕರಣ ದಾಖಲಾಗಿದೆ. ಹೀಗಾಗಿ ಎನ್ಐಎ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು.
ಯಾವೆಲ್ಲ ಶಸ್ತ್ರಾಸ್ತ್ರ ಪತ್ತೆ :
ಏ.ಕೆ 56 – 1
303 ರೈಫಲ್ – 3
12 ಬೋರ್ ಎಸ್ ಬಿಬಿಎಲ್ – 01
ಕಂಟ್ರಿ ಮೇಡ್ ಪಿಸ್ತೂಲ್ – 1
6 ಬಂದೂಕು ಸೇರಿದಂತೆ ಹಲವು ಶಸ್ತ್ರಾಸ್ತ್ರ ಗಳು ಪತ್ತೆಯಾಗಿವೆ.