Thursday, September 19, 2024
Homeರಾಜ್ಯಪಿಎಸ್‌‍ಐ ಪರುಶುರಾಮ್‌ ಶಂಕಾಸ್ಪದ ಸಾವು : ಸಿಬಿಐ ತನಿಖೆಗೆ ಆಗ್ರಹ

ಪಿಎಸ್‌‍ಐ ಪರುಶುರಾಮ್‌ ಶಂಕಾಸ್ಪದ ಸಾವು : ಸಿಬಿಐ ತನಿಖೆಗೆ ಆಗ್ರಹ

ಬೆಂಗಳೂರು,ಆ.5- ಯಾದಗಿರಿ ಪಿಎಸ್‌‍ಐ ಪರುಶುರಾಮ್‌ ಶಂಕಾಸ್ಪದ ಸಾವು ಕುರಿತು ಸಿಬಿಐ ತನಿಖೆಗೆ ವಹಿಸುವಂತೆ ಅಂಬೇಡ್ಕರ್
ಮಾನವ ಹಕ್ಕುಗಳ ಕ್ರಾಂತಿಸೇನೆ ಆಗ್ರಹಿಸಿದೆ. ಪತ್ರಿಕಾಗೋಷ್ಠಿಯಲ್ಲಿ ಅಂಬೇಡ್ಕರ್‌ ಮಾನವ ಹಕ್ಕುಗಳ ಕ್ರಾಂತಿ ಸೇನೆ ರಾಜ್ಯಾಧ್ಯಕ್ಷರಾದ ಕ್ರಾಂತಿರಾಜು ಮಾತನಾಡಿ, ಸ್ವಾತಂತ್ರ್ಯ ಬಂದ 77 ವರ್ಷಗಳು ಕಳೆದರೂ ಇಂದಿಗೂ ಸಹ ದಲಿತರ ಮೇಲೆ ಜಾತಿನಿಂದನೆ, ದೌರ್ಜನ್ಯ ನಡೆಯುತ್ತಿದೆ. ಇತ್ತಿಚೇಗೆ ರಾಜ್ಯದಲ್ಲಿ ದಲಿತ ಸಮುದಾಯದ ಅಧಿಕಾರಿಗಳು ಭ್ರಷ್ಟಚಾರದ ವಿರುದ್ಧ ಸೆಣೆಸಲು ಆಗದೇ ಸಾವಿಗೆ ಶರಣುಗಾತ್ತಿದ್ದಾರೆ.

ಯಾದಗಿರಿ ಪೊಲೀಸ್‌‍ ಠಾಣೆ ಪಿಎಸ್‌‍ಐ ಪರುಶುರಾಮ್‌ ಶಂಕಸ್ಪಾದ ಸಾವು ಸಂಭವಿಸಿದ ಕಾರಣ ಕುರಿತು ಪರುಶುರಾಮ್‌ ರವರ ಪತ್ನಿ ಶ್ವೇತ್ರಾ ರವರು ಶಾಸಕರಾದ ಚನ್ನಾರೆಡ್ಡಿ ಪಾಟೀಲ್‌ ಮತ್ತು ಆತನ ಪುತ್ರ 30 ಲಕ್ಷ ರೂ. ಲಂಚ ಬೇಡಿಕೆ ಹಾಗೂ ಜಾತಿ ನಿಂದನೆ ಮಾಡಿರುವುದರಿಂದ ಮಾನಸಿಕ ಖಿನ್ನತೆಗೆ ಒಳಗಾಗಿ ಪರುಶುರಾಮ್‌ ರವರು ಸಾವಿಗೀಡಾಗಿದ್ದಾರೆ ಎಂದು ಹೇಳಿದ್ದಾರೆ. ಶಾಸಕರ ಮತ್ತು ಮಗನ ಮೊಬೈಲ್‌ ಕಾಲ್‌ ರೆಕಾರ್ಡ್‌ ಮತ್ತು ಸಿ.ಸಿ.ಕ್ಯಾಮರ ಪರಿಶೀಲನೆ ಮಾಡಿ ತನಿಖೆ ಮಾಡಬೇಕು ಎಂದರು.

ರಾಜ್ಯದಲ್ಲಿರುವ ನಿಷ್ಟಾವಂತ ದಲಿತ ಸಮುದಾಯದ ಅಧಿಕಾರಿಗಳ ಮೇಲೆ ಕಿರುಕುಳ, ದೌರ್ಜನ್ಯ ನಡೆಯುತ್ತಿದೆ.ಲಂಚ, ಭ್ರಷ್ಟಚಾರ ತಾಂಡವವಾಡುತ್ತಿದೆ. ಪ್ರತಿ ಹ್ದುೆಗೆ ವರ್ಗಾವಣೆಗೆ ಇಂತಿಷ್ಟು ಲಂಚ ಫಿಕ್‌್ಸ ಮಾಡಿದ್ದಾರೆ. ಇಂತಹ ಸಂದರ್ಭದಲ್ಲಿ ನಿಷ್ಟಾವಂತ, ಪ್ರಾಮಾಣಿಕ ಅಧಿಕಾರಿಗಳು ಕೆಲಸ ಮಾಡಲು ಎಂದು ಪ್ರಶ್ನಿಸಿದರು.

ಕೊಡಲೆ ಶಾಸಕರು ಹಾಗ್ತೂ ಅವರ ಪುತ್ರನ ವಿರುದ್ಧ ಕ್ರಮಕೈಗೊಳ್ಳಬೇಕು ಇಲ್ಲದೇ ಹೋದರೆ ಮುಂದಿನ ವಾರ ಪೊಲೀಸ್‌‍ ಮಹಾನಿರ್ದೇಶಕರ ಕಛೇರಿ ಮುಂಭಾಗದಲ್ಲಿ ಸಾವಿರಾರು ಸಂಖ್ಯೆಯಲ್ಲಿ ದಲಿತ ಸಮುದಾಯ ಮುಖಂಡರು, ಚಿಂತಕರು, ಕನ್ನಡ ಪರ ಹೋರಾಟಗಾರರು ಪ್ರತಿಭಟನೆ ಮಾಡಲಾಗುವುದು ಎಂದು ಎಚ್ಚರಿಸಿದರು. ಪಿಎಸ್‌‍ಐ ಪರುಶುರಾಮ್‌ ಶಂಕಾಸ್ಪದ ಸಾವಿಗೆ ನ್ಯಾಯ ಸಿಗಬೇಕು ಎಂದರೆ ಮುಖ್ಯಮಂತ್ರಿಗಳು ಸಿಬಿಐ ತನಿಖೆಗೆ ವಹಿಸಬೇಕು ಎಂದು ಆಗ್ರಹಿಸಿದರು

ಕರ್ನಾಟಕ ರಾಜ್ಯ ಛಲವಾದಿ ಕ್ಷೇಮಾಭಿವೃದ್ಧಿ ಸಂಘದ ರಾಜ್ಯಾಧ್ಯಕ್ಷರಾದ ಚಿದರಹಳ್ಳಿ ಮಹಾದೇವಸ್ವಾಮಿ ಮತ್ತು ಪರಿಶಿಷ್ಟ ಜಾತಿ/ಪರಿಶಿಷ್ಟ ವರ್ಗಗಳ ದೌರ್ಜನ್ಯ ನಿಯಂತ್ರಣ ಸಮಿತಿ ವಿ.ಗಿರಿಕುಮಾರ್‌, ಹಿರಿಯ ಹೋರಾಟಗಾರರಾದ ಉಮಾಶಂಕರ್‌, ಕಾರ್ಮಿಕರ ಒಕ್ಕೂಟದ ಅಧ್ಯಕ್ಷರಾದ ಬಿ.ದೇವರಾಜ್‌ ಮಾಧ್ಯಮಗೋಷ್ಟಿಯಲ್ಲಿ ಭಾಗವಹಿಸಿದ್ದರು.

RELATED ARTICLES

Latest News